ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ OTT 3 ನಿಂದ ಎಲಿಮಿನೇಟ್ ಆದ ವಾರಗಳ ನಂತರ, ಪಾಯಲ್ ಮಲಿಕ್ (Payal Malik ) ಪತಿ ಅರ್ಮಾನ್ ಮಲಿಕ್‌ಗೆ (Armaan Malik) ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಅರ್ಮಾನ್ ಮಲಿಕ್ ಬಿಗ್ ಬಾಸ್ OTT 3 ಸೀಸನ್ ನ ಸ್ಪರ್ಧಿ ಆಗಿದ್ದು. ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 3ರ ಮೊದಲ ವಾರವೇ ಪಾಯಲ್ ಎಲಿಮಿನೇಟ್ ಆಗಿದ್ದಾರೆ. ಈಗ ಅರ್ಮಾನ್ ತನ್ನ ಎರಡನೇ ಪತ್ನಿ ಕೃತಿಕಾ ಅವರೊಂದಿಗೆ ಶೋನಲ್ಲಿದ್ದಾರೆ. ‘ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನನ್ನ ಬಗ್ಗೆ ಇದ್ದಷ್ಟು ದಿನ ಚೆನ್ನಾಗಿಯೇ ಇದ್ದೆ. ಆದರೆ ಈಗ ಈ ದ್ವೇಷ ನನ್ನ ಮಕ್ಕಳಿಗೂ ತಲುಪುತ್ತಿದೆ. ಇದು ಕೀಳು ಮಟ್ಟದಾಗಿದೆ ಎಂದು ಪಾಯಲ್ ಹೇಳಿದ್ದಾರೆ.
“ನಾನು ಈ ನಾಟಕ ಮತ್ತು ದ್ವೇಷದಿಂದ ಬೇಸತ್ತಿದ್ದೇನೆ. ನಾನು ಟ್ರೋಲ್ ಆಗುವವರೆಗೂ ಅದು ಚೆನ್ನಾಗಿತ್ತು. ಆದರೆ ಈಗ ನನ್ನ ಮಕ್ಕಳೂ ಟ್ರೋಲ್ ಆಗುತ್ತಿದ್ದಾರೆ. ಇದೇ ಕಾರಣಕ್ಕೆ ಅರ್ಮಾನ್‌ನಿಂದ ಬೇರೆಯಾಗಲು ನಿರ್ಧರಿಸಿದ್ದೇನೆ. ಅವರು ಈಗ ಅವನು ಕೃತಿಕಾ ಜೊತೆ ಬದುಕಬಹುದು ಮತ್ತು ನಾನು ನನ್ನ ಮಕ್ಕಳನ್ನು ನೋಡಿಕೊಳ್ತೇನೆ” ಎಂದಿದ್ದಾರೆ.
“ಒಂದೋ ನಾವು ಮೂವರೂ ಬೇರ್ಪಡುತ್ತೇವೆ, ಅಥವಾ ನಮ್ಮಲ್ಲಿ ಇಬ್ಬರು ಬೇರ್ಪಡುತ್ತೇವೆ, ಅಥವಾ ನಾನು ದೂರ ಹೋಗುತ್ತೇನೆ. . ಹೊರಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ಏನಾಗುತ್ತಿದೆ ಎಂದು ನನಗೆ ತಿಳಿದಿದೆ, ನನ್ನ ಜೀವನದಲ್ಲಿ ನಾನು ಎಂದಿಗೂ ದ್ವೇಷ, ಟ್ರೋಲಿಂಗ್ ಮತ್ತು ನಿಂದನೆಗಳನ್ನು ಎದುರಿಸಿಲ್ಲ. ನನ್ನ ನಿರ್ಧಾರ ಧೃಢವಾಗಿದೆ. ನಾನು ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅರ್ಮಾನ್ ಮತ್ತು ಕೃತಿಕಾ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅದರ ಬಗ್ಗೆ ಚರ್ಚಿಸುತ್ತೇನೆ ಎಂದು ಪಾಯಲ್ ಹೇಳಿದ್ದಾರೆ.
ಇದನ್ನೂ ಓದಿ: Chiyaan Vikram: ʻKGFʼ ಅಸಲಿ ಕಥೆ ಹೇಳಲು ಬರ್ತಾ ಇದೆ ‘ತಂಗಲಾನ್’; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!
ಪಾಯಲ್ ಮತ್ತು ಆಕೆಯ ಆತ್ಮೀಯ ಸ್ನೇಹಿತೆ ಕೃತಿಕಾ ಅವರು ಅರ್ಮಾನ್ ಮಲಿಕ್ ಅವರನ್ನು ಮದುವೆಯಾಗಿದ್ದರು. : ಖ್ಯಾತ ಯುಟ್ಯೂಬರ್ ಅರ್ಮಾನ್ ಮಲಿಕ್ ಅವರು ಯುಟ್ಯೂಬ್ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ.