Site icon Vistara News

BBK Season 10: ಹೆಣ್ತನ ಒಪ್ಪಿಕೊಳ್ಳಲು, ಒಪ್ಪಿಸಲು ಪಟ್ಟ ಪಾಡು ನೆನೆದು ಕಣ್ಣೀರಿಟ್ಟ ನೀತು!

Nithu Vaanjaksshi crying

ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ (BBK Season 10) ಟ್ರಾನ್ಸ್ ಜೆಂಡರ್‌ ನೀತು ವನಜಾಕ್ಷಿ (Nithu Vaanjaksshi) ಕಾಲಿಟ್ಟಿದ್ದಾರೆ. ಆರಂಭದಿಂದಲೂ ಚೆನ್ನಾಗಿ ಆಡಿಕೊಂಡು ಕೂಡ ಬಂದಿದ್ದಾರೆ. ಆದರೀಗ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಸಿರಿ ಮತ್ತು ಭಾಗ್ಯಶ್ರೀ ಮುಂದೆ ಹೇಳಿಕೊಂಡು ಅತ್ತರು.

ʼಮಿಸ್​ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ಪಟ್ಟ ಗೆದ್ದ ನೀತು ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್‌. ಸಂಚಾರಿ ವಿಜಯ್‌ ಅವರ ‘ನಾನು ಅವನಲ್ಲ ಅವಳು’ ಸಿನಿಮಾ ಬಹುತೇಕರು ನೋಡಿರಬಹುದು. ಅದರಲ್ಲಿ ಪುರುಷ ವ್ಯಕ್ತಿ ಮಹಿಳೆಯಾಗಿ ಬದಲಾಗುವಾಗ ಯಾವೆಲ್ಲ ಸಂಗತಿಗಳನ್ನು ಎದುರಿಸುತ್ತಾನೆ ಎಂಬುದು ಚೆನ್ನಾಗಿ ತೋರಿಸಿದ್ದರು ವಿಜಯ್‌. ಅದೇ ರೀತಿ ನೀತು ಕೂಡ ತಾವು ಏನೆಲ್ಲ ಸಮಸ್ಯೆಗಳನ್ನು ಎದುರಿಸಿದ್ದೆ ಎಂಬುದನ್ನು ಹೇಳಿಕೊಂಡರು.

ಹಳೆಯ ಘಟನೆ  ನೆನೆದ ನೀತು

ನೀತು ಮಾತನಾಡಿ ʻʻನಾನು ಅಕ್ಕನ ಬಟ್ಟೆಯಲ್ಲ ಹಾಕಿಕೊಳ್ಳುತ್ತಿದ್ದೆ. ಕಾಜಲ್‌ ಹಚ್ಚಿಕೊಳ್ಳುತ್ತಿದ್ದೆ. ನಾನು ಮೊದಲು ನಾನಾಗೇ ಇರಲಿಲ್ಲ. ನಿತ್ಯವೂ ಅಳುತ್ತಿದ್ದೆ. ಹುಡುಗರು ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನನಗೆ ಆ ಫೀಲ್ ಬರುತ್ತಲೇ ಇರಲಿಲ್ಲ. ಹುಡುಗರ ನೋಡಿ ನಾನು ಆಕರ್ಷಿತನಾಗುತ್ತಿದ್ದೆ. ಮೊದಲು ನಾನು ಗೇ ಎಂದುಕೊಂಡಿದ್ದೆ ನಾನು ಏಳನೇ ತರಗತಿಯಲ್ಲಿ ಇದ್ದಾಗ ನಾನು ಹುಡುಗ ಅಲ್ಲ ಎನ್ನುವ ವಿಚಾರ ಗೊತ್ತಾಗುವುದಕ್ಕೆ ಶುರುವಾಯ್ತು. ಪ್ಯಾಂಟ್‌ ಹಾಕಿಕೊಳ್ಳುವಾಗ, ನಾರ್ಮನಲ್‌ ಜೀವನ ನನಗೆ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಅನ್ನಿಸಲು ಶುರುವಾಯ್ತುʼʼಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ: BBK Season 10: ಮನೆ ಒಳಗೆ ಪ್ರವೇಶಿಸಿದ ‘ಮಿಸ್​ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ನೀತು

‘ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ನೀತು ಗುರುತಿಸಿಕೊಂಡಿದ್ದರು. ನೀತು ವನಜಾಕ್ಷಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರದಲ್ಲೂ ಅಭಿನಯಿಸಿದ್ದಾರೆ. ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ʻಗಮ ಗಮ’ ಎನ್ನುವ ಹೊಟೇಲ್ ಉದ್ಯಮಿಯೂ ಆಗಿದ್ದಾರೆ. ಮಾಡಲ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಚೆನ್ನಾಗಿ ಆಟ ವಾಡುತ್ತಿದ್ದಾರೆ. ಕೆಲವು ಸದಸ್ಯರು ನೀತು ಅವರನ್ನು ನಾಮಿನೇಟ್‌ ಕೂಡ ಮಾಡಿದ್ದಾರೆ. ಇನ್ನೂ ಎಲ್ಲರ ಜತೆ ಬೆರೆಯಬೇಕು ಎಂದು ಹಲವರು ಕಾರಣ ತಿಳಿಸಿದರು. ಬಿಗ್‌ಬಾಸ್‌ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿ ವೀಕ್ಷಿಸಿ.

Exit mobile version