ಬೆಂಗಳೂರು; 105 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ನಂತರ ಬಿಗ್ ಬಾಸ್ 7 (Bigg Boss Telugu 7) ಡಿ. 17ರಂದು ಅದ್ಧೂರಿಯಾಗಿ ಕೊನೆಗೊಂಡಿತು. ರೈತ ಮಗನಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇನ್ನು, ಅಮರ್ ದೀಪ್ ಎರಡನೇ ಸ್ಥಾನಕ್ಕೆ ಬಂದು ರನ್ನರ್ ಅಪ್ ಆಗಿದ್ದಾರೆ.
ಕೃಷಿ ಹಿನ್ನೆಲೆಯಿಂದ ಬಂದಿರುವ ಪಲ್ಲವಿ ಪ್ರಶಾಂತ್ ಯೂಟ್ಯೂಬರ್ ಆಗಿ ಸಾಕಷ್ಟು ಜನಪ್ರಿಯರಾಗಿದ್ದರು. ನಂತರ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು.ಸೆಪ್ಟೆಂಬರ್ 3 ರಂದು ತೆಲುಗು ಬಿಗ್ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರು. ಬಿಗ್ ಬಾಸ್ ತೆಲುಗು ಸೀಸನ್ 7 ರ ಗ್ರ್ಯಾಂಡ್ ಫಿನಾಲೆ ಸಂಚಿಕೆ ಭಾನುವಾರ ಪ್ರಸಾರವಾಯಿತು. ಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿದೆ. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿದೆ. ಶಿವಾಜಿ ಎಲಿಮಿನೇಷನ್ ಎಂದು ಹೇಳಿದಾಗಲೇ ಪಲ್ಲವಿ ಪ್ರಶಾಂತ್ ಕಣ್ಣೀರಿಟ್ಟಿದ್ದಾರೆ. ಅಳು ತಡೆಯದೆ ಶಿವಾಜಿಯ ಕಾಲಿಗೆ ಬಿದಿದ್ದಾರೆ.
ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್!
ಪಲ್ಲವಿ ಪ್ರಶಾಂತ್ ಬಿಗ್ ಬಾಸ್ 7 ತೆಲುಗು ಮನೆಗೆ ಜನ ಸಾಮಾನ್ಯನಾಗಿ ಪ್ರವೇಶಿಸಿದ್ದಾರೆ. ಆದರೆ, ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲೇ ಸೋಶಿಯಲ್ ಮಿಡಿಯಾದಲ್ಲಿ ‘ರೈತರ ಮಗ’ (ರೈತು ಬಿಡ್ಡಾ) ಎಂದು ಫೇಮಸ್ ಆಗಿದ್ದರು. ಈ ಯುವ ರೈತ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್ 7 ತೆಲುಗು ಸೀಸನ್ನ ವಿನ್ನರ್ ಆಗಿದ್ದಕ್ಕಾಗಿ, ಪಲ್ಲವಿ ಪ್ರಶಾಂತ್ ರೂ 35 ಲಕ್ಷ ನಗದು ಬಹುಮಾನವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಅಮರ್ದೀಪ್, ಪ್ರಶಾಂತ್, ಅರ್ಜುನ್, ಶಿವಾಜಿ, ಯವರ್, ಪ್ರಿಯಾಂಕಾ ಅವರುಗಳು ಫೈನಲ್ಗೆ ಬಂದಿದ್ದರು. ಇವರಲ್ಲಿ ಒಬ್ಬರು ಆರಂಭದಲ್ಲಿಯೇ ಎಲಿಮಿನೇಟ್ ಆಗಿದ್ದರು. ಹಿರಿಯ ನಟ ಶಿವಾಜಿ ಸಹ ಈ ಬಾರಿ ಗೆಲ್ಲುವ ಸ್ಪರ್ಧಿ ಎನ್ನಲಾಗಿತ್ತು. ಬಿಗ್ಬಾಸ್ನ ಅತ್ಯುತ್ತಮ ಕ್ಯಾಪ್ಟನ್ ಎಂದೂ ಅನ್ನಿಸಿಕೊಂಡಿದ್ದರು.