ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ (BBK Season 10) ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ. ಆ ಹಳ್ಳಿ ಹೇಗಿರಲಿದೆ ಎಂಬುದರ ಝಲಕ್ ಪ್ರೋಮೊದಲ್ಲಿ ಸಿಕ್ಕಿದೆ. ಮನೆಯ ಸದಸ್ಯರನ್ನು ಎರಡು ಕುಟುಂಬಗಳಾಗಿ ವಿಂಗಡಿಸಿರುವ ಬಿಗ್ಬಾಸ್, ಅವರಿಗೆ ಹಳ್ಳಿ ಬದುಕಿನ ವಿಶಿಷ್ಟ ಟಾಸ್ಕ್ ಕೊಟ್ಟಿದ್ದಾರೆ.
‘ಒಂದು ಸುಂದರವಾದ ಹಳ್ಳಿ. ಒಂದೇ ಕುಟುಂಬದಂತೆ ಬದುಕುತ್ತಿರುವ ಎರಡು ಮನೆತನಗಳು. ಒಂದು ಮನೆತನದ ಮುಖ್ಯಸ್ಥ ವಿನಯ್. ಇನ್ನೊಂದು ಮನೆತನದ ಮುಖ್ಯಸ್ಥೆ ಸಂಗೀತಾ’ ಎಂದಿರುವ ಬಿಗ್ಬಾಸ್ ಎರಡು ಕುಟುಂಬಗಳ ಮಧ್ಯೆ ದ್ವೇಷದ ಕಿಡಿ ಹೊತ್ತಿಕೊಳ್ಳುವ ಸಂದರ್ಭವನ್ನೂ ಸೃಷ್ಟಿಸಿರುವಂತಿದೆ.
ನಮ್ರತಾ ಹಳದಿ ಸೀರೆ ಉಟ್ಟು, ಕೈಯಲ್ಲಿ ಸೌಟು ಹಿಡಿದು ಸಂಗೀತಾ ಬಳಿ ಬಂದು, ‘ನಿನ್ನ ಗಂಡನಾ ವಸಿ ಹದ್ದಬಸ್ತಲ್ಲಿ ಮಡಿಕ ವೋಗು’ ಎಂದು ಪಕ್ಕಾ ಗ್ರಾಮ್ಯ ಭಾಷೆಯಲ್ಲಿ ಝಾಡಿಸಿದರೆ, ಸಂತೋಷ್, ‘ಗೋದಿ ಬೀಸಿದ್ಕಿಂತ ಅಗ್ದಿದ್ದೇ ಜಾಸ್ತಿ ನೋಡು ಅಳಿಮಯ್ಯ’ ಎಂದು ಅಲ್ಲೂ ನಗೆ ಬುಗ್ಗೆ ಸಿಡಿಸುತ್ತಿದ್ದಾರೆ. ವಿನಯಪ್ಪಾ, ಸಂಗೀತವ್ವಾ ಆಟ ಶುರುಮಾಡುಮಾ? ಎಂದು ಬಿಗ್ಬಾಸ್ ಕೂಡ ನಾಟಿ ಸ್ಟೈಲ್ನಲ್ಲೇ ನಿರ್ದೇಶನ ನೀಡಿದ್ದು ಇನ್ನೊಂದು ವಿಶೇಷ.
ಏನಿದು ಟಾಸ್ಕ್? ಅದರ ಸ್ವರೂಪ ಹೇಗಿರುತ್ತದೆ? ಯಾರು ಗೆಲ್ಲುತ್ತಾರೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂದ್ರು ಮನೆ ಮಂದಿ!
ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ ಸೀಸನ್ 10ಗೆ (BBK Season 10) ಮರಳಿದ್ದಾರೆ. ಆದರೆ, ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅವರಿಗೆ ಗೆಟ್ ಔಟ್ ಎಂದಿದ್ದಾರೆ ಮನೆಮಂದಿ.
ಇದನ್ನೂ ಓದಿ: BBK Season 10: ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ? ಪ್ರತಾಪ್ ನೀನಿರಲೇ ಬೇಕು ಎಂದ ಇಶಾನಿ!
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆ ಒಳಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಗೈದರು. ‘ಬಿಸ್ನೆಸ್ ವಿಚಾರಕ್ಕೆ ಹೊರಗೆ ಹೋಗಿದ್ದೆಯೋ ಅಥವಾ ಆರೋಗ್ಯದ ಸಮಸ್ಯೆ ಕಾಡಿತ್ತೋ’ ಎಂದು ವಿನಯ್ ಕೇಳಿದರು. ‘ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋದ್ರಾ’ ಎಂದು ನಮ್ರತಾ ಪ್ರಶ್ನಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ನಾಮಿನೇಷನ್ ವಿಚಾರದ ಬಗ್ಗೆ ಮಾತನಾಡಿದರು.
ಸಂತೋಷ್ ಅವರು ನಾಮಿನೇಟ್ ಆಗಬೇಕೆ?ಇಲ್ಲವೇ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರಶ್ನೆ ಇಟ್ಟರು. ಅದರಂತೆ ಮೈಕಲ್ ಮಾತನಾಡಿ, ʻʻನಾವು ಒಂದು ವಾರ ಸ್ಟ್ರಗಲ್ ಮಾಡಿ ಬಂದಿದ್ದೇವೆʼʼ ಎಂದರು. ಸಂಗೀತಾ ಕೂಡ ʻಒಂದು ವಾರ ಸಂತೋಷ್ ಅವರ ಕೊಡುಗೆ ಏನು ಇರಲಿಲ್ಲ. ಹೀಗಾಗಿ ಅವರು ನಾಮಿನೇಟ್ ಆಗಬೇಕುʼʼ ಎಂದರು. ಬಹುತೇಕರು ಇದೇ ಉತ್ತರವನ್ನು ನೀಡಿದ್ದಾರೆ. ಹೀಗಾಗಿ ವರ್ತೂರ್ ಸಂತೋಷ್ ನಾಮಿನೇಟ್ ಆಗುವುದು ಬಹುತೇಕ ಖಚಿತ ಎಂದು ಈ ಪ್ರೋಮೊ ಮೂಲಕ ತಿಳಿದು ಬಂದಿದೆ.