Site icon Vistara News

BBK Season 10: ಗಂಡಸುತನದ ಬಗ್ಗೆ ಅಸಭ್ಯ ಮಾತು, ರಣರಂಗವಾಯ್ತು ಮನೆ

bbk 10 contestant

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ವಾರ ಹಳ್ಳಿ ಜೀವನ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದಾರೆ. ಆದರೆ ಇಡೀ ಮನೆಯೇ ರಣರಂಗವಾಗಿದೆ. ಗಟ್ಟಿಯಾಗಿದ್ದ ವಿನಯ್‌ ಕಣ್ಣೀರು ಸುರಿಸಿದರೆ, ಮನೆಯ ಸದಸ್ಯರು ವೈರಿಗಳಂತೆ ಕಿತ್ತಾಡಿಕೊಂಡಿದ್ದಾರೆ. ವಿನಯ್ ಹಾಗೂ ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಇವರಿಬ್ಬರ ಜಗಳ ತಾರಕಕ್ಕೇರಿತ್ತು,

ವಿನಯ್ ಗೌಡ ಹಾಗೂ ಕಾರ್ತಿಕ್ ಮಧ್ಯೆ ಗಂಡಸುತನದ ಬಗ್ಗೆ ಪ್ರಶ್ನೆ ಎದ್ದಿತು. ‘’ಗಂಡ್ಸು ಬಾ.. ಬಳೆಗಳನ್ನ ಹಾಕೊಂಡ್ ಹೆಂಗಸ್ರ ತರಹ ಆಡಬೇಡ’’ ಎಂದು ಕಾರ್ತಿಕ್ ಮಹೇಶ್‌ಗೆ ವಿನಯ್ ಗೌಡ ಕೆಣಕಿದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ, ‘’ಬಳೆ ಹಾಕೊಂಡ್ ಬಿಟ್ಟರೆ ಅಂದ್ರೆ ಏನು? ಏನರ್ಥ ನಿಂದು?’’ ಎಂದು ವಿನಯ್ ಗೌಡ ಮೇಲೆ ಎಗರಿದ್ದಾರೆ.

ಟಾಸ್ಕ್‌ ಏನು?

ಹಳ್ಳಿ ಜೀವನ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದಾರೆ. ವಿನಯ್ ಹಾಗೂ ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ವಿನಯ್‌ ಮನೆಯಲ್ಲಿ ನೀತು, ಇಶಾನಿ, ನಮ್ರತಾ, ರಕ್ಷಕ್, ಸಿರಿ ಹಾಗೂ ಸ್ನೇಹಿತ್ ಇದ್ದಾರೆ. ಸಂಗೀತಾ ಮನೆಯಲ್ಲಿ ಕಾರ್ತಿಕ್ ಮಹೇಶ್, ಮೈಕಲ್, ತನಿಷಾ, ಭಾಗ್ಯಶ್ರೀ, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಇದ್ದಾರೆ.ಎರಡೂ ಮನೆತನದ ಸದಸ್ಯರು ಮಣ್ಣಿನ ಪಾತ್ರೆಗಳನ್ನು ತಯಾರಿಸಿ ಕೊಡಬೇಕಿತ್ತು. ಹೆಚ್ಚು ಪಾತ್ರೆಗಳನ್ನು ತಯಾರಿಸಿ ಕೊಡುವವರು ಗೆಲ್ಲುತ್ತಾರೆ. ಮಣ್ಣಿನ ಪಾತ್ರೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ‘ಬಿಗ್ ಬಾಸ್‌’ ಕಳುಹಿಸಿಕೊಡುತ್ತಿದ್ದರು. ಅದನ್ನ ಪಡೆಯುವ ವೇಳೆ ಎರಡು ತಂಡಗಳ ಮಧ್ಯೆ ವಾರ್‌ ನಡೆದಿದೆ. ಮಣ್ಣಿನ ಲೋಟ ಮತ್ತು ತಟ್ಟೆ ಮಾಡುವ ಸ್ಪರ್ಧೆಯಲ್ಲಿ ಹಲವು ಜಗಳ, ಕೂಗಾಟ, ಬಳಿಕ ಸಂಗೀತಾ ಶೃಂಗೇರಿ ಅವರ ತಂಡವು ಜಯಗಳಿಸಿತು. ಅದಾದ ಬಳಿಕ ಸೆಗಣಿಯ ಭೆರಣಿಗಳನ್ನು ಮಾಡುವ ಟಾಸ್ಕ ಪ್ರಾರಂಭವಾಯ್ತು.

ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.
ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾಯ್ತು. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್‌ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿತ್ತು.

