ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10) ಐದನೇ ವಾರ ‘ಇದು ಗೊಂಬೆ ಆಟವಯ್ಯ’ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದರು‘. ಗಂಧದ ಗುಡಿ’ ಮತ್ತು ‘ವಜ್ರಕಾಯʼ ತಂಡಗಳು ಈ ಆಟವನ್ನು ಆಡಬೇಕಿತ್ತು. ಸದಸ್ಯರು ಗೊಂಬೆಗಳಂತೆ ಕೂರಬೇಕಿತ್ತು. ಬಿಗ್ ಬಾಸ್ ಯಾವ ಭಾವನೆ ಘೋಷಿಸುತ್ತಾರೋ, ಆ ಭಾವನೆಗಳನ್ನ ಗೊಂಬೆಗಳಂತೆ ಕೂತವರಿಂದ ಎದುರಾಳಿ ತಂಡದವರು ಹೊರಗೆ ತರಿಸಬೇಕಿತ್ತು. ನಗು,ಕೋಪ, ಅಳು’ ಭಾವನೆ ಕೊಟ್ಟರು. ಅಂತಿಮವಾಗಿ ಡ್ರೋನ್ ಪ್ರತಾಪ್ರ ತಂಡವೇ ಗೆದ್ದಿತು. ಆದರೆ ಈ ಟಾಸ್ಕ್ ವೇಳೆ ಎರಡೂ ಗುಂಪುಗಳ ಮಾತಿನ ಚಕಮಕಿ ಮಿತಿ ಮೀರಿ ಹೋಗಿತ್ತು. ಬಕೆಟ್, ಬಳೆಗಳ ರಾಜ ಹಲವು ಕೆಟ್ಟ ಪದಗಳ ಜತೆಗೆ , ಸ್ಪರ್ಧಿಗಳಿಂದ ವ್ಯಕ್ತಿತ್ವದ ತೇಜೋವಧೆ ಎದ್ದು ಕಾಣುತ್ತಿತ್ತು.
ಬಕೆಟ್, ಬಳೆಗಳ ರಾಜ, ಹೀಗೆ ಹಲವು ಪದಗಳಿಂದ ನಿಂದನೆ ಕೂಡ ಇತ್ತು. ಒಬ್ಬರ ವ್ಯಕ್ತಿತ್ವದ ತೇಜೋವಧೇ ಮಾಡಿರುವುದು ಸ್ಪಷ್ಟವಾಗಿತ್ತು. ನಗು ಸುತ್ತಿನಲ್ಲಿ ಚೆನ್ನಾಗಿ ಆಟ ಆಡಿದರು ಸ್ಪರ್ಧಿಗಳು, ಕೋಪ ಸುತ್ತು ಬಂದಾಗ, ಎಲ್ಲಾ ಸ್ಪರ್ಧಿಗಳು ಬ್ಲಾಸ್ಟ್ ಆದರು. ಮೊದಲು ‘ವಜ್ರಕಾಯ’ ತಂಡ ಗೊಂಬೆಗಳಂತೆ ಕೂತರು. ಆಗ ‘ಗಂಧದ ಗುಡಿ’ ತಂಡದವರು ಮಾತು ಶುರು ಮಾಡಿದರು.
ತನಿಷಾ, ಸಂಗೀತಾ, ಕಾರ್ತಿಕ್ ಅವರು ಒಮ್ಮೆಲೆ ಸ್ನೇಹಿತ್ ಅವರನ್ನು ಅಟ್ಯಾಕ್ ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಅವರು ಸ್ನೇಹಿತ್‌ಗೆ ಬಕೆಟ್ ಎಂತಲೇ ಕೂಗಿದರು. ʻʻಇನ್ಯಾರನ್ನೋ ಮುಂದೆ ಬಿಟ್ಟು, ನೀವು ಹಿಂದೆ ನಿಂತು ಆಟವಾಡಬೇಡಿ. ಬಕೆಟ್ ಹಿಡಿದುಕೊಂಡೇ ಇದ್ದರೆ ಹಾಳಾಗಿ ಹೋಗ್ತೀರಾʼʼ ಎಂದು ಕೂಗಿದರು. ವಿನಯ್ ಹತ್ತಿರ ಸಂಗೀತಾ ಬಂದು ʻʻಬಳೆ ಹಾಕೊಂಡ್ ಬಂದಿದ್ದೀನಿʼʼ ಎಂದರು. ಕಾರ್ತಿಕ್ ಕೂಡ ವಿನಯ್‌ಗೆ ʻʻನಾನು ಬಳೆಗಳ ರಾಜ. ಗೊತ್ತಾಯ್ತಾ? ಯಾಕೆ ಅದನ್ನ ಮುಂದೆ ಹೇಳೋಕೆ ಆಗಲಿಲ್ಲ? ನಾಲ್ಕು ಗೋಡೆ ಮಧ್ಯೆ ನಾಲ್ಕು ಚೇಲಾಗಳು ಸಿಕ್ಕಿಬಿಟ್ಟರೆ, ಚೇಲಾಗಳ ಮುಂದೆ ನಾನೇ ರಾಜ, ನಾನೇ ಆನೆ.. ಇವರೆಲ್ಲಾ ನನ್ನ ಬಾಲಗಳು ಅಂತ ತೋರಿಸೋದು ಎಂದು ಹೀಯಾಳಿಸಿದರು.
