ಬೆಂಗಳೂರು: ಬಿಗ್ ಬಾಸ್ ಹಿಂದಿ ಒಟಿಟಿ (Bigg Boss OTT) ಸೀಸನ್ ಒಂದನ್ನು ಕರಣ್ ಜೋಹರ್ ಹೋಸ್ಟ್ ಮಾಡಿದ್ದರು. ಇದೀಗ ‘ಬಿಗ್ ಬಾಸ್ ಒಟಿಟಿ 2ನೇ ಸೀಸನ್’ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ನಿರೂಪಕರ ಸ್ಥಾನಕ್ಕೆ ಕರಣ್ ಜೋಹರ್ ಬದಲಿಗೆ ಸಲ್ಮಾನ್ ಖಾನ್ (Salman Khan) ಅವರು ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಎರಡನೇ ಸೀಸನ್ ತಿಂಗಳ ಅಂತ್ಯದ ವೇಳೆಗೆ ಪ್ರೀಮಿಯರ್ ಆಗಲಿದ್ದು, ಮೂರು ತಿಂಗಳ ಕಾಲ ಒಟಿಟಿ ಸೀಸನ್ ನಡೆಯಲಿದೆ ಎಂದು ವರದಿಯಾಗಿದೆ.
ಸಲ್ಮಾನ್ ಖಾನ್ ನಟ 2010 ರಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದರು. ಈ ನಡುವೆ, ಫರಾ ಖಾನ್ 2015ರಲ್ಲಿ ಬಿಗ್ ಬಾಸ್ʻ ಹಲ್ಲಾ ಬೋಲ್ʼ ಎಂಬ ಶೀರ್ಷಿಕೆಯ ಸ್ಪಿನ್‌ಆಫ್ ಆವೃತ್ತಿಯನ್ನು ಹೋಸ್ಟ್ ಮಾಡಿದರು. ಕರಣ್ ಜೋಹರ್ 2021ರಲ್ಲಿ ಬಿಗ್ ಬಾಸ್ OTT ಸೀಸನ್ ಒಂದನ್ನು ಹೋಸ್ಟ್ ಮಾಡಿದರು.
ದಿವ್ಯಾ ಅಗರ್ವಾಲ್ ಮೊದಲ ಸೀಸನ್ ಗೆದ್ದುಕೊಂಡರು. ಉರ್ಫಿ ಜಾವೇದ್, ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಜೀಶನ್ ಖಾನ್, ನಿಶಾಂತ್ ಭಟ್ ಮತ್ತು ನೇಹಾ ಭಾಸಿನ್ ಮೊದಲ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಎಂಸಿ ಸ್ಟಾನ್ ಬಿಗ್ ಬಾಸ್ 16ರ ಅಂತಿಮ ವಿಜೇತರಾಗಿದ್ದರು, ಶಿವ ಠಾಕರೆ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ರನ್ನರ್ಸ್ ಅಪ್ ಆಗಿ ಬಂದರು. ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್ನ ಹಂಗಿಲ್ಲದೇ ಕೆಲವು ಟಾಸ್ಕ್ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್ ಪಡೆದುಕೊಂಡಿತ್ತು.
ಇದನ್ನೂ ಓದಿ: Bigg Boss 16 Finale: ಬಿಗ್ ಬಾಸ್ ಹಿಂದಿ 16ರ ವಿಜೇತರಾಗಿ ಹೊರಹೊಮ್ಮಿದ ಎಂ ಸಿ ಸ್ಟ್ಯಾನ್
ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28ರಂದು ಬಿಡುಗಡೆಯಾಗಲಿದೆ. ಆಲಿಯಾ ಭಟ್, ರಣವೀರ್ ಸಿಂಗ್, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಪ್ರಮುಖ ತಾರೆಯರು.