ಬೆಂಗಳೂರು: ಬಿಗ್‌ಬಾಸ್ ಮನೆಯೊಳಗೆ (BBK SEASON 10) ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಸರದಿ. ಬಾಗಿಲನ್ನೇ ನೋಡುತ್ತ ಡ್ರೋನ್ ಪ್ರತಾಪ್ ತಂದೆಯ ಬರುವಿಕೆಯನ್ನು ಕಾಯುತ್ತಿದ್ದಾರೆ. ಅಪ್ಪ ಬಂದ್ರಾ, ಬಂದ್ರಾ? ಎಂದು ಸ್ಪರ್ಧಿಗಳಲ್ಲಿ ಕೇಳುತ್ತಲೇ ಇದ್ದಾರೆ. ಒಂದು ಕ್ಷಣ ಅಪ್ಪ ಅಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಪ್ರತಾಪ್.
ಇದೀಗ ಜಿಯೋ ಸಿನಿಮಾ ಪ್ರೋಮೊ ಹಂಚಿಕೊಂಡಿದೆ. ಮನೆಯವರೆಲ್ಲರೂ ಡ್ರೋನ್ ಪ್ರತಾಪ್ ಅವರಿಗೆ ಊಟ ಮಾಡಿಸಲು ಪರದಾಡಿದ್ದಾರೆ. ಅಪ್ಪ ಅಮ್ಮ ಬರುವಿಕೆಗೆ ಕಾಯುತ್ತಿರುವ ಡ್ರೋನ್ ಊಟ ಕೂಡ ಮಾಡುತ್ತಿಲ್ಲ. ಸಂಗೀತಾ ಕೂಡ ಪ್ರತಾಪ್ ಅವರಿಗೆ ʻʻನೀನು ಈ ರೀತಿ ಹಸಿದುಕೊಂಡು ಇದ್ದರೆ, ಅವರಿಗೆ ಖುಷಿ ಆಗುತ್ತಾ?ಎಂದು ಪ್ರಶ್ನೆ ಇಟ್ಟರು. ನಮ್ರತಾ ಕೂಡʻʻಒಂದೇ ಒಂದು ತುತ್ತು ತಿನ್ನು. ಖಂಡಿತ ಅಪ್ಪ ಅಮ್ಮ ಬರುತ್ತಾರೆʼʼಎಂದು ಕೈ ತುತ್ತು ತಿನಿಸಿದ್ದಾರೆ. ಪ್ರತಾಪ್ ಅವರ ಅಮ್ಮ ʻಪ್ರತಾಪುʼ ಎಂದು ಕರೆದೊಡನೆ ಡ್ರೋನ್ ಪ್ರತಾಪ್ ಮನೆಯಲ್ಲೆ ಅಮ್ಮನನ್ನು ಹುಡುಕಲು ಶುರು ಮಾಡಿದರು. ಅಪ್ಪ ಅಮ್ಮ ಮುಖ್ಯ ದ್ವಾರದಿಂದ ಎಂಟ್ರಿ ಕೊಟ್ಟಾಗ ಪ್ರತಾಪ್ ಅವರು ಅಳಲು ಶುರು ಮಾಡಿದರು. ಬಿಗ್ ಬಾಸ್ ಡೋರ್ ಲಾಕ್ ಮಾಡಿದ ಕಾರಣ ʻʻಬಿಗ್ ಬಾಸ್ ಡೋರ್ ಓಪನ್ ಮಾಡಿʼʼಎಂದು ಜೋರಾಗಿ ಅತ್ತಿದ್ದಾರೆ.
ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದ ಡ್ರೋನ್ ಪ್ರತಾಪ್
ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್ (BBK Season 10) ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಮನೆಯವರಿಂದ ಬಂದ ಪತ್ರಗಳನ್ನೂ ಕೊಟ್ಟಿದ್ದರು. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಕಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದರು. ಆದರೆ ಡ್ರೋನ್ ಪ್ರತಾಪ್ ಪತ್ರವನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಕೊನೆಗೂ ಡ್ರೋನ್‌ಗೆ ಮಾತ್ರ ಪತ್ರ ಸಿಕ್ಕೇ ಇಲ್ಲ. ʻʻಮಾತ್ರವಲ್ಲ ಕ್ಯಾಮೆರಾ ಮುಂದೆ ಡ್ರೋನ್ ಪ್ರತಾಪ್ ಅವರು ನನಗೆ ಪತ್ರ ಬಂದಿದ್ಯಾ? ಅಷ್ಟು ಹೇಳಿ ಬಿಗ್ ಬಾಸ್. ನಾನು ಯಾರಿಗೂ ಹೇಳಲ್ಲ ಹೇಳಿʼʼಎಂದು ಕೇಳಿದ್ದರು. ಈ ಬಗ್ಗೆ ವೀಕೆಂಡ್‌ನಲ್ಲಿ ಸುದೀಪ್ ಅವರು ʻʻಕಿಚ್ಚ ಸುದೀಪ್ ಅವರು ಪ್ರತಾಪ್ ಅವರಿಗೆ ಒಂದು ವೇಳೆ ಪತ್ರ ಬಂದರೆ ಅವರಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ?ಎಂದುʼʼ ವೇದಿಕೆಯಲ್ಲಿ ಕೇಳಿದ್ದರುʼʼ ಇದಾದ ಕೂಡಲೇ ಪ್ರತಾಪ್ ಅವರ ಅಪ್ಪನ ಧ್ವನಿ ಮನೆಯಲ್ಲಿ ಕೇಳಿತ್ತು. ಪ್ರತಾಪ್ ಕೇಳುತ್ತಲೇ ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟಿದ್ದರು.
ಇದನ್ನೂ ಓದಿ: BBK SEASON 10: ಮನೆಯವರಿಗೆಲ್ಲ ನಮ್ರತಾ ಇಷ್ಟ, ನನ್ನ ಯಾಕೆ ಇಷ್ಟಪಡಲ್ಲ? ಅತ್ತಿಗೆಗೆ ಸಂಗೀತಾ ಪ್ರಶ್ನೆ!
ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತಾಡಿದ್ದು ಕಡಿಮೆಯೇ. ಆದರೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಹೇಳಿದ್ದರು. ಅಲ್ಲದೇ ತಂದೆ ತಾಯಿ ಜತೆಗೆ ತಂಗಿಯ ಜತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹೇಳಿದ್ದರು.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