ಇಶಾನಿಗೆ ಕಾರ್ತಿಕ್ ಅವರು ʻʻಇದೊಂದು ವೇಸ್ಟ್ ಕಂಟೆಸ್ಟೆಂಟ್. ನಿನ್ನ ಟ್ಯಾಲೆಂಟ್‌ನ ನೀನು ತೋರಿಸೇ ಇಲ್ಲ. ಮುಂದೊಂದು ಹಿಂದೊಂದು ಮಾತನಾಡೋದು ಅಲ್ಲʼʼಎಂದು ಚುಚ್ಚಿ ಮಾತನಾಡಿದರು. ನಮ್ರತಾಗೆ ಕಾರ್ತಿಕ್ ಅವರು ʻʻನಾವು ಮಾಡೋದು ಡ್ರಾಮಾ ಅಲ್ವಾ? ಡೈರೆಕ್ಟ್ ಆಗಿ ಹೇಳಬೇಕು.. ಹಿಂದೆ ಹೋಗಿ ಯಾಕೆ ಮಾತನಾಡಬೇಕು? ನಾನು ಬೇರೆಯವರನ್ನೆಲ್ಲಾ ಅವನು, ಅವಳು, ಹೋಗೋಲೇ, ಬಾರೋಲೇ’’ ಅಂತ ಕರೆಯಬಹುದು. ಆದರೆ, ಬೇರೆಯವರು ಕರೆದರೆ ವುಮನ್ ರೈಟ್ಸ್;ʼʼಎಂದು ಮಾತು ಕೊಟ್ಟರು.
ಇದನ್ನೂ ಓದಿ: BBK Season 10: ಮಕ್ಕಳ ವಯಸ್ಸಿನವರೊಂದಿಗೆ ನಾನ್ಯಾಕೆ ತರ್ಕ ಮಾಡ್ಲಿ? ಪ್ರತಾಪ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?
ಸ್ನೇಹಿತ್‌ಗೆ ಮತ್ತೆ ತನಿಷಾ ʻʻನಿನಗೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ವಾ? ಯಾರ್ಯಾರು ಏನೇನೋ ಮಾತನಾಡಿದರೂ, ಕಿವಿ ಬಾಯಿ ಮುಚ್ಚಿಕೊಂಡು ಕೂತಿದ್ದೀರಲ್ಲ.. ನಿಮ್ಮ ಅಪ್ಪ-ಅಮ್ಮ ನೋಡಿದರೆ ನಿಮ್ಮ ಮೇಲೆ ಇಷ್ಟಾದರೂ ಮರ್ಯಾದೆ ಇಡ್ತಾರೆ ಅಂತ ಹೇಗೆ ಅಂದುಕೊಳ್ತೀರಾ? ನಿಮ್ಮ ಅಪ್ಪ-ಅಮ್ಮನಿಗೆ ಏನೂ ಅನಿಸಲ್ಲ ಅಂತ ಅಂದುಕೊಳ್ಳುತ್ತಿದ್ದೀರಾ?ʼʼಎಂದು ಅಟ್ಯಾಕ್ ಮಾಡಿದರು. ಕಾರ್ತಿಕ್, ಸಂಗೀತಾ, ತನಿಷಾಗೂ ಕ್ಲಾಸ್ ತೆಗೆದುಕೊಂಡರು ನಮ್ರತಾ ಹಾಗೂ ಸ್ನೇಹಿತ್. ಸ್ನೇಹಿತ್ ಕಾರ್ತುಕ್‌ಗೆ ಗಂಡಸತುನತದ ಬಗ್ಗೆ ಮಾತನಾಡಿದರು. ʻʻಗಂಡಸ್ತನದ ಬಗ್ಗೆ ಮಾತನಾಡುವ ಅರ್ಹತೆನೇ ಇಲ್ಲ ನಿನಗೆ. ಗಂಡಸ್ತನ ಏನು ಮಾಡಿದ್ಯಾ.. ಇಲ್ಲಿ ಈ ಮನೆಗೆ ಬಂದು? ಅವಳ (ಸಂಗೀತಾ) ಹಿಂದೆ ಓಡಾಡಿದ್ಯಾ ಅಷ್ಟೇʼʼಎಂದು ಹೀಯಾಳಿಸಿದರು.
