Site icon Vistara News

BBK Season 10: ಕಲರ್‌ಫುಲ್‌ ಮನೆಗೆ ಖಡಕ್‌ ಡೈಲಾಗ್‌ ಮೂಲಕ ಭರ್ಜರಿ ಎಂಟ್ರಿ ಕೊಟ್ರು MLA ಪ್ರದೀಪ್ ಈಶ್ವರ್!

pradeep eshwar entry to bigg boss Kannada 10

ಬೆಂಗಳೂರು: ಸಾಕಷ್ಟು ಕುತೂಹಲಗಳೊಂದಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10(BBK Season 10) ಅ.8ರಿಂದ ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್‌ ಈ ಬಾರಿ ಎದುರಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹ್ಯಾಪಿ ಬಿಗ್‌ ಬಾಸ್‌ ಕೂಡ. ಮೊದಲ ದಿನವೇ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ʻನಾವೆಲ್ಲ ಕಾಂಪೀಟ್‌ ಮಾಡ್ತಾ ಇರೋದು ಒಬ್ಬ MLA ಜತೆʼ ಎಂದು ಸ್ಪರ್ಧಿಗಳು ಸಖತ್‌ ಖುಷ್‌ ಆಗಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

ಈ ಬಾರಿ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಸೆಲೆಕ್ಟ್‌ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್‌ ತಿಳಿಸಿದರು. ಆದರೀಗ ಮೊದಲ ದಿನವೇ ಇದ್ದಕ್ಕಿದ್ದಂತೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಕೊಟ್ಟಿದ್ದಾರೆ. ಕೊಟ್ಟಿದ್ದು ಮಾತ್ರವಲ್ಲ ಅಷ್ಟೇ ಖಡಕ್‌ ಡೈಲಾಗ್‌ ಕೂಡ ಹೇಳಿದ್ದಾರೆ. ʻʻನಾನು ನಿನ್ನೆಯೇ ಬಿಗ್‌ ಬಾಸ್‌ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್‌ ಇಲ್ಲʼʼಎಂದು ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.

ಇದೀಗ ಕಮೆಂಟ್‌ ಮೂಲಕ ನೆಟ್ಟಿಗರು ಪ್ರದೀಪ್‌ ಈಶ್ವರ್‌ ಅವರಿಗೆ ʻʻಬರುವಾಗ ನಶ್ವರ , ಹೋಗುವಾಗ ನಶ್ವರ , ಬಂದು ಹೋಗುವಾಗ ನಡುವೆ ಇರಲಿ ನಮ್ಮ ಪ್ರದೀಪ್ ಈಶ್ವರ್ʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಪ್ರದೀಪ್‌ ಈಶ್ವರ ಅವರು ಸ್ಪರ್ಧಿ ಅಲ್ಲ ಬಿಡಿ. ಬಹುಶಃ ʻಮೋಟಿವೇಷನ್‌ ಸ್ಪೀಚ್‌ʼ ಕೋಡೋಕೆ ಕರೆಸಿರಬೇಕುʼʼಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ: BBK Season 10: ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ ಎಂದಿದ್ದ ಸಂಗೀತಾ ಶೃಂಗೇರಿ ಅತ್ತಿದ್ದೇಕೆ?

ಪ್ರದೀಪ್‌ ಈಶ್ವರ್‌ ಎಂಟ್ರಿ

ವೇಟಿಂಗ್‌ ಲಿಸ್ಟ್‌ನಲ್ಲಿ ಯಾರ್ಯಾರು?

ಡ್ರೋನ್‌ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ವೈಟಿಂಗ್ ಲಿಸ್ಟ್‌ನಲ್ಲಿ ಇರುವ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆದ ಕಿಚ್ಚ ಸುದೀಪ್ ವೀಕ್ಷಕರು ಆಯ್ಕೆ ಮಾಡದ ಈ ಆರು ಸ್ಪರ್ಧಿಗಳನ್ನೂ ಮನೆಗೆ ಒಳಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ಎಲ್ಲರಿಗೂ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಸೆಕೆಂಡ್ ಚಾನ್ಸ್‌ನಲ್ಲಿ ಇವರು ಆಡುವ ಆಟದ ಮೇಲೆ, ನಿಮ್ಮಲ್ಲಿ ಯಾರು ಉಳಿದುಕೊಳ್ಳಬೇಕು, ಯಾರು ಉಳಿದುಕೊಳ್ಳಬಾರದು ಎಂಬುದನ್ನು ಬಿಗ್​ಬಾಸ್ ನಿರ್ಣಯ ಮಾಡುತ್ತಾರೆ. ಹಾಗಾಗಿ ಈ ಒಂದು ವಾರ ಚೆನ್ನಾಗಿ ಆಟ ಆಡಿ ಎಂದು ಸುದೀಪ್ ಎಲ್ಲರಿಗೂ ಹೇಳಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

Exit mobile version