ಬೆಂಗಳೂರು: ಬಿಗ್ ಬಾಸ್ (BBK Season 10) ಮನೆಯಲ್ಲಿ ನಮ್ರತಾ ಹಾಗೂ ತನಿಷಾ ನಡುವೆ ಮೊದಲ ವಾರದಿಂದಲೂ ಮಾತಿನ ಚಕಮಕಿ ಆಗುತ್ತಲೇ ಇರುತ್ತದೆ. ಈ ಬಾರಿ ಬಿಗ್ ಬಾಸ್ ‘ಗಲ್ಲಿ ಕ್ರಿಕೆಟ್’ ಟಾಸ್ಕ್ ನೀಡಿತ್ತು. ಇದರ ಅನುಸಾರ ಎರಡು ತಂಡಗಳಿಗೆ ಅಂದರೆ ಭಜರಂಗಿ ಹಾಗೂ ಉಗ್ರಂ ತಂಡಗಳಿಗೆ ಈ ಟಾಸ್ಕ್ ನೀಡಿತ್ತು. ಎರಡೂ ತಂಡಗಳು ಮೂರು ಓವರ್‌ಗಳಲ್ಲಿ ಕ್ರಿಕೆಟ್ ಆಡಬೇಕಿತ್ತು. ಎರಡೂ ತಂಡದಿಂದ ತಲಾ ಒಬ್ಬರು ಅಂಪೈರ್ ಆಗಬೇಕಿತ್ತು. ‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್ ಆಗಿದ್ದರು. ಈ ಮಧ್ಯೆ ಫೇರ್ ಗೇಮ್ ಆಡಿ ಎಂದು ನಮ್ರತಾ ಅವರು ತನಿಷಾಗೆ ಹೇಳಿದ್ದೇ ತಡ, ಇಬ್ಬರ ಮಧ್ಯೆ ಜಗಳ ತಾರರಕ್ಕೇರಿತ್ತು. ಅಷ್ಟೇ ಅಲ್ಲದೇ ಇಬ್ಬರ ಜಗಳ ಇಂದು ಕೂಡ ಮುಂದುವರಿದಿದೆ.
ಆಟ ಶುರುವಾಗುತ್ತಿದ್ದಂತೆ ನಮ್ರತಾ ಅವರು ತನಿಷಾ ಅವರಿಗೆ ʻʻಆಟ ಫೇರ್ ಆಗಿರಲಿ ಎಂದಿದ್ದಾರೆʼʼ. ಅಲ್ಲಿಂದ ತನಿಷಾ ಅವರ ಕೋಪ ನೆತ್ತಿಗೇರಿತ್ತು. ತನಿಷಾ ಅವರು ನಮ್ರತಾ ಅವರಿಗೆ ʻʻಎಕ್ಸ್‌ಕ್ಯೂಸ್ ಮೀ.. ನಿಮ್ಮ ಡಿಸಿಷನ್ ಫೇರ್ ಆಗಿದ್ದರೆ ತುಂಬಾ ಒಳ್ಳೆಯದ್ದು. ಈ ರೀತಿ ಮಾತನಾಡಿದರೆ ಚೆನ್ನಾಗಿರಲ್ಲ. ನಾನು ಎಂಟರ್ ಆಗ್ತಿದ್ದಂತೆ ತಪ್ಪು ತಪ್ಪಾಗಿ ಮಾತನಾಡಬೇಡಿ. ಇದು ಎಂಟರ್‌ಟೇನ್ಮೆಂಟ್ ಗೇಮ್. ನಾನೇನೋ ತಪ್ಪು ಮಾಡಿದ್ದರೆ ಪರ್ವಾಗಿಲ್ಲ.ನಿಮ್ಮ ಹತ್ತಿರ ಅನ್ನಿಸಿಕೊಳ್ಳಲು ಬಂದಿಲ್ಲ ಇಲ್ಲಿ. ಇದು ನಾನ್ ಸೆನ್ಸ್. ಎಂಟರ್‌ಟೇನ್ಮೆಂಟ್ ಗೇಮ್‌ನ ಹಾಳು ಮಾಡೋಕೆ ನಿಮ್ಮಂಥೋರು ಇರಬೇಕು ಇಲ್ಲಿʼʼಎಂದು ಕಿರುಚಾಡಿದರು. ನಮ್ರತಾ ಕೂಡ ಇಲ್ಲಿಗೆ ಸುಮ್ಮನಾಗಲಿಲ್ಲ. ʻʻನೀವು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಿ ಸ್ವಲ್ಪ.ಫೇರ್ ಆಗಿ ಆಡಿ ಅಂದಿದ್ದು ತಪ್ಪಾ?.ನಾನು ಕ್ಯಾಪ್ಟನ್.. ನಾನು ಹೇಳೇ ಹೇಳ್ತೀನಿʼʼಎಂದು ಕಿಡಿಕಾರಿದ್ದಾರೆ.
