Site icon Vistara News

BBK Season 10: ನಮ್ರತಾ ಕಣ್ಣೀರಿಗೆ ʻಬಿಗ್‌ ಬಾಸ್‌ʼ ಕಾರಣವಾದ್ರಾ? ಕುಟುಂಬದ ಏಳು ಬೀಳು ನೆನೆದ ಸ್ಪರ್ಧಿ!

namratha gowda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ನಮ್ರತಾ ಗೌಡ (Namratha gowda) ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ದೊಡ್ಮನೆಗೆ ಹೋದಾಗಿನಿಂದ ಟಾಸ್ಕ್‌ಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪ್ರೇಕ್ಷಕರಿಗೂ ಇಷ್ಟವಾಗುತ್ತಿದ್ದಾರೆ. ಇದೀಗ ನಮ್ರತಾ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಇಶಾನಿ ಜತೆ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ. ಬಿಗ್‌ ಬಾಸ್‌ಗೆ ಬರುವ ಮುಂಚೆಯೂ ನಮ್ರತಾ ಅವರು ಅದೆಷ್ಟೋ ಬಾರಿ ಸಂದರ್ಶನಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಜೀವನದಲ್ಲಿ ತಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂತಲೂ ಹೇಳಿಕೊಂಡಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಕುಟುಂಬದ ಏಳು ಬೀಳು ನೆನೆದು ಕಣ್ಣೀರಾದರು ನಮ್ರತಾ.

ಈ ಬಾರಿಯ ಬಿಗ್ ಬಾಸ್‌ನಲ್ಲಿ ನಮ್ರತಾ ಹಾಗೂ ಇಶಾನಿ ನಡುವೆ ಆ ಬಾಂಧವ್ಯ ಬೆಳೆದಿದೆ. ಇದೀಗ ನಮ್ರತಾ ತಮ್ಮ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ. ʻʻನಾನು ಹುಟ್ಟಿದಾಗ ನನ್ನ ಅಜ್ಜಿ ಕೋಮಾಗೆ ಹೋಗಿದ್ದರಂತೆ. ಹೆಣ್ಣು ಮುಗು ಹುಟ್ಟಿತು ಎಂದು ಅವರಿಗೆಲ್ಲ ಬೇಸರ ಇತ್ತಂತೆ. ಊಟ ಕೂಡ ಕೊಡದಂತೆ ಎತ್ತಿ ಇಡುತ್ತಾ ಇದ್ದರಂತೆ. ನಾನು ಹುಟ್ಟಿದ್ದಕ್ಕೆ ಅಪ್ಪ ಅಮ್ಮನಿಗೂ ಕಷ್ಟ ಆಯ್ತು. ನಾನು ಕೂಡ ಚೆನ್ನಾಗಿ ಓದುತ್ತೀನಿ. ಚೆನ್ನಾಗಿ ಡ್ಯಾನ್ಸ್‌ ಮಾಡುತ್ತೀನಿ. ಆದರೂ ಯಾಕೆ ಹೀಗೆ ಮಾಡ್ತಾರೆ ಅಂತ ಅನಿಸ್ತಿತ್ತು. ನನಗೆ ಈ ರೀತಿ ಸಂಭಾಷಣೆ ನಡೆಸೋಕೆ ಇಷ್ಟ ಇಲ್ಲ. ನನಗೆ ಅಪ್ಪ-ಅಮ್ಮ ಒಂದು ದಿನವೂ ಹಸಿದ ಹೊಟ್ಟೆಯಲ್ಲಿ ಮಲಗಿಸಿಲ್ಲʼʼ ಎಂದು ತಂದೆ ತಾಯಿಯನ್ನು ನೆನೆದು ಕಣ್ಣೀರಿಟ್ಟರು.

ಅಷ್ಟೇ ಅಲ್ಲದೇ ʻನನ್ನ ತಂದೆ-ತಾಯಿಯನ್ನು ನೋಡಿಕೊಳ್ಳಲು ಹಗಲು ರಾತ್ರಿ ದುಡಿದಿದ್ದೇನೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ನನಗೆ ಇವೆಲ್ಲವೂ ತಲೆಗೆ ಹೋಗಬಾರದು ಎಂದು ನನ್ನ ತಂದೆ ತಾಯಿ ಡ್ಯಾನ್ಸ್‌, ಕರಾಟೆ ಹೀಗೆ ಬೇರೆ ಬೇರೆ ಕ್ಲಾಸ್‌ಗೆ ಹಾಕಿದರು. ಹೀಗೆ ನನ್ನನ್ನು ಬ್ಯುಸಿ ಮಾಡಿದ್ರು. ನಾನು ಚಿತ್ರರಂಗದಲ್ಲಿದ್ದೇನೆ, ಬೋಲ್ಡ್, ಆ ಥರ ಬಟ್ಟೆ ಹಾಕ್ತೀನಿ ಅಂತೆಲ್ಲ ಅವರು ಹೇಳಿದ್ದರು” ಎಂದು ನಟಿ ನಮ್ರತಾ ಗೌಡ ಹೇಳಿದ್ದಾರೆ. ಇತ್ತೀಚೆಗೆ ನಮ್ರತಾ ಅವರು ಹೊಸ ಮನೆ ಖರೀದಿ ಮಾಡಿದ್ದು ಗೃಹ ಪ್ರವೇಶ ಮಾಡಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಭಾಗಿಯಾಗಿದ್ದರು.

ಇದನ್ನೂ ಓದಿ: BBK Season 10: ಜೈಲು ಸೇರಿದ ಭಾಗ್ಯಶ್ರೀ; ಸೀರೆಯುಟ್ಟಿದ್ದೇ ತಪ್ಪಾಯ್ತಾ? ನನಗೇನು ವಯಸ್ಸಾಗಿಲ್ಲ ಎಂದು ಕಣ್ಣೀರು!

ನಮ್ರತಾ ನೋವಿಗೆ ಬಿಗ್‌ ಬಾಸ್‌ ಕಾರಣ!

ಈ ಎಲ್ಲ ನೋವುಗಳನ್ನು ಹೇಳಿಕೊಂಡ ಬಳಿಕ ನಮ್ರತಾ ಅವರು ಇಶಾನಿ ಬಳಿ ʻʻಯಾರಾದರೂ ಆಡಿಕೊಂಡರೆ ಅವರ ಮುಂದೆ ಚೆನ್ನಾಗಿ ಇರಬೇಕೆಂದು ಪಣ ತೊಟ್ಟೆ. ಅದಕ್ಕಾಗಿಯೇ ಹಗಲು ರಾತ್ರಿ ದುಡಿಯುತ್ತಿದ್ದೀನಿ. ಹೊರಗೆ ಇದ್ದರೆ ಯೋಚನೆ ಮಾಡುವುದಕ್ಕೂ ಸಮಯ ಇರಲ್ಲ. ಕೆಲಸದಲ್ಲಿಯೇ‌ ಬ್ಯುಸಿ ಆಗಿ‌ ಬಿಡುತ್ತೀವಿ. ಆದರೆ ಇಲ್ಲಿ ಒಳಗೆ ಇದ್ದೇವೆ. ಹಲವು ಯೋಚನೆಗಳು ಬರುತ್ತವೆʼʼ ಎಂದರು.

Exit mobile version