ಇದನ್ನೂ ಓದಿ: BBK Season 10 : ಸಂಗೀತಾ-ನಮ್ರತಾ‌ರಲ್ಲಿ ಕಿತ್ತೋದೋಳು ಯಾರು? ವಿನಯ್-ಕಾರ್ತಿಕ್‌ ಮಧ್ಯೆ ಗಂಡ್ಸು ಯಾರು?

‘ತಳ್ಳೋದು ಪಳ್ಳೋದು ಮಾಡಿದ್ರೆ ತೆಗ್ದು ಕಪಾಳಕ್ಕೇ ಬಾರಿಸ್ಬೇಕು’
‘ಏ ಲೂಸರ್’
ಬಾಯಿ ಮುಚ್ಕೊಂಡ್ ಆಡು’
‘ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ?’
‘ಕಿತ್ತೋದೋಳು’
‘ನೀನ್ ಕಿತ್ತೋದೋಳು’
‘ಮರ್ಯಾದೆ ಇಲ್ದಿರೋ ನಿನ್ನಂಥೋಳ ಹತ್ರ ಏನ್ ಮಾತು?’
‘ಬಾರೋ’
‘ಹೋಗಲೇ ಗಂಡಸಿನ ಥರ ಆಡು, ಬಳೆಗಳ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ’, ಏನೂ ಬಂದಿಲ್ಲ. ತಡೆದಿದ್ದೀನಿ ನಾನು. ಗಂಡ್ಸಾ ಅಂತ ಹೇಳ್ತಿರೋದು ನೀನು.. ಬಳೆ ಹಾಕೊಂಡಿರೋದು ನೀನು..ಗಂಡಸುತನ ತೋರಿಸು ಬಾ ಗಂಡಸುತನ ತೋರಿಸು ಬಾ, ಗಂಡಸು ತರಹ ಆಡು.. ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡೋದಲ್ಲʼʼ ಇವೆಲ್ಲ ಯಾವುದೋ ಬೀದಿ ಜಗಳದ ತುಣುಕುಗಳಲ್ಲ. ಬಿಗ್‌ಬಾಸ್‌ ಮನೆಯೊಳಗೇ ರೂಪುಗೊಂಡಿರುವ ಹಳ್ಳಿ ಟಾಸ್ಕ್‌ನಲ್ಲಿ ಕೇಳಿಬಂದ ಮಾತುಗಳು. ಹೀಗೆ ಇಡೀ ಎಪಿಸೋಡ್‌ನಲ್ಲಿ ಅಸಭ್ಯ ಮಾತುಗಳು ಸ್ಪರ್ಧಿಗಳಲ್ಲಿ ಕೇಳಿ ಬಂದವು.

ಸೆಗಣಿಯ ಭರಣಿ ಟಾಸ್ಕ್‌

ವಿನಯ್, ಸಂಗೀತಾರ ತಂಡದ ಬೆರಣಿಗಳನ್ನು ಪರಿಶೀಲಿಸಿ ಕೆಲವನ್ನು ರಿಜೆಕ್ಟ್ ಮಾಡಿದರು. ಸಂಗೀತಾ ಸಹ ಕೆಲವನ್ನು ರಿಜೆಕ್ಟ್ ಮಾಡಿದರು. ಅದಾದ ಬಳಿಕ ಎರಡನೇ ಸುತ್ತಿನಲ್ಲಿ, ವಿನಯ್, ಈ ಹಿಂದೆ ಓಕೆ ಮಾಡಿದ್ದ ಬೆರಣಿಯನ್ನು ರಿಜೆಕ್ಟ್ ಮಾಡಿದರು. ಅದಕ್ಕೆ ಸಂಗೀತಾ ಸಹ ಹಾಗೆಯೇ ಮಾಡಿದರು. ಅದಕ್ಕೆ ಸಿಟ್ಟಾದ ವಿನಯ್, ಸಂಗೀತಾರ ತಂಡ ಮಾಡಿದ್ದ ಎಲ್ಲ ಬೆರಣಿಗಳನ್ನು ಅಳಿಸಿ ಹಾಕಿದರು. ಅದಕ್ಕೆ ಸಂಗೀತಾ ಸಹ ವಿನಯ್ ತಂಡ ಮಾಡಿದ್ದ ಬೆರಣಿಗಳನ್ನು ಹಾಳು ಮಾಡಿದರು. ಇದು ಇನ್ನಷ್ಟು ಜಗಳಕ್ಕೆ ಕಾರಣವಾಗಿದೆ. ಬೆರಣಿ ಟಾಸ್ಕ್ ಅನ್ನು ಬಿಗ್​ಬಾಸ್ ರದ್ದು ಮಾಡಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version