Site icon Vistara News

BBK Season 10: ಮತ್ತಷ್ಟು ಮನಸ್ತಾಪಗಳಿಗೆ ನಾಂದಿ ಹಾಡ್ತು ಉತ್ತಮ-ಕಳಪೆ; ನೀತು ಮನೆಯ ಕ್ಯಾಪ್ಟನ್‌!

Neetu is the captain of the house BBK Season 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 3ನೇ (BBK Season 10: ) ವಾರ ನೀತು ಕ್ಯಾಪ್ಟನ್‌ ಆಗಿ ಹೊರಹೊಮ್ಮಿದರೆ, ಸ್ನೇಹಿತ್‌ ಕಳೆಪಯಾಗಿ ಜೈಲಿಗೆ ಸೇರಿದ್ದಾರೆ. ಇದರ ಜತೆಗೆ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮುನಿಸೂ ಕೂಡ ಉದ್ಭವವಾಗಿತ್ತು. ನಮ್ರತಾ ಹಾಗೂ ತನಿಷಾ ನಡುವೆ ಕಾಳಗವೂ ಆಯ್ತು.

ಕ್ಯಾಪ್ಟನ್ಸಿ ಓಟದಲ್ಲಿರುವ ನಾಲ್ಕು ಸದಸ್ಯರ ಪೈಕಿ ಈ ವಾರ ಇಬ್ಬರನ್ನು ಆಯ್ಕೆ ಮಾಡಬೇಕಿತ್ತು. ಇದರ ಅನುಸಾರ ನಾಲ್ಕು ಸದಸ್ಯರು ತಮಗೆ ಮೀಸಲಾಗಿರುವ ಡಬ್ಬದೊಳಗೆ ಡಿಸ್ಕ್‌ಗಳನ್ನು ಎಸೆಯಬೇಕು. 10 ಡಿಸ್ಕ್‌ಗಳನ್ನು ಯಾರು ಮೊದಲು ಎಸೆಯುತ್ತಾರೋ ಮೊದಲ ಇಬ್ಬರು ಅಭ್ಯರ್ಥಿಗಳು ಆಗುತ್ತಾರೆ. ಇದರಲ್ಲಿ ತನಿಷಾ ಹಾಗೂ ನೀತು ಗೆಲುವು ಪಡೆದುಕೊಂಡರು.

ಇನ್ನೊಂದು ಟಾಸ್ಕ್‌ನಲ್ಲಿ ಆರಂಭಿಕ ಸ್ಥಾನದಲ್ಲಿರುವ ಒಂದು ಚೆಂಡನ್ನು ಕೋಲಲ್ಲಿರುವ ಚೆಂಡನ್ನು ಮುಂದೆ ಸರಿಯುತ್ತ ಅಂತಿಮ ಸ್ಥಾನ ಗೆರೆ ದಾಟುವಂತೆ ನೋಡಿಕೊಳ್ಳಬೇಕು. ಮನೆಯ ಉಳಿದ ಸದಸ್ಯರು ಮಾತಿನ ಮೂಲಕ ಏಕಾಗ್ರತೆ ತಪ್ಪಿಸುವ ಕೆಲಸ ಮಾಡಬಹುದಿತ್ತು. ಈ ಚೆಂಡಿನ ಟಾಸ್ಕ್‌ನಲ್ಲಿ ನೀತು ಅವರು ಗೆದ್ದು, ಈ ವಾರದ ಮನೆಯ ಕ್ಯಾಪ್ಟನ್‌ ಆದರು.

ಇದನ್ನೂ ಓದಿ: BBK Season 10: ಎರಡನೇ ವಾರ ರಕ್ಷಕ್‌ ಬುಲೆಟ್‌ಗೆ ಕ್ಯಾಪ್ಟನ್‌ ಪಟ್ಟ; ಫೇಲಾದ ಸ್ನೇಹಿತ್!

