Site icon Vistara News

BBK SEASON 10: ತನಿಷಾ VS ಸಂಗೀತಾ; ಒಂದೇ ಟೀಂನಲ್ಲಿ ಜೋಡೆತ್ತುಗಳು!

Sangeetha And Tanisha Competing With Each Other bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಹನ್ನಂದನೇ ವಾರ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸಂಗೀತಾ ಹಾಗೂ ತನಿಷಾ ನಡುವೆ ಭಾರಿ ಬಿರುಕು ಉಂಟಾಗಿದೆ. ಅದೇ ರೀತಿ ಕಾರ್ತಿಕ್‌ ಜತೆಗೂ ಸಂಗೀತಾ ಫ್ರೆಂಡ್‌ಶಿಪ್‌ ಕಟ್‌ ಆದಂತಿದೆ. ಸಂಗೀತಾ ತಮ್ಮ ತಂಡದಲ್ಲಿ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಲವು ಗೆಳೆಯರನ್ನು ಹೊಂದಿದ್ದ ಸಂಗೀತಾಗೆ ಈಗ ಡ್ರೋನ್ ಪ್ರತಾಪ್ ಒಬ್ಬರೇ ಗೆಳೆಯರಾಗಿದ್ದಾರೆ. ಅತ್ತ ವಿನಯ್‌ ಅವರಿಗೂ ಕಾರ್ತಿಕ್ ಪ್ರಬಲ ಸ್ಪರ್ಧೆ. ಈ ವಾರ ಬಿಗ್‌ ಬಾಸ್‌ ಟಾಸ್ಕ್‌ ಒಂದನ್ನು ನೀಡಿದಾಗ ವಿನಯ್‌ ಹಾಗೂ ಕಾರ್ತಿಕ್‌ ಒಂದೇ ಟೀಂ ಆದರು.

ಟಾಸ್ಕ್‌ ಏನು?

ತನಿಷಾ ಹಾಗೂ ಸಂಗೀತಾ ಅವರ ತಂಡಗಳನ್ನು ರಚಿಸಿ, ತಮ್ಮ ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಬಿಗ್‌ ಬಾಸ್‌ ಹೇಳಿದರು. ಇಬ್ಬರಿಗೂ 11 ಸಾವಿರ ರೂಪಾಯಿ ಹಣ ನೀಡಿ, ಪ್ರತಿ ಆಟಗಾರನಿಗೂ ಇಂತಿಷ್ಟೆಂದು ಹಣ ಕೊಟ್ಟು ತಲಾ ನಾಲ್ಕು ಜನರನ್ನು ಖರೀದಿಸಬೇಕು ಎಂದು ಷರತ್ತು ಹಾಕಲಾಯ್ತು. ಈ ಪಾಯಿಂಟ್ಸ್ ಉಪಯೋಗಿಸಿ, ತಮ್ಮ ತಮ್ಮ ತಂಡಕ್ಕೆ ಮಾಲೀಕರು ತಲಾ 4 ಸದಸ್ಯರನ್ನು ಖರೀದಿ ಮಾಡಬೇಕಿತ್ತು. ಯಾವುದೇ ತಂಡಕ್ಕೆ ಸೇರ್ಪಡೆಯಾಗದ ಒಬ್ಬ ಆಟಗಾರ, ಎರಡೂ ತಂಡಗಳಿಂದ ಹೊರಗುಳಿದಂತೆ. ಟಾಸ್ಕ್‌ಗಳನ್ನು ಗೆಲ್ಲುವ ತಂಡ ಪಾಯಿಂಟ್ಸ್ ಗಳಿಸುತ್ತಾ ಹೋಗುತ್ತದೆ. ಆ ಪಾಯಿಂಟ್‌ಗಳನ್ನು ಆಟಗಾರರೊಂದಿಗೆ ಮಾಲೀಕರು ಹಂಚಿಕೊಳ್ಳಬಹುದು. ವಾರದ ಟಾಸ್ಕ್ ಕೊನೆಯಲ್ಲಿ ಅತೀ ಹೆಚ್ಚು ಪಾಯಿಂಟ್ಸ್ ಹೊಂದಿರುವ ಒಬ್ಬ ಮಾಲೀಕ ಹಾಗೂ ಅತೀ ಹೆಚ್ಚು ಪಾಯಿಂಟ್ಸ್ ಪಡೆದಿರುವ 3 ಆಟಗಾರರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ.

ಇದನ್ನೂ ಓದಿ: BBK SEASON 10: ಈ ವಾರ ಯಾರೆಲ್ಲ ನಾಮಿನೇಟ್‌?

ಸಂಗೀತಾ ಅವರು ವಿನಯ್‌ ಬಿಟ್ಟು ಉಳಿದ ಕೆಲವರನ್ನು ಸಂಪರ್ಕಿಸಿ ತಲಾ ಒಂದು ಸಾವಿರ ರೂಪಾಯಿ ಕೆಲವರಿಗೆ ಇನ್ನೂ ಕಡಿಮೆ ಆಫರ್ ನೀಡಿದರು. ವಿನಯ್ ಅವರು, ತಮ್ಮನ್ನು ಕ್ಯಾಪ್ಟೆನ್ಸಿ ಟಾಸ್ಕ್​ಗೆ ಕಳಿಸುವಷ್ಟು ಹಣವನ್ನು ನೀಡುವುದಾದರೆ ಮಾತ್ರವೇ ಆಡುವುದಾಗಿ ಷರತ್ತು ಇಟ್ಟರು. ಅದಕ್ಕೆ ಒಪ್ಪಿ ಅವರನ್ನು ತಂಡಕ್ಕೆ ತೆಗೆದುಕೊಂಡರು ತನಿಷಾ. ಆದರೆ ಕಾರ್ತಿಕ್‌ ವಿಚಾರಕ್ಕೆ ಸಂಗೀತಾ ಅವರಿಗೆ ಅಸಮಾಧನ ಉಂಟಾಯ್ತು. ಕಾರ್ತಿಕ್‌ ಮೊದಲು ಸಂಗೀತಾಗೆ ಹೆಚ್ಚಿನ ಡಿಮ್ಯಾಂಡ್‌ ಮಾಡಿದರು. 5000 ರೂ. ಹಣ ಡೀಲ್‌ ಮಾಡಿದರು, ಕಾರ್ತಿಕ್‌. ಸಂಗೀತಾ ಅವರ ಬಳಿ ಅಷ್ಟೊಂದು ಹಣ ಇಲ್ಲವಾದ್ದರಿಂದ 4000 ರೂಪಾಯಿಗೆ ಫಿಕ್ಸ್ ಮಾಡಿ ಹಣವನ್ನು ಕಾರ್ತಿಕ್​ಗೆ ನೀಡಿದರು. ತನಿಷಾ, ಕಾರ್ತಿಕ್​ಗೆ ಇನ್ನೂ ಹೆಚ್ಚಿನ ಆಫರ್ ನೀಡಿದರು. ಬಳಿಕ ಕಾರ್ತಿಕ್, ತಾನು ಈಗ ಹಣ ಪಡೆದು, ತನಿಷಾ ತಂಡಕ್ಕೆ ಹೋಗುವುದು ಸರಿಯಾ ಎಂದು ಸಿರಿ ಅವರ ಬಳಿ ಚರ್ಚಿಸಿದರು. ಸಿರಿ ಸಹ ಅದು ಸರಿಯಲ್ಲ ಎಂದೇ ಹೇಳಿದರು. ಆದರೆ ಗೇಮ್ ದೃಷ್ಟಿಯಿಂದ ಯೋಚಿಸುವುದಾದರೆ ಎಲ್ಲವೂ ಸರಿ ಎಂದರು. ಕಾರ್ತಿಕ್, ಸಂಗೀತಾ ಬಳಿ ಹೋಗಿ ಮಾತುಕತೆಗೆ ಕೂತರು. ಕಾರ್ತಿಕ್ ಮೇಲೆ ಸಂಗೀತಾ ಅಸಮಾಧಾನದಿಂದ ಮಾತನಾಡಿದರು. ಇದಕ್ಕೇ ಕಾಯುತ್ತಿದ್ದ ಕಾರ್ತಿಕ್, ಹಣವನ್ನು ವಾಪಸ್ ಕೊಟ್ಟು, ತನಿಷಾ ತಂಡಕ್ಕೆ ಹೊರಟರು. ಅಲ್ಲಿಗೆ ತನಿಷಾ ತಂಡದಲ್ಲಿ ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಅವರುಗಳು ಸೇರಕೊಂಡರು.

ಯಾರೆಲ್ಲ ಟೀಂ?

ತಂಡಗಳನ್ನು ನೋಡಿ ಕಾರ್ತಿಕ್ ಶಿಫ್ಟ್ ಆದ್ರಾ? ಅಥವಾ ಪಾಯಿಂಟ್ಸ್ ಲೆಕ್ಕಾಚಾರದಿಂದ ಕಾರ್ತಿಕ್ ಮನಸ್ಸು ಬದಲಾಯಿಸಿದ್ರಾ? ಎಂದು ವಿಕ್ಷಕರು ಕಮೆಂಟ್‌ ಕೂಡ ಮಾಡಿದ್ದಾರೆ. ಸಂಗೀತಾ ತಂಡದಲ್ಲಿ- ನಮ್ರತಾ (1000) ಮೈಕಲ್ (2300), ಅವಿನಾಶ್ ಶೆಟ್ಟಿ (1350), ಡ್ರೋನ್ ಪ್ರತಾಪ್ (1800) ಇದ್ದಾರೆ.
ತನಿಷಾ ತಂಡದಲ್ಲಿ – ವರ್ತೂರು ಸಂತೋಷ್ (1000), ವಿನಯ್ (1500), ತುಕಾಲಿ ಸಂತು (1000), ಕಾರ್ತಿಕ್ (4300) ಇದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯಲ್ಲೂ ಬಿಡ್ಡಿಂಗ್‌ ಜೋರು; ಯಾರು, ಯಾವ ತಂಡ?

ಯಾವುದೇ ತಂಡದಲ್ಲಿ ಇಲ್ಲ ಸಿರಿ!

ಸಿರಿ ಯಾವುದೇ ತಂಡಕ್ಕೆ ಸೇರ್ಪಡೆಯಾಗಿಲ್ಲ. ಆದರೆ ಮೊದಲ ಟಾಸ್ಕ್​ನಲ್ಲಿ ಸಿರಿ ಅವರಿಗೆ ಆಡುವ ಅವಕಾಶ ನೀಡಲಾಯ್ತು. ಯಾವುದೇ ತಂಡ ಗೆದ್ದರು ಅವರಿಗೆ 3000 ರೂಪಾಯಿ ನೀಡಲಾಗುತ್ತದೆ ಎಂದು ಬಿಗ್​ಬಾಸ್ ಘೋಷಿಸಿದರು. ಸಿರಿ ಅವರು ಒಬ್ಬರೇ ತಂಡವಾಗಿ ಆಡುವ ಅವಕಾಶ ನೀಡಲಾಯ್ತು, ಅವರು ಗೆದ್ದಲ್ಲಿ ಇಡೀ 3000 ಪಾಯಿಂಟ್ಸ್ ಅವರಿಗೆ