ಗೆದ್ದ ಭಜರಂಗಿ ತಂಡ
ಭಜರಂಗಿ ತಂಡವೇ ಗೆದ್ದು ಬೀಗಿತು. ಉತ್ತಮ ಬ್ಯಾಟ್ಸ್‌ಮ್ಯಾನ್ಸ್ ತುಕಾಲಿ ಸಂತುಗೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಸಹಿ ಹಾಕಿರುವ ಬ್ಯಾಟ್ ಒಲಿಯಿತು. ಉತ್ತಮ ಬೌಲರ್ ಎನಿಸಿಕೊಂಡ ಮೈಕಲ್‌ಗೆ ಸೂರ್ಯಕುಮಾರ್ ಯಾದವ್ ಸಹಿ ಹಾಕಿರುವ ಬಾಲ್ ಸಿಕ್ಕಿತು.
ಇದನ್ನೂ ಓದಿ: BBK Season 10: ಮತ್ತಷ್ಟು ಮನಸ್ತಾಪಗಳಿಗೆ ನಾಂದಿ ಹಾಡ್ತು ಉತ್ತಮ-ಕಳಪೆ; ನೀತು ಮನೆಯ ಕ್ಯಾಪ್ಟನ್!
‘ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ’’ ಎಂದ ನಮ್ರತಾ
ಇಷ್ಟಾದ ಮೇಲೆಯೂ ತನಿಷಾ ಹಾಗೂ ನಮ್ರತಾ ವೈಮನಸ್ಸು ಮುಗಿದಿರಲಿಲ್ಲ. ಮತ್ತೆ ನಮ್ರತಾ ಅವರು ವಿನಯ್ ಮುಂದೆ ʻʻನಾನು ಏನೂ ಹೇಳಿಲ್ಲ ನಾನು ಹೇಳಿದ್ದು ‘ಈ ಗೇಮ್‌ನ ಫೇರ್ ಆಗಿ ಆಡೋಣ’ ಅಂತ ಅಷ್ಟೇ ಎಂದು ಹೇಳಿದರು. ನಮ್ರತಾ ಅವರು ವಿನಯ್ ಜತೆ ʻʻ’ತನಿಷಾಗೆ ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳಿದುಬಿಡು ಒಂದ್ಸಲಿʼʼಎಂದು ಟಾಂಟ್ ಕೊಟ್ಟರು. ಅತ್ತ ತನಿಷಾ ಕೂಡ ಸಿರಿ ಅವರ ಬಳಿ ಈ ಬಗ್ಗೆ ಚರ್ಚಿಸಿದರು. ಫೇರ್ ಆಗಿ ಆಡಿ ಅಂದ್ರೆ ನನಗೆ ಕೋಪ ಬರಲ್ವಾ? ಇವರ ಹತ್ತಿರ ಪಾಠ ಮಾಡಿಸಿಕೊಳ್ಳಲು ನಾನು ಬಂದಿದ್ದೀನಾ?ಎಂದು ಹೇಳಿದರು.
ಬಿಗ್ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.