ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK season 10) ಮೂರನೇ ವಾರ ಕ್ಯಾಪ್ಟನ್ ಟಾಸ್ಕ್‌ನಿಂದಾಗಿ ಸ್ನೇಹಿತರಾದ ಕಾರ್ತಿಕ್ ಹಾಗೂ ಸಂಗೀತಾ ನಡುವೆ ಬಿರುಕು ಉಂಟಾಗಿದೆ. ಇದೀಗ ಮನೆಯಲ್ಲಿ ಸಂಗೀತಾ ಅವರು ತನಿಷಾ ಜತೆ ʻʻನಾನು ಕಾರ್ತಿಕ್ ಜತೆ ಡ್ಯಾನ್ಸ್ ಮಾಡಿದರೆ, ಹೆಚ್ಚು ಮಾತಾಡಿದ್ರೆ ಇಡೀ ಕರ್ನಾಟಕ ನಮ್ಮಿಬ್ಬರನ್ನು ಲಿಂಕಪ್ ಮಾಡುತ್ತೆ, ಆದರೂ ನಾನು ಫ್ರೆಂಡ್ ಅಂತ ಡ್ಯಾನ್ಸ್ ಮಾಡಿದೆʼʼಎಂದು ಹೇಳುವ ವಿಚಾರ ಸಖತ್ ಹೈಲೈಟ್ ಆಗಿದೆ.
ಮಹಿಳೆಯರೇ ಕ್ಯಾಪ್ಟನ್
ಮನೆಯಲ್ಲಿ ಕ್ಯಾಪ್ಟನ್ ಟಾಸ್ಕ್ ಇತ್ತು. ಈ ಬಾರಿ ಓರ್ವ ಮಹಿಳೆ ಕ್ಯಾಪ್ಟನ್ ಆಗಲಿ ಅಂತ ಮನೆಯವರೆಲ್ಲರೂ ಅಂದುಕೊಂಡಿದ್ದರು. ಪುರುಷ ಸ್ಪರ್ಧಿಗಳೆಲ್ಲ ಸೇರಿಕೊಂಡು ಇಬ್ಬರು ಮಹಿಳಾ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ತನಿಷಾ ಕುಪ್ಪಂಡ, ನಮ್ರತಾ ಗೌಡ ಅವರನ್ನು ಆಯ್ಕೆ ಮಾಡಿದರು. ಇದೆಲ್ಲವೂ ಪರುಷ ಸ್ಪರ್ಧಿಗಳ ನಿರ್ಧಾರ. ಕಾರ್ತಿಕ್ ಗೌಡ ಕೂಡ ಈ ಬಗ್ಗೆ ಒಮ್ಮತ ಸೂಚಿಸಿದ್ದರು.
ನಮ್ರತಾ ಜತೆ ಕಾರ್ತಿಕ್ ಕ್ಯೂಟ್ ಡ್ಯಾನ್ಸ್
ಮನೆಯವರೆಲ್ಲರೂ ಸೇರಿಕೊಂಡು ನಮ್ರತಾ ಹಾಗೂ ತನಿಷಾ ಅವರನ್ನು ಆಯ್ಕೆ ಮಾಡಿಕೊಂಡಾಗ ಸಂಗೀತಾ ಅವರು ಅಪ್‌ಸೆಟ್ ಆಗಿದ್ದರು. ಮೆನಯಲ್ಲಿ ಎರಡು ತಂಡ ರಚನೆ ಆಗಬೇಕಿತ್ತು. ಹೀಗಾಗಿ ಕಾರ್ತಿಕ್ ಅವರು ತನಿಷಾ ತಂಡವನ್ನು ಸೇರದೇ ನಮ್ರತಾ ತಂಡಕ್ಕೆ ಸೇರಿದರು. ತನಿಷಾ ಜತೆ ಆಟ ಆಡಿದ್ದೀನಿ. ಈಗ ನಮ್ರತಾ ಗೌಡ ಟೀಂನಲ್ಲಿ ಆಟ ಆಡ್ತೀನಿ ಎಂದು ತನ್ನ ನಿರ್ಧಾರದ ಹಿಂದಿನ ಕಾರಣವನ್ನು ಕಾರ್ತಿಕ್ ನೀಡಿದ್ದರು. ಇದಾದ ಬಳಿಕ ಸಂಗೀತಾ ಅವರು ಅಡುಗೆ ಮಾಡುವಾಗ ಅವರಿಗೆ ಹೊಟ್ಟೆ ಉರಿಸವಂತೆ ನಮ್ರತಾ ಅವರ ಕೈ ಹಿಡಿದು ಕ್ಯೂಟ್ ಆಗಿ ಕಾರ್ತಿಕ್ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: BBK season 10: ಕಾರ್ತಿಕ್ ‘ಯು ಆರ್ ಫೇಕ್’ಎಂದ ಸಂಗೀತಾ; ಕ್ಯಾಪ್ಟನ್ ಆಗೋ ಬರದಲ್ಲಿ ಸ್ನೇಹ ಕಳೆದುಕೊಳ್ತಾರಾ?
