ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10) ಸ್ನೇಕ್ ಶ್ಯಾಮ್ ಮನೆಯಿಂದ ಹೊರಬಿದ್ದಿದ್ದಾಗಿದೆ. ಇದೀಗ ಎರಡನೇ ವಾರ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಎದ್ದ ಕೂಡಲೇ ತಾವು ಕುಳಿತಲ್ಲೇ ಈ ಮನೆಯಲ್ಲಿ ಇರಲು ಅರ್ಹರಲ್ಲದ ಸದಸ್ಯರನ್ನು ತಿಳಿಸಬೇಕಿತ್ತು. ಸ್ಪರ್ಧಿಗಳು ನಾಮಿನೇಟ್ ಆದ ಕೂಡಲೇ ಮನೆಯಲ್ಲಿ ಸದಸ್ಯರ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ.
ಅದರಲ್ಲಿ ಗೌರೀಶ್ ಅಕ್ಕಿ ಅವರು ಸಿರಿ ಅವರನ್ನು, ನೀತು ಅವರು ಭಾಗ್ಯಶ್ರೀ ಅವರನ್ನು, ಸಂಗೀತಾ ಅವರು ತುಕಾಲಿ ಸಂತೋಷ್ ಅವರನ್ನು, ಸಂತು ಅವರು ಸಂಗೀತಾ ಅವರನ್ನು, ಕ್ಯಾಪ್ಟನ್ ಸ್ನೇಹಿತ್ ಅವರು ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದರು. ಇದಾದ ಕೂಡಲೇ ಸಂಗೀತಾ ಮತ್ತು ತುಕಾಲಿ, ಕಾರ್ತಿಕ್ ಹಾಗೂ ಸ್ನೇಹಿತ್ ನಡುವೆ ದೊಡ್ಡ ವಾರ್ ನಡೆದು ಹೋಯಿತು.
ಸಂಗೀತಾ ಅವರು ಕಾರಣವನ್ನು ತಿಳಿಸಿ ʻʻತುಕಾಲಿ ಅವರ ಮಾತುಗಳಿಂದ ನನಗೆ ಬೇಜಾರಾಗಿದೆʼʼ ಎಂದು ನಾಮಿನೇಟ್ ಮಾಡಿದರು. ಸಂಗೀತಾ ಅವರನ್ನೇ ತುಕಾಲಿ ಮತ್ತೆ ನಾಮಿನೇಟ್ ಮಾಡಿದ ಕಾರಣ ಸಂಗೀತಾ ಅವರು ʻʻನಾನು ನಿಮ್ಮನ್ನು ನಾಮಿನೇಟ್ ಮಾಡಿದ ಕಾರಣಕ್ಕೆ ನಾಮಿನೇಟ್ ಮಾಡಿದ್ದೀರಾʼʼಎಂದು ಹೇಳಿದರು. ಇದಕ್ಕೆ ತುಕಾಲಿ ಪ್ರತಿಕ್ರಿಯಿಸಿ ʻಯಾವುದು ನೆಗೆಟಿವ್ ಎನ್ನುವುದು ಇದ್ದೇ ಇರುತ್ತೋ ಅಲ್ಲಿ ರಿವೇಂಜ್ ಇದ್ದೇ ಇರತ್ತೆʼʼ ಎಂದರು.
ಇದನ್ನೂ ಓದಿ: BBK Season 10 : ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ನೇಕ್ ಶ್ಯಾಮ್
ಕಲರ್ಸ್ ಕನ್ನಡ ಹೊಸ ಪ್ರೋಮೊ
ಸ್ನೇಹಿತ್ ಅವರು ಕಾರ್ತಿಕ್ ಅವರು ಟೊಮೆಟೋ ಕತ್ತರಿಸಿ ಗೊತ್ತಿಲ್ಲದೇ ತಿಂದಿರುವ ಬಗ್ಗೆ ಕಾರಣವನ್ನು ತಿಳಿಸಿ ನಾಮಿನೇಟ್ ಮಾಡಿದರು. ಇದಕ್ಕೆ ಕಾರ್ತಿಕ್ ಅವರು ಸಖತ್ ಆಗಿ ಕ್ಲಾಸ್ ತೆಗೆದುಕೊಂಡರು. ʻʻಟೊಮ್ಯಾಟೊ ಕಟ್ ಮಾಡಬಾರದೆಂದು ಮಾತ್ರ ರೂಲ್ಸ್ ಇದೆ. ತಿನ್ನಬಾರದು ಎಂಬ ರೂಲ್ಸ್ ಇಲ್ಲ. ನಾಮಿನೇಟ್ ಮಾಡುವುದು ಸಣ್ಣ ವಿಷಯವಲ್ಲ. ನೀನು ಕ್ಯಾಪ್ಟನ್ ಆಗಲು ಫಿಟ್ ಇಲ್ಲʼʼಎಂದು ಕೂಗಾಡಿದ್ದಾರೆ.
ಇದೀಗ ಕಲರ್ಸ್ ಕನ್ನಡ ಈ ಪ್ರೋಮೊ ಹಂಚಿಕೊಂಡಿದ್ದು ʻʻಡ್ರೋನ್ ಪ್ರತಾಪ್ ಫ್ಯಾನ್ಸ್ ಹಿಟ್ʼʼಎಂದು ಕಮೆಂಟ್ ಮಾಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತ ಸರಿಯಾಗಿ ಹೇಳಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಡ್ರೋನ್ ಪ್ರತಾಪ ಗೆಲ್ಲುತ್ತಾರೆ ಬಿಡುತ್ತಾರೆ ನನಗೆ ಗೊತ್ತಿಲ್ಲ ಆದರೆ ಟಾಪ್ 2 ಅಲ್ಲಿ ಇರ್ಬೇಕು ಅಷ್ಟೇʼʼಎಂದು ಕಮೆಂಟ್ ಮಾಡಿದ್ದಾರೆ. ʻʻಜಗಳ ಮಾಡ್ಬಾರದು ಅಂತಿರಾ. ಎಲ್ಲರ ಸಮ್ಮುಖದಲ್ಲೇ ಜಗಳ ಹಚ್ತಿರಾ..? ಎಲ್ಲಾ ಬಿಗ್ ಬಾಸ್ ಮಹಿಮೆʼʼಎಂದು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಪ್ರತಿ ದಿನ ರಾತ್ರಿ 9.30 ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ವೀಕ್ಷಿಸಬಹುದು.