Site icon Vistara News

BBK Season 10: ಇಶಾನಿ ಕಂಡು  ಮೈಕಲ್ ಕ್ಲೀನ್‌ ಬೋಲ್ಡ್‌; ಜೋಡಿ ಮಾತುಕತೆ ಏನಾಗಿತ್ತು?

Rapper Eshani michael

ಬಿಗ್‌ಬಾಸ್‌ (BBK Season 10) ಮನೆಯಲ್ಲಿ ಒಂದೆಡೆ ಕಠಿಣ ಟಾಸ್ಕ್‌ಗಳ ಬಿಸಿ ಏರುತ್ತಿದ್ದರೆ, ಇನ್ನೊಂದೆಡೆ ಹೊಸ ಹೊಸ ಸಂಬಂಧಗಳು ಚಿಗುರೊಡೆಯುತ್ತಿವೆ.

ಇಶಾನಿಗೆ ಮೈಕಲ್ ಕ್ಲೀನ್‌ ಬೋಲ್ಡ್‌ ಆಗಿದ್ದಾರಾ? ಹೀಗೊಂದು ಅನುಮಾನವನ್ನು ಹುಟ್ಟುಹಾಕುವಂತಿದೆ ಈ ಸನ್ನಿವೇಶ.

ಮನೆಯೊಳಗೆ ಒಂದೆಡೆ ತುಕಾಲಿ ಸಂತೋಷ್, ಗೌರೀಶ ಅಕ್ಕಿ, ಸ್ನೇಹಿತ್ ಮತ್ತು ನಮ್ರತಾ ಮಾತುಕತೆಯಲ್ಲಿ ತೊಡಗಿದ್ದರೆ, ಅಲ್ಲೇ ಪಕ್ಕದಲ್ಲಿದ್ದ ಮೈಕಲ್ ಮತ್ತು ಇಶಾನಿ ಬೇರೆಯದೇ ಲೋಕದಲ್ಲಿ ಕಳೆದುಹೋದಂತಿದ್ದರು.

ಇದನ್ನೂ ಓದಿ: BBK Season 10: ಕಂಟೆಸ್ಟಂಟ್‌ಗಳನ್ನು ರುಬ್ಬಿದ ಲಾರ್ಡ್ ಪ್ರಥಮ್; ಅಸಮರ್ಥರದ್ದೇ ಮೇಲುಗೈ!

ಮೈಕಲ್: ನಿಂಗೆ ನನ್ ಮೇಲೆ ನಂಬ್ಕೆನೇ ಇಲ್ಲ ಅಲ್ವಾ? ಯಾಕೆ?
ಇಶಾನಿ: ಅದ್ಕೆ ಟೈಮ್ ತಗೊಳತ್ತೆ. ನಾವು ಯಾವಾಗ ಅಷ್ಟೆಲ್ಲ ಮಾತಾಡಿದ್ವಿ?
ಮೈಕಲ್: ಹಮ್. ನಿಜ. ಮಾತಾಡಿಲ್ಲ. ಟೈಮೇ ಸಿಗ್ಲಿಲ್ವಲ್ಲಾ…. ಟೈಮ್ ಇದೆ… ಮಾತಾಡೋಣ… ನಿಂಗೆ ಇಷ್ಟವಾದ ವಿಷಯದ ಬಗ್ಗೆನೇ ಮಾತಾಡೋಣ… ನಿಂಗೆ ಯಾವ ವಿಷಯ ಇಷ್ಟ?
ಇಶಾನಿ: ನಂಗೆ ಅಧ್ಯಾತ್ಮ ಇಷ್ಟ…ನಿನ್ ಫೀಲಿಂಗ್ಸ್ ಏನಂತ ಗೊತ್ತಾಗ್ಬೇಕು… ನನ್ ಬಗ್ಗೆ ಅಲ್ಲ… ನಿನ್ ಬದುಕಿನ ಅನುಭವ ಏನು… ನಿಂಗೆ ಏನು ಅನಿಸುತ್ತೆ… ನಿನ್ ಮೈಂಡ್‌ಸೆಟ್ ಏನು…?
ಮೈಕಲ್: ಹೇಳಿದೀನಲ್ಲಾ… ನನ್ ಲೈಫ್‌ ಸ್ಟೋರಿನೇ ಹೇಳಿದೀನಿ…
ಇಶಾನಿ: ಹೌದು… ನಂಗೆ ಸ್ವಲ್ಪ ಅನಿಸ್ತಿದೆ… ನಾನೂನೂ ಹಾಗೆ… ಒಂದು ಗೋಡೆ ಇದೆ ಅನ್ಸತ್ತೆ.
ಮೈಕಲ್‌: ನಂಗೆ ಗೋಡೆ ಇದೆ ಅನ್ಸತ್ತಾ? ನಂಗೆ ಇಲ್ಲ… ನಂಗೆ ನೀನೊಂದು ಗೋಡೆ ಕಟ್ಕೊಂಡಿದೀಯಾ ಅನ್ಸತ್ತೆ…
ಇಶಾನಿ: ಅದು ಹೌದು… ನಾನು ಹಾಗಿದೀನಿ….
ಈ ಮಾತುಕತೆ ನಡೆಯುತ್ತಿರುವ ಹಾಗೆಯೇ ಸ್ನೇಹಿತ್‌ ಮತ್ತು ನಮ್ರತಾ ಇವರನ್ನು ಗಮನಿಸಿ ಕಾಲೆಳೆಯಲು ಶುರುಮಾಡಿದರು.
ಸ್ನೇಹಿತ್: ಬಿಗ್‌ಬಾಸ್‌ ಇವರದೊಂದು ಸ್ಲೋಮೋಷನ್ ಶಾಟ್ ತಗೊಳ್ಳಿ…. ಯಾವ್ದಾದ್ರೂ ಒಳ್ಳೆಯ ಹಾಡು ಹಾಕಿ….
ನಮ್ರತಾ: ನಾವು ಹಿಂದುಗಡೆ ಬ್ಯಾಗ್ರೌಂಡ್ ಮ್ಯೂಸಿಕ್ ಹಾಕ್ತೀವಿ…

ಇದನ್ನೂ ಓದಿ: BBK Season 10: ಇಶಾನಿ- ಮೈಕೆಲ್‌ ನಡುವೆ ಸಮ್‌ಥಿಂಗ್‌; ನಥಿಂಗ್‌ ಅಂತಿದ್ದಾರೆ ಸಂಗೀತಾ-ಕಾರ್ತಿಕ್‌!

ಸ್ನೇಹಿತ್ ಮತ್ತು ನಮ್ರತಾ ಹಿಂದೆ ಹೋಗಿ ತಮಾಷೆ ಮಾಡತೊಡಗಿದ ಹಾಗೆ ಇಶಾನಿ, ‘ಇದು ಅತಿಯಾಯ್ತು’ ಎಂದು ನಾಚಿಕೊಂಡರು.

Exit mobile version