ಕಾರ್ತಿಕ್ ನೀನು ಫೇಕ್ ಎಂದ ಸಂಗೀತಾ
ಸಂಗೀತಾ, ‘ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾ ಮಧ್ಯ ಕಿಡಿ ಹೊತ್ತಿಕೊಂಡ ಫ್ರೋಮೊ ಔಟ್ ಆಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಸಮಾಧಾನಪಡಿಸಲು ಹೋಗಿದ್ದಾರೆ. ‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.
ಕಾರ್ತಿಕ್ ಹೇಳಿದ್ದೇನು?
“ನಿನಗೆ ಮುಂದಿನ ವಾರ ಕ್ಯಾಪ್ಟನ್ ಆಗುವ ಅವಕಾಶ ಇದೆ. ತನಿಷಾ ಈ ವಾರ ನಾಮಿನೇಟ್ ಆಗಿದ್ದಾಳೆ, ಹಾಗಾಗಿ ಅವಳನ್ನು ಸೇವ್ ಮಾಡಿದೆ. ಇದನ್ನು ಯಾಕೆ ಸೀರಿಯಸ್ ಆಗಿ ತಗೋತೀಯಾ? ನೀನು ನಾನ್‌ಸೆನ್ಸ್ ಆಗಿ ಮಾತನಾಡ್ತಿದ್ದೀಯಾ. ನನಗೆ ಫೇಕ್ ಎನ್ನೋದು ಇಷ್ಟ ಆಗಿಲ್ಲ” ಎಂದರು. ಅಲ್ಲಿಂದ ಹೋದ ಕಾರ್ತಿಕ್ ಅವರು ತನಿಷಾ ಜತೆಯೂ ಚರ್ಚೆ ಮಾಡಿದರು.
ಕರ್ನಾಟಕ ನಮ್ಮಿಬ್ಬರನ್ನು ಲಿಂಕಪ್ ಮಾಡುತ್ತೆ
ಇದಾದ ಬಳಿಕ ತನಿಷಾ ಜತೆ ಸಂಗೀತಾ ಮಾತನಾಡಲು ಬರುತ್ತಾರೆ. ಅಲ್ಲಿಂದ ಕಾರ್ತಿಕ್ ಎದ್ದು ಹೋಗುತ್ತಾರೆ. ತನಿಷಾ ಜತೆ ಸಂಗೀತಾ ಮಾತನಾಡಿ ʻʻನನಗೆ ಕ್ಯಾಪ್ಟನ್ ಆಗದೇ ಇರುವುದಕ್ಕೆ ಬೇಸರವಿಲ್ಲ. ಕಾರ್ತಿಕ್ ನನ್ನ ಫ್ರೆಂಡ್ ಅವರು ನನ್ನ ಹೆಸರನ್ನು ತೆಗೆದುಕೊಂಡಿಲ್ಲ ಎಂದು ಬೇಜಾರಾಯ್ತು. ನಾನು ಕಾರ್ತಿಕ್ ಜತೆ ಡ್ಯಾನ್ಸ್ ಮಾಡಿದರೆ, ಹೆಚ್ಚು ಮಾತಾಡಿದ್ರೆ ಇಡೀ ಕರ್ನಾಟಕ ನಮ್ಮಿಬ್ಬರನ್ನು ಲಿಂಕಪ್ ಮಾಡುತ್ತೆ, ಆದರೂ ನಾನು ಫ್ರೆಂಡ್ ಅಂತ ಡ್ಯಾನ್ಸ್ ಮಾಡಿದೆʼʼಎಂದು ಹೇಳಿದ್ದಾರೆ.
ಇದನ್ನೂ ಓದಿ: BBK season 10: ಬಿಗ್ ಬಾಸ್ ಮನೆಯಲ್ಲಿ ಫೈರ್ ಕ್ಯಾಂಪ್: ತಮ್ಮವರಲ್ಲಿ ಮನಬಿಚ್ಚಿ ಕ್ಷಮೆ ಬೇಡಿದ ಮನೆಮಂದಿ!
ಬಿಗ್‌ಬಾಸ್ ಮನೆಯ ಬೆಸ್ಟ್ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ. ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ?ಎಂಬುದು ನೋಡಬೇಕಿದೆ.
ಬಿಗ್‌ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.