ಬೆಂಗಳೂರು: ‘ಬಿಗ್ ಬಾಸ್’ (BBK SEASON 10) ಮನೆಯಿಂದ ಹೊರಗೆ ಬಂದಮೇಲೆ `ರಕ್ಷಕ್ ಬುಲೆಟ್’ ಅನೇಕ ಸಂದರ್ಶನಗಳನ್ನು ನೀಡಿದ್ದರು. ಅದರಲ್ಲಿ ಅವರು ಹೇಳಿದ ಕೆಲವೊಂದು ವಿಚಾರಗಳು ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದವು. ಆ ಸಂಬಂಧ ರಕ್ಷಕ್, ಕ್ಷಮೆ ಕೋರಿ ಅದರ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಮತ್ತೆ ರಕ್ಷಕ್ ಹೊಸ ಪೋಸ್ಟ್ ಹಂಚಿಕೊಂಡು ಕ್ಷಮೆ ಕೇಳಿದ್ದಾರೆ.
ʻಎಲ್ಲರಿಗೂ ನಮಸ್ಕಾರ, ನಿಮ್ಮ ಹತ್ತಿರ ನಾನು ನನ್ನ ಮನದಾಳದ ಮಾತು ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಾನು ನಟ ಬುಲೆಟ್ ಪ್ರಕಾಶ್ ಅವರ ಮಗ. ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಡೀ ರಾಜ್ಯದ ಜನತೆ ಅವರನ್ನು ಹರಸಿ, ಹಾರೈಸಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಸಿದ್ದರು. ಅವರ ಮಗನಾಗಿ ಜನಿಸಿರುವುದು ನನ್ನ ಜನ್ಮ ಜನ್ಮಗಳ ಸುಕೃತ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ ನನಗೆ ನನ್ನ ತಂದೆ ಇಲ್ಲೇ ನನ್ನ ಜೊತೆಯೇ ಇದ್ದಾರೆಂದೇ ಈಗಲೂ ಅನಿಸುತ್ತದೆʼ.
“ಅವರಿದ್ದಾಗ ಎಂದೂ ಅವರನ್ನು ಬಿಟ್ಟು ನಾನು ಇದ್ದಿದ್ದೇ ಇಲ್ಲ. ಆ ಕಾರಣಕ್ಕೋ ಏನೋ ಅವರಲ್ಲಿರುವ ಒಂದು ಗುಣ, ನೇರ ನುಡಿ ನನಗೂ ಬಂದಿದೆ. ರಾಜ್ಯದ ಜನತೆ ತಂದೆಗೆ ಕೊಟ್ಟಿರುವ ಪ್ರೀತಿಯನ್ನು ನನಗೂ ಕೊಟ್ಟಿದ್ದಾರೆ. ನಾನು ಖಂಡಿತವಾಗಲೂ ಎಲ್ಲರಿಗೂ ಚಿರಋಣಿ” ಎಂದು ರಕ್ಷಕ್ ಹೇಳಿದ್ದಾರೆ.
ಇದನ್ನೂ ಓದಿ: BBK SEASON 10: ವೈಮನಸ್ಸಿಗೆ ಅಂತ್ಯ ಹಾಡಿದ ಕಾರ್ತಿಕ್-ಸಂಗೀತಾ! ಈ ಸ್ನೇಹ ಚಿರಕಾಲ ಹೀಗೇ ಇರಲಿ ಅಂದ್ರು ಫ್ಯಾನ್ಸ್!
“ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಿದ್ದಾರೆ. ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಗಳನ್ನಾಗಲಿ ಹಾಗೂ ಯಾರ ಮನಸ್ಸಿಗೂ ನೋವಾಗುವಂತಹ ಹೇಳಿಕೆಗಳನ್ನಾಗಲಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ” ಎಂದು ರಕ್ಷಕ್ ತಿಳಿಸಿದ್ದಾರೆ.
“ಎಲ್ಲೇ ಹೋದರೂ ನನ್ನನ್ನು ರಾಜ್ಯದ ಜನ ಗುರುತಿಸಿ ಪ್ರೀತಿಸಿದ್ದಾರೆ. ಒಂದು ಶುಭ ಸುದ್ದಿಯೆಂದರೆ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳಿಗೆ ಅವಕಾಶ ಬಂದಿದ್ದು ಈಗಾಗಲೇ ಅದೇ ಕೆಲಸದಲ್ಲಿ ಸಕ್ರಿಯವಾಗಿದ್ದು, ಬರುವಂತಹ ದಿನಗಳಲ್ಲಿ ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ ತಮ್ಮನ್ನು ರಂಜಿಸಿ, ತಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತೇನೆ. ಎಲ್ಲಾ ಚಿತ್ರರಂಗದ ಹಿರಿಯರು, ನಮ್ಮ ಮಾರ್ಗದರ್ಶಕರು, ಟ್ರೋಲರ್ಸ್, ಯೂಟ್ಯೂಬರ್‌ಗಳು ನನಗೆ ಸಾಕಷ್ಟು ಸಹಕಾರ ಬೆಂಬಲ ನೀಡಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ತಮ್ಮ ಸಹಕಾರ ಬೆಂಬಲ ನನ್ನೊಂದಿಗೆ ಇರಲಿ. ಅತಿ ಶೀಘ್ರದಲ್ಲೇ ಸಾಕಷ್ಟು ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: BBK SEASON 10: ಹೆದರೋ ಕಾಲ ಹೋಯ್ತು; ʻವಿನಯ್ʼ ಏಟಿಗೆ ತಿರುಗೇಟು ಕೊಟ್ಟ ಪ್ರತಾಪ್!
ರಕ್ಷಕ್ ಹೇಳಿದ್ದೇನು?
ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ರಕ್ಷಕ್ ಅವರು ಮಾತನಾಡಿʻʻ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಸುದೀಪ್ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು.