ಬೆಂಗಳೂರು: ಬಿಗ್ ಬಾಸ್ ಸೀಸನ್ ಎರಡನೇ (BBK Season 10) ವಾರ ರಕ್ಷಕ್ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ನಿನ್ನೆ (ಅ.21)ರಂದು ಬೃಂದಾವನ ಧಾರಾವಾಹಿಯ ತಂಡ ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳ ಜತೆ ರಂಜಿಸಿ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಳಪೆ ಮತ್ತು ಅತ್ಯುತ್ತಮ ಆಯ್ಕೆ ಕೂಡ ಆಗೇ ಹೋಯ್ತು. ಅಷ್ಟೇ ಅಲ್ಲದೇ ಲಕ್ಷುರಿ ಬಜೆಟ್ ಕೂಡ ಆಗಿದ್ದು ಮನೆಯಲ್ಲಿ ಈ ಬಗ್ಗೆ ಮನಸ್ತಾಪಗಳು ನಡೆದಿದೆ.
ಕಳಪೆ ಅತ್ಯುತ್ತಮ ಪಟ್ಟ
ಈ ವಾರ ಮನೆಯ ಸದಸ್ಯರು ಹೆಚ್ಚಾಗಿ ರಕ್ಷಕ್ ಅವರಿಗೆ ಅತ್ಯುತ್ತಮ ನೀಡಿದರು. ʼಬೆಸ್ಟ್ ಪರ್ಫಾಮೆನ್ಸ್’ಗಾಗಿ ಸಿರಿ, ಮೈಕಲ್ ಹಾಗೂ ರಕ್ಷಕ್‌ಗೆ ಮತಗಳು ಬಿದ್ದವು. ಹೀಗಾಗಿ ಕೊನೆಗೆ ಅತ್ಯುತ್ತಮರಾಗಿ ರಕ್ಷಕ್ ಹೊರಹೊಮ್ಮಿದರು. ಲಕ್ಷುರಿ ಬಜೆಟ್‌ನಲ್ಲಿ ತಪ್ಪು ಮಾಡಿದ್ರಿಂದಾಗಿ ತನಿಷಾಗೆ ‘ಕಳಪೆ’ ವೋಟ್ಸ್ ಬಿದ್ದವು. ಆದರೆ, ‘ಕಳಪೆ’ ಪಟ್ಟಕ್ಕೆ ಇಶಾನಿಗೆ ಹೆಚ್ಚು ಮತಗಳು ಲಭಿಸಿದವು. ಹೀಗಾಗಿ, ‘ಕಳಪೆ’ ಪಟ್ಟ ಪಡೆದು ಇಶಾನಿ ಜೈಲಿಗೆ ಹೋದರು. ಇಶಾನಿ ಜೈಲಿನಲ್ಲಿ ಕಣ್ಣೀರು ಸುರಿಸಿದರು.
ಸಂಗೀತಾ ಆಯ್ಕೆಗೆ ವೀಕ್ಷಕರು ತಬ್ಬಿಬ್ಬು!
ಬಿಗ್ ಬಾಸ್ ಶುರುವಾಗಿನಿಂದ ವಿನಯ್ ಹಾಗೂ ಸಂಗೀತಾ ನಡುವೆ ವಾರ್‌ಗಳು ಆಗುತ್ತಿರುವ ಬಗ್ಗೆ ನಮಗೆ ಗೊತ್ತಿರುವ ವಿಚಾರ. ಬಳಿಕ ಇಬ್ಬರು ಪರಸ್ಪರ ಕ್ಷಮೆ ಕೇಳಿ ಒಂದಾದರು. ಆದರೆ ಸಂಗೀತಾ ಈ ಬಾರಿ ಅತ್ಯುತ್ಯಮ ವೋಟ್‌ವನ್ನು ವಿನಯ್ ಅವರಿಗೆ ನೀಡಿದರು. ಆದರೆ ಅವರು ಕಾರಣ ಕೊಟ್ಟಿರುವುದನ್ನು ನೋಡಿ ವೀಕ್ಷಕರಿಗೆ ಅರ್ಥವಾಗಿಲ್ಲ. ಇದು ಪಕ್ಕಾ ಓಲೈಸುವ ಪ್ರಯತ್ನ ಎಂದು ವೀಕ್ಷಕರು ಕಮೆಂಟ್ ಮಾಡಲು ಶುರು ಮಾಡಿದರು. ಲಕ್ಷುರಿ ಬಜೆಟ್‌ನಲ್ಲಿ ತಪ್ಪಾದ ಕಾರಣ ಕಳಪೆ ಪಟ್ಟವನ್ನು ತನಿಷಾರಿಗೆ ಸಂಗೀತಾ ವೋಟ್ ಮಾಡಿದರು.
ಇದಾದ ಬಳಿಕ ಕಾರ್ತಿಕ್ ಹಾಗೂ ತನಿಷಾ ಮನೆಯ ಸದಸ್ಯರ ನಡವಳಿಕೆ ಬಗ್ಗೆ ಮಾತನಾಡಿದರು. ಕಾರ್ತಿಕ್ ಜತೆ ತನಿಷಾ ಮಾತನಾಡಿ ʻʻಥ್ರೆಟ್ ಇದೆ ಅಂತಾರೆ ಅವರಿಗೆ ಅತ್ಯುತ್ತಮ ನೀಡುತ್ತಾರೆʼʼ ಎಂದು ತನಿಷಾ ಸಂಗೀತಾ ಬಗ್ಗೆ ಹೇಳಿದರು. ಕಾರ್ತಿಕ್ ಕೂಡ ʻʻನನಗೆ ನಗು ಬರುವಂತಹ ವಿಚಾರ ಆಯ್ತುʼʼ ಎಂದರು.
ಇದನ್ನೂ ಓದಿ: BBK Season 10: ಇದೀಗ ವಿನಯ್- ಸಂಗೀತಾ ಕುಚಿಕು ಫ್ರೆಂಡ್ಸ್; ಕಾರ್ತಿಕ್ ಜತೆ ಶುರುವಾಯ್ತು ಫೈಟ್!
ಲಕ್ಷುರಿ ಬಜೆಟ್ ಸಿಗೋದೆ ಡೌಟ್
ಬಿಗ್ ಬಾಸ್‌ನಲ್ಲಿ ಕೆಲವೊದು ರೂಲ್ಸ್‌ಗಳು ಇವೆ. ಮೈಕ್ ಧರಿಸದೇ ಇರುವುದು, ಸರಿಯಾದ ಸಮಯಕ್ಕೆ ಮೈಕ್ ಬ್ಯಾಟರಿ ಬದಲಾಯಿಸದೇ ಇರುವುದು, ಲೈಟ್ಸ್ ಆಫ್ ಆಗುವ ಮುನ್ನವೇ ನಿದ್ರೆಗೆ ಜಾರಿರುವುದು, ಪಿಸು ಧ್ವನಿಯಲ್ಲಿ ಮಾತನಾಡುವುದು, ಸೇರಿದಂತೆ ಇತರೆ ನಿಯಮಗಳನ್ನ ಸ್ಪರ್ಧಿಗಳು ಮೀರಿದರೆ ಅವರಿಗೆ ಶಿಕ್ಷೆಯಾಗುತ್ತದೆ. ಈ ಬಾರಿ ಕೂಡ ಮನೆಯಲ್ಲಿ ಈ ರೀತಿಯ ಎಲ್ಲ ರೂಲ್ಸ್‌ಗಳನ್ನು ಸ್ಪರ್ಧಿಗಳು ಬ್ರೇಕ್ ಮಾಡಿದ್ದಾರೆ. ಹೀಗಾಗಿ, 10 ಸಾವಿರ ಪಾಯಿಂಟ್ಸ್‌ನಲ್ಲಿ ಐದುವರೆ ಸಾವಿರ ಪಾಯಿಂಟ್ಸ್ ಕಡಿತಗೊಳಿಸಿ ಉಳಿದ ನಾಲ್ಕುವರೆ ಸಾವಿರ ಪಾಯಿಂಟ್ಸ್‌ನಲ್ಲಿ ಮನೆ ಲಕ್ಷುರಿ ಬಜೆಟ್ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈ ಟಾಸ್ಕ್‌ನಲ್ಲಿ ತನಿಷಾ ಹಾಗೂ ಕಾರ್ತಿಕ್ ಸೋತರು.
ಎಡವಟ್ಟಾಯ್ತು!
ಲಕ್ಷುರಿ ಬಜೆಟ್‌ನಲ್ಲಿ ತನಿಷಾ ದಿನಸಿ ಸಾಮಾಗ್ರಿಗಳನ್ನು ಹೇಳಿದರೆ, ಕಾರ್ತಿಕ್ ಲೆಕ್ಕಾಚಾರ ಮಾಡಬೇಕು. ಇಬ್ಬರ ಮಧ್ಯೆ ಗೊಂದಲ ಉಂಟಾಗಿ ಟೋಟಲ್ ಮಾಡುವ ಮುನ್ನ ಸಮಯ ಮುಗಿದಿತ್ತು. ಹೀಗಾಗಿ ಈ ಬಾರಿ ದಿನಸಿ ಸಿಗೋದು ಡೌಟ್ ಎನ್ನಲಾಗುತ್ತಿದೆ.
ಕೆಂಡಾಮಂಡಲವಾದ್ರು ಸ್ಪರ್ಧಿಗಳು
ಇಷ್ಟಾದ ಮೇಲೆ ಸ್ಪರ್ಧಿಗಳ ಮಧ್ಯೆ ಈ ಬಗ್ಗೆ ಮನಸ್ತಾಪಗಳು ಆಯ್ತು. ವಿನಯ್ ಅವರು ನಮ್ರತಾ ಜತೆ ಲಕ್ಷುರಿ ಬಜೆಟ್‌ನಲ್ಲಿ ಈಗ ಏನೂ ಬರಲ್ಲ. ಫುಲ್ ಹೋಯ್ತು. ಈ ಕೆಲಸವನ್ನ ಇನ್ಮುಂದೆ ನಾವು ವಹಿಸಿಕೊಳ್ಳೋಣ ಎಂದರು. ಸಂತು ಕೂಡ ಕೇಳುವ ತಾಳ್ಮೆ ಯಾರಿಗೂ ಇಲ್ಲ ಎಂದರು. ತನಿಷಾ ಕೂಡ ʻʻಯಾರೂ ಬ್ಲೇಮ್ ತಗೊಳೋಕೆ ರೆಡಿ ಇಲ್ಲ. ಎಲ್ಲಾ ಆದ್ಮೇಲೆ ನನಗೆ ಗೊತ್ತು ಎಂದು ಹೇಳೋದುʼʼ ಎಂದು ಗರಂ ಆದರು.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳು ಕಲರ್ಸ್ ಕನ್ನಡಲ್ಲಿ ಪ್ರತಿದಿನ ರಾತ್ರಿ 9.30ಗೆ ಪ್ರಸಾರವಾಗುತ್ತದೆ.