ಕಳಪೆ ಪಟ್ಟ ಪಡೆದು ಜೈಲಿಗೆ ಸೇರಿದ ಸ್ನೇಹಿತ್‌

ಈ ವಾರ ಉತ್ತಮ ಪ್ರದರ್ಶನಕರಾಗಿ ಮೈಕಲ್‌, ನೀತು ಅವರು ಹೊರಹೊಮ್ಮಿದರು. ವಿನಯ್‌ ಅವರು ನಮ್ರತಾ ಅವರಿಗೆ ಉತ್ತಮ ನೀಡಿದರು. ಕಳಪೆಯನ್ನು ತನಿಷಾ ಅವರಿಗೆ ನೀಡಿದರು. ಟಾಸ್ಕ್‌ನಲ್ಲಿ ಕನ್‌ಫ್ಯೂಸ್‌ ಮಾಡ್ತಾರೆ. ಸೌಂಡ್‌ ಮನೆಯಲ್ಲಿ ಜಾಸ್ತಿ ಎಂದು ಕಳಪೆ ನೀಡಿದರು. ನಮ್ರತಾ ಅವರು ಕಾರ್ತಿಕ್‌ ಅವರಿಗೆ ಉತ್ತಮ ನೀಡಿದರು. ಕಳಪೆಯನ್ನು ತನಿಷಾ ಅವರಿಗೆ ನೀಡಿದರು. ನಮ್ರತಾ ಕೂಡ ತನಿಷಾ ಅವರ ಟಾಸ್ಕ್‌ ಬಗ್ಗೆ ಹೇಳಿದರು.

ಸಂಗೀತಾ ಅವರು ಉತ್ತಮವನ್ನು ನೀತು ಅವರಿಗೆ ನೀಡಿದರು. ಕಳಪೆಯನ್ನು ಸ್ನೇಹಿತ್‌ ಅವರಿಗೆ ನೀಡಿದರು. ರಕ್ಷಕ್‌ ಅವರು ಉತ್ತಮವನ್ನು ಕಾರ್ತಿಕ್‌ ಅವರಿಗೆ ನೀಡಿದರು. ಕಳಪೆಯನ್ನು ತನಿಷಾ ಅವರಿಗೆ ನೀಡಿದರು. ಸಿರಿ ಅವರು ಸ್ನೇಹಿತ್‌ ಅವರಿಗೆ ಕಳಪೆಯನ್ನು ನೀಡಿದರು. ಉತ್ತಮವನ್ನು ಕಾರ್ತಿಕ್‌ ಅವರಿಗೆ ನೀಡಿದರು. ಇಶಾನಿ ಅವರು ಉತ್ತಮವನ್ನು ನೀತು ಅವರಿಗೆ ನೀಡಿದರು. ಕಳಪೆಯನ್ನು ಪ್ರತಾಪ್‌ ಅವರಿಗೆ ನೀಡಿದರು. ಕಾರ್ತಿಕ್‌ ಅವರು ಉತ್ತಮವನ್ನು ಮೈಕಲ್‌ ಅವರಿಗೆ ನೀಡಿದರು. ಕಳಪೆಯನ್ನು ಸ್ನೇಹಿತ್‌ ಅವರಿಗೆ ನೀಡಿದರು.

ತನಿಷಾ ಅವರು ಉತ್ತಮವನ್ನು ನೀತು ಅವರಿಗೆ ನೀಡಿದರು. ಕಳಪೆಯನ್ನು ರಕ್ಷಕ್‌ ಅವರಿಗೆ ನೀಡಿದರು. ಸ್ನೇಹಿತ್‌ ಅವರು ಉತ್ತಮವನ್ನು ಮೈಕಲ್‌ ನೀಡಿದರು,. ಕಳಪೆಯನ್ನು ಸಿರಿಯವರಿಗೆ ನೀಡಿದರು. ಭಾಗ್ಯಶ್ರೀ ಅವರು ಉತ್ತಮ ನೀತು ಹಾಗೂ ಕಳಪೆಯನ್ನು ಸ್ನೇಹಿತ್‌ಗೆ ನೀಡಿದರು, ಡ್ರೋನ್‌ ಪ್ರತಾಪ್‌ ಉತ್ತಮವನ್ನು ಮೈಕಲ್‌ಗೆ ನೀಡಿದರೆ ಕಳಪೆಯನ್ನು ರಕ್ಷಕ್‌ಗೆ ನೀಡಿದರು. ತುಕಾಲಿ ಸಂತು ಉತ್ತಮವನ್ನು ಮೈಕಲ್‌ ನೀಡಿದರು. ಕಳಪೆಯನ್ನು ಪ್ರತಾಪ್‌ಗೆ ನೀಡಿದರು. ಮೈಕಲ್‌ ಅವರು ಉತ್ತಮವನ್ನು ತನಿಷಾ ಅವರಿಗೆ ನೀಡಿದರು. ಕಳಪೆಯನ್ನು ವಿನಯ್‌ ಅವರಿಗೆ ನೀಡಿದರು. ನೀತು ಅವರು ಉತ್ತಮ ತನಿಷಾ ಅವರಿಗೆ ನೀಡಿದರು. ಕಳಪೆಯನ್ನು ಸ್ನೇಹಿತ್‌ ಅವರಿಗೆ ನೀಡಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version