ತನಿಷಾಗೂ ಸ್ನೇಹಿತ್ ಅವರು ʻʻಓ ಕ್ಲಾಸ್ ಮಾನಿಟರ್. ನೀವು ಮೇಲಿದ್ದೀರಾ.. ನಾವು ಕೆಳಗೆ ಇದ್ದೀವಿ ಅಲ್ವಾ? ನೀವು ಏನು ಓದಿದ್ದೀರಾ? ಪಿಎಚ್‌ಡಿ ಮಾಡಿದ್ದೀರಾ?ʼʼಎಂದೆಲ್ಲ ಕೇಳಿದರು. ನಮ್ರತಾ ಕೂಡ ಇದಕ್ಕೆ ಸೊಪ್ಪು ಹಾಕಿದರು.
ಇದನ್ನೂ ಓದಿ: BBK Season 10: ಮಗನಿಗೆ ಬುದ್ಧಿ ಹೇಳಿ ಎಂದ ನಮ್ರತಾ; ರೊಮ್ಯಾನ್ಸ್ ನೋಡಿದ್ರೆ ತಾಯಿ ಎಂಜಾಯ್ ಮಾಡ್ತಾರಂತೆ!
ಅಳುವ ಹಂತದಲ್ಲಿ ತನಿಷಾ ಟಾಸ್ಕ್ ಮುಗಿದ ಮೇಲೆಯೂ ಕಣ್ಣೀರಿಟ್ಟರು. ಎರಡನೇ ಸುತ್ತು ಡ್ರಾ ಆಯ್ತು. ಇದು ಎರಡೂ ತಂಡಗಳಲ್ಲೂ ಅಸಮಾಧಾನ ಮೂಡಿಸಿತು. ಪ್ರತಾಪ್ ಮೇಲೆ ಅವರ ಟೀಂ ಕೂಗಾಡಿದರು. ಉಸ್ತುವಾರಿ ಕೆಲಸ ಸರಿಯಾಗಿ ಮಾಡಿಲ್ಲ ಎಂದು ಡ್ರೋನ್ ಪ್ರತಾಪ್ ವಿರುದ್ಧ ತಂಡದವರು ಬೇಸರ ಹೊರಹಾಕಿದರು.ಡ್ರೋನ್ ಪ್ರತಾಪ್ ವಾದಿಸಿದರು. ಪಾಯಿಂಟ್ಸ್ ಹಾಕಿದ್ದೀನಿ’ ಎಂದು ಫೈಲ್ ಎಸೆದು ರೊಚ್ಚಿಗೆದ್ದು ಡ್ರೋನ್ ಪ್ರತಾಪ್ ಹೊರಟರು. ಬಳಿಕ ತಂಡಕ್ಕೆ ಕ್ಷಮೆ ಕೇಳಿದರು. ಈ ನಡುವೆ ಸಿರಿ ತಂಡದವರು ಟಾಸ್ಕ್ ಅನ್ನು ಮೈಖಲ್ ಮೂಲಕ ಫಿಕ್ಸ್ ಮಾಡುವ ಆಲೋಚನೆಯನ್ನೂ ಮಾಡಿದರಾದರೂ ವಿನಯ್ ಬೇಡ ಎಂದಿದ್ದಕ್ಕೆ ಸುಮ್ಮನಾದರು.ಅಂತಿಮವಾಗಿ ಡ್ರೋನ್ ಪ್ರತಾಪ್ರ ತಂಡವೇ ಗೆದ್ದಿತು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