Site icon Vistara News

BBK Season 10: ನಮ್ರತಾಗೆ ʻಚಮಚಾಗಿರಿʼ ಅಂದ್ರಾ ನೀತು? ʻಪಾಪರೆಡ್ಡಿಪಾಳ್ಯʼ ಪ್ಲ್ಯಾನ್‌ ಉಲ್ಟಾ ಆಗೋಯ್ತು!

Papareddipalya plan backfired neethu blast In bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ನೀತು ಹಾಗೂ ಇಶಾನಿ ಕಳಪೆ ಪಟ್ಟ ಅಲಂಕರಿಸಿ ಜೈಲು ಸೇರಿದ್ದಾರೆ. ಇದಾದ ಬಳಿಕ ನಮ್ರತಾಗೆ ಪರೋಕ್ಷವಾಗಿ ನೀತು ಅವರು ಚಮಚಾಗಿರಿ, ದಾದಾಗಿರಿ ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೇ ವಿನಯ್‌ ಟೀಂಗೂ ನೀತು ಸಖತ್‌ ಆಗಿಯೇ ಮಾತು ಕೊಟ್ಟರು. ಇಷ್ಟಾದರೂ ವಿನಯ್‌ ಟೀಂ ಗ್ರೂಪಿಸಂ ಮಾತ್ರ ಇನ್ನು ಬಿಟ್ಟಿಲ್ಲ. ತಾವೆಲ್ಲಾ ಸೇಫ್ ಆಗಿ ಫಿನಾಲೆ ತಲುಪಬಹುದು ಎಂದು ಪ್ಲಾನ್ ಮಾಡಿದ್ದವರಿಗೆ ‘ಬಿಗ್ ಬಾಸ್‌’ ಸಖತ್‌ ಆಗಿಯೇ ಆಟ ಕೂಡ ಆಡಿಸುತ್ತಿದ್ದಾರೆ.

‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಲ್ಲಿ ನಮ್ರತಾ, ವಿನಯ್‌, ಸ್ನೇಹಿತ್‌, ಇಶಾನಿ ಪ್ರಮುಖರು. ಇವರ ಗ್ರೂಪಿಸಂ ಬಗ್ಗೆ ಕಳೆದ ಸಂಚಿಕೆಯಲ್ಲಿಯೇ ಸುದೀಪ್‌ ಮಾತನಾಡಿದ್ದರು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಈ ಟೀಂ ಕೆಲವು ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಲೇ ಇರುತ್ತದೆ. ಆದರೆ ಈ ಬಾರಿ ಈ ಗ್ಯಾಂಗ್‌ಗೆ ಪ್ಲ್ಯಾನ್‌ ಉಲ್ಟಾ ಹೊಡೆದಿದೆ. ಅಷ್ಟೇ ಅಲ್ಲದೇ ಕಳಪೆ ಆದ ಬಳಿಕ ನೀತು ಕೂಡ ಪರೋಕ್ಷವಾಗಿ ಚಮಚಾಗಿರಿ, ದಾದಾಗಿರಿ ಎಂದು ವ್ಯಂಗ್ಯವಾಡಿದ್ದಾರೆ.

ನಮ್ರತಾ ಹಾಗೂ ನೀತು ನಡುವೆ ಕಳೆದ ಸಂಚಿಕೆಯಲ್ಲಿ ವಾರ್‌ ಕೂಡ ಆಯ್ತು. ನಮ್ರತಾ ಅವರು ನೀತು ಅವರಿಗೆ ಕಳಪೆ ವೋಟ್‌ ನೀಡಿದರು. ಜೈಲಿಗೆ ಹೋಗುವ ಮುನ್ನ ನೀತು ಅವರು ಮಾತಿನಲ್ಲಿಯೇ ನಮ್ರತಾ ಅವರಿಗೆ ತಿರುಗೇಟು ನೀಡಿದರು. ನೀತು ಗರಂ ಆಗಿ ʻʻಧನ್ಯವಾದ ವಿನಯ್‌. ನೀವೆಲ್ಲರೂ ಚರ್ಚಿಸಿ ನನಗೆ ಕಳಪೆ ನೀಡಿದ್ದಕ್ಕೆʼʼ ಎಂದರು. ಇದಕ್ಕೆ ನಮ್ರತಾ ಗರಂ ಆಗಿ ʻʻಡಿಸ್ಕಶನ್‌ ಮಾಡೋದು ನೀವು ನಾವಲ್ಲʼʼಎಂದರು. ನೀತು ಮಾತನಾಡಿ ʻʻನಂಗೆ ಅನ್ನಿಸಿದ್ದು ನಾನು ಹೇಳಿದೆʼʼಎಂದು ಜೈಲು ಹತ್ತಿರ ನೀತು ಚಮಚಾಗಿರಿ, ದಾದಾಗಿರಿ ಎಂದು ಹೇಳಿದರು. ನಮ್ರತಾ ಆಗ ಕೋಪಗೊಂಡು ʻʻನೀವು ಏನೇ ಅಂದರೂ ನಾನು ತಲೆ ಕೆಡಸಿಕೊಳಲ್ಲʼʼ ಎಂದಿದ್ದಾರೆ. ನೀತು ಕೂಡ ʻʻನೀವು ತುಂಬಾ ಒಳ್ಳೆಯವರುʼʼಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಈ ವಾರದ ʻಉತ್ತಮʼ ಪ್ರತಾಪ್; ಜೈಲು ಸೇರಿದ ಇಶಾನಿ, ನೀತು!

ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ ಪ್ಲ್ಯಾನ್‌ ಉಲ್ಟಾ

ಕಳೆದ ವಾರ ವಿನಯ್‌ ಗ್ಯಾಂಗ್‌ ಮಾತನಾಡಿಕೊಂಡು ಕಳಪೆಯನ್ನು ಸಂಗೀತಾ ಅವರಿಗೆ ನೀಡಿದರು. ಈ ವಾರ ನಾಮಿನೇಷನ್‌ನಲ್ಲಿ ಸಂಗೀತಾ ಫಿಕ್ಸ್ ಅಂತ ನಮ್ರತಾ ಬಳಿ ವಿನಯ್ ಗೌಡ ಓಪನ್ ಆಗಿಯೇ ಹೇಳಿದ್ದರು.ಸಂಗೀತಾ ಅವರನ್ನ ನಮ್ರತಾ, ಇಶಾನಿ ನಾಮಿನೇಟ್ ಮಾಡಿದರು. ಆದರೆ ಬಿಗ್‌ ಬಾಸ್‌ ಮಾಸ್ಟರ್‌ ಪ್ಲ್ಯಾನ್‌ನಿಂದ ವಿನಯ್‌ ಮಾಡಿರುವ ಪ್ಲ್ಯಾನ್‌ ಮಣ್ಣು ಪಾಲಾಯ್ತು.

ಈ ವಾರ ಆಡುವ ಟಾಸ್ಕ್‌ ನಾಮಿನೇಶನ್‌ ಮೇಲೆ ಪ್ರಭಾವ ಬೀರುತ್ತದೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಅದರಂತೆ ಪ್ರತಾಪ್‌ ಅವರು ಪ್ರತಿ ಬಾರಿ ಟಾಸ್ಕ್‌ನಲ್ಲಿ ವಿನ್‌ ಅದಾಗ ಭಾಗ್ಯಶ್ರೀ, ತನಿಷಾ, ಸಂಗೀತಾ ಅವರನ್ನು ನಾಮಿನೇಶನ್‌ನಿಂದ ಪಾರು ಮಾಡಿದರು. ಅದರೆ ವಿನಯ್‌ ಟೀಂನವರಾದ ಸ್ನೇಹಿತ್‌ ಅವರನ್ನು ನಾಮಿನೇಶನ್‌ನಿಂದ ನಿರ್ಬಂಧಿಸಿ ಅಂದರೆ ನಾಮಿನೇಶನ್‌ನಿಂದ ಪಾರಾಗದಂತೆ ಮಾಡಿದರು. ಹೀಗಾಗಿ ಭಾಗ್ಯಶ್ರೀ ಈ ವಾರ ಮನೆಯಿಂದ ಹೊರಗೆ ಹೋಗುವುದು ಖಚಿತ ಎಂದು ಭಾವಿಸಿದ್ದ ವಿನಯ್‌ ಟೀಂಗೆ , ಬಳಿಕ ಆಗಿದ್ದೇ ಬೇರೆ. ಭಾಗ್ಯಶ್ರೀ ಸೇಫ್‌ ಆದರು. ಸ್ನೇಹಿತ್‌ ನಾಮಿನೇಟ್‌ ಆದರು.

ಇದನ್ನೂ ಓದಿ; BBK Season 10: ಕ್ಯಾಪ್ಟನ್‌ ಆದ ಮೈಕಲ್‌; ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

ಇತ್ತ ವಿನಯ್‌ ಟೀಂ ಅಂದರೆ ‘ವಜ್ರಕಾಯ’ ತಂಡ ಗೆಲುವು ಪಡೆಯಲಿಲ್ಲ. ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನ ಯಾರೊಬ್ಬರೂ ಸೇಫ್ ಆಗಲಿಲ್ಲ. ಈ ವಾರ ಇದೇ ಗ್ಯಾಂಗ್‌ನಲ್ಲಿ ಯಾರಾದರೂ ಹೊರಗೆ ಹೋಗೋದು ಖಚಿತ ಎನ್ನುತ್ತಿದ್ದಾರೆ ಪ್ರೇಕ್ಷಕರು. ಈ ರೀತಿ ಗ್ರೂಪಿಸಂ ಮಾಡಿಕೊಂಡು ಆಡುವ ರೀತಿ ಬಿಗ್‌ ಬಾಸ್‌ಗೆ ತಿಳಿಯುತ್ತಿಲ್ಲ ಅಂದುಕೊಂಡ್ರಾ ಗ್ಯಾಂಗ್‌?ಫಿಕ್ಸಿಂಗ್ ಗೇಮ್ ಆಡಿದ್ದರ ಪರಿಣಾಮ ‘ಬಿಗ್ ಬಾಸ್‌’ ಈ ಟ್ವಿಸ್ಟ್‌ ಕೊಟ್ಟಿದ್ದಾರೆ ಎನ್ನುವ ಅರಿವು ಈ ಗ್ಯಾಂಗ್‌ಗೆ ಅರಿವಾಗಬೇಕಿದೆ ಅಂತಿದ್ದಾರೆ ನೆಟ್ಟಿಗರು.

ಈ ವಾರ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್, ನೀತು, ಇಶಾನಿ ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version