Site icon Vistara News

Namratha Gowda: ವೃದ್ಧಾಶ್ರಮಕ್ಕೆ ನಮ್ರತಾ ಪೋಷಕರು ಸಹಾಯ ಹಸ್ತ; ವೋಟ್‌ಗೋಸ್ಕರ ಡ್ರಾಮ ಅಂದ್ರು ನೆಟ್ಟಿಗರು!

namratha parents helped the Janasnehi orphanage

ಬೆಂಗಳೂರು: ʻಬಿಗ್‌ ಬಾಸ್‌ ಸೀನ್‌ 10ʼ ಈಗಾಗಲೇ ಫಿನಾಲೆ ಹಂತಕ್ಕೆ ಕೆಲವೇ ದಿನಗಳಲ್ಲಿ ತಲುಪಲಿದೆ. ಸಂಗೀತಾ ಅವರು ನೇರವಾಗಿ ಟಿಕೆಟ್‌ ಪಡೆದುಕೊಂಡಿದ್ದಾರೆ. ಇನ್ನು ತುಕಾಲಿ ಸಂತೋಷ್‌, ವರ್ತೂರ್‌, ವಿನಯ್‌, ಕಾರ್ತಿಕ್‌, ನಮ್ರತಾ ಗೌಡ, ಪ್ರತಾಪ್‌ ಮನೆಯಲ್ಲಿ ಉಳಿದಿದ್ದಾರೆ. ಈಗಾಗಲೇ ತನಿಷಾ ಅವರು ಮನೆಯಿಂದ ಔಟ್‌ ಆಗಿದ್ದಾರೆ. ನಮ್ರತಾ ಮತ್ತು ತುಕಾಲಿ ಹೊರಗೆ ಬರುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಇದೀಗ ದಿಢೀರನೆ ವೋಟ್‌ಗಾಗಿ ನಮ್ರತಾ ಗೌಡ (Namratha Gowda) ಫ್ಯಾಮಿಲಿ ಜನಸೇವೆಗೆ ನಿಂತಿದ್ದಾರೆ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಟೀಕೆ ಶುರುವಾಗಿದ್ದೇಕೆ?

ʻಜನಸ್ನೇಹಿʼ ಆಶ್ರಮಕ್ಕೆ ನಮ್ರತಾ ಗೌಡ ಅವರ ಅಪ್ಪ-ಅಮ್ಮ ಭೇಟಿ ನೀಡಿ ಒಂದು ಹೊತ್ತಿನ ಊಟಕ್ಕೆ ಬೇಕಾದ ಸಹಾಯವನ್ನು ಮಾಡಿ ಬಂದಿದ್ದಾರೆ. ಆಶ್ರಮಕ್ಕೆ ಭೇಟಿ ಕೊಟ್ಟ ನಮ್ರತಾ ಅಪ್ಪ-ಅಮ್ಮ, ಅಲ್ಲಿರುವ ದೇವರಿಗೆ ಪೂಜೆ ಮಾಡಿದ್ದಾರೆ. ಬಳಿಕ ಆಶ್ರಮದಲ್ಲಿರುವ ಎಲ್ಲಾ ಹಿರಿಯರನ್ನು ಮಾತನಾಡಿಸಿ, ಅವರಿಂದ ಆಶೀರ್ವಾದ ಪಡೆದಿದ್ದಾರೆ. ಆಶ್ರಮದಲ್ಲಿ ದೊಡ್ಡ ಬ್ಯಾನರ್ ಒಂದನ್ನು ಹಿಡಿದುಕೊಂಡು ನಮ್ರತಾಗೆ ಸಪೋರ್ಟ್ ಮಾಡಿದ್ದಾರೆ. ನಮ್ರತಾ ಅಭಿಮಾನಿ ಬಳಗದಿಂದ ಅನ್ನ ದಾಸೋಹ ಎಂಬ ಬ್ಯಾನರ್ ಹಾಕಿದ್ದಾರೆ‌. ಈ ಫೋಟೊಗಳು ಸೋಷಿಯಲ್‌ ಮೀಡಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: BBK SEASON 10: ಬೆಡ್‌ಶೀಟ್‌ ವಿಚಾರ; ರಕ್ಷಕ್‌ಗೆ ಮಕ್ಕಳ ತರ ಆಡಬೇಡಿ ಎಂದ ಪ್ರತಾಪ್‌!

ಇದೀಗ ಈ ಫೋಟೊ ಹಾಗೂ ವಿಡಿಯೊ ಕಂಡು ನೆಟ್ಟಿಗರು ʻವೋಟ್‌ಗಾಗಿ ಇದೆಲ್ಲ ಗಿಮಿಕ್‌, ಇದೆಲ್ಲ ಡ್ರಾಮಾʼ ಎಂದು ಕಮೆಂಟ್‌ ಮಾಡಿದ್ದಾರೆ. ʻವಿನ್‌ ಆಗಬೇಕು ಅಂತ ಏನೆಲ್ಲ ಮಾಡ್ತಾರಪ್ಪʼ ! ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻವೋಟ್ ಬೇಕು ಎಂದು ಈ ಸಾಹಸ, ಈಗ ಆಶ್ರಮಗಳು ನೆನಪು ಆಗಿದೆʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಈ ವಾರ ನಾಮಿನೇಟ್‌ ಆದ ನಮ್ರತಾ

ಈ ವಾರ ನಮ್ರತಾ ನಾಮಿನೇಟ್‌ ಕೂಡ ಆಗಿದ್ದಾರೆ. ಸ್ನೇಹಿತ್‌ ಮನೆಯಯೊಳಗೆ ಬಂದಿದ್ದು, ಅವರ ಮಾತುಗಳನ್ನು ಕೇಳಿ ನಮ್ರತಾ ಕಣ್ಣೀರು ಸುರಿಸಿದ್ದಾರೆ. ಅಷ್ಟೇ ಅಲ್ಲ ʻʻನೀವು ನನಗೆ ಡೀಮೋಟಿವೇಟ್ ಮಾಡಿದ್ರಿ. ಆಚೆ ಹೋದ್ಮೇಲೆ ನಿಮ್ಮ ಬಳಿ ನಾನು ಮಾತನಾಡುವುದಿಲ್ಲ. ಆಚೆ ಹೋದ್ಮೇಲೆ ನಿಮ್ಮ ಯಾರ ಮುಖವನ್ನೂ ನಾನು ನೋಡಲ್ಲ’’ ಎಂದು ಸ್ನೇಹಿತ್‌ಗೆ ನಮ್ರತಾ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version