Site icon Vistara News

Rakesh Adiga | ಬಿಗ್‌ ಬಾಸ್‌ನಲ್ಲಿ ಬೆಂಬಲಿಸಿದವರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದ ಸ್ಪರ್ಧಿ ರಾಕೇಶ್‌ ಅಡಿಗ!

Rakesh Adiga

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ ರನ್ನರ್‌ ಅಪ್‌ ಸ್ಪರ್ಧಿ ರಾಕೇಶ್‌ ಅಡಿಗ (Rakesh Adiga) ಇದೀಗ ಹೊಸ ಸುದ್ದಿಯೊಂದನ್ನು ಅವರ ಅಭಿಮಾನಿಗಳಿಗೆ ನೀಡಿದ್ದಾರೆ. ವೀಕ್ಷಕರ ಮನಸ್ಸನ್ನು ಗೆದ್ದಿರುವ ರಾಕೇಶ್ ಅಡಿಗ ರಿಯಲ್‌ ವಿನ್ನರ್‌ ಎಂದು ಬಿಗ್‌ ಬಾಸ್‌ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೀಗ ರಾಕೇಶ್‌ ಅಡಿಗ ಅವರ ಅಭಿಮಾನಿಗಳಿಗೆ ಫ್ಯಾನ್ಸ್ ಎನ್ನುವ ಬದಲು ಅವರನ್ನು ‘ಬ್ರದರ್‌ಹುಡ್’ ಹಾಗೂ ‘ಟ್ರೈಬ್ ಮೆಂಬರ್ಸ್’ ಎಂದು ಕರೆದರು.

ಬಿಗ್ ಬಾಸ್ ಮುಗಿದ ನಂತರ ತಮಗೆ ವೋಟ್ ಹಾಕಿದವರಿಗೆ ಕೃತಜ್ಞತೆ ಹೇಳಲು ನೇರವಾಗಿ ಭೇಟಿ ನೀಡಿ ‘ಬ್ರದರ್‌ಹುಡ್’ ಪದಕ್ಕೆ ನಿಜವಾದ ಅರ್ಥ ನೀಡಲು ನಿಶ್ಚಯಿಸಿದ್ದಾರೆ. ರಾಕೇಶ್‌ ಅಡಿಗ ಅವರನ್ನು ಭೇಟಿಯಾಗಲು ಇಚ್ಛಿಸುವವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹದು.

ಇದನ್ನೂ ಓದಿ | Bigg Boss Kannada | ಈ ವಾರ ಮನೆಯ ಕ್ಯಾಪ್ಟನ್‌ ರಾಕೇಶ್‌ ಅಡಿಗ: ತಂದೆ ಮಾತಿಗೆ ಮನೆಮಂದಿ ಫಿದಾ!

ಕಾರ್ಯಕ್ರಮ ಎಲ್ಲಿ?
ರಾಕೇಶ್ ಅವರನ್ನು ಭೇಟಿಯಾಗಲು ‘ರಾಕೇಶ್ ಟ್ರೈಬ್ ಮೀಟ್’ ಎಂಬ ಹೆಸರಿನಡಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ಜನವರಿ 8ರ ಭಾನುವಾರ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ನಡೆಯಲಿದೆ. ಬೆಂಗಳೂರಿನ ಜಯನಗರ ಒಂದನೇ ಹಂತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದ ಎರಡನೇ ಗೇಟ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ಕಾರ್ಯಕ್ರಮ ಉಚಿತ ಪ್ರವೇಶ ಇರಲಿದ್ದು, ಪ್ರವೇಶ ದರ ಇರುವುದಿಲ್ಲ. ಕಾರ್ಯಕ್ರಮದಲ್ಲಿ ರಾಕೇಶ್ ಅಡಿಗ ಅವರು ತಮ್ಮ ಟ್ರೈಬ್ ಮೆಂಬರ್ಸ್ ಜತೆ ಮಾತನಾಡಲಿದ್ದಾರೆ. ಟ್ರೈಬ್ ಮೆಂಬರ್ಸ್ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ರಾಕೇಶ್ ಅಡಿಗ ಒಂದು ಹಾಡನ್ನು ವೇದಿಕೆ ಮೇಲೆ ಹಾಡಲಿದ್ದಾರೆ.

ಇದನ್ನೂ ಓದಿ | Bigg Boss Kannada |Rakesh Adiga ಗೊಂಬೆ ಆಟದಲ್ಲಿ ರಾಕೇಶ್‌-ದೀಪಿಕಾ ವಾದ, ಪ್ರತಿವಾದ: ಚಿಕನ್ ಕನವರಿಕೆಯಲ್ಲಿ ಕಾವ್ಯಶ್ರೀ!

Exit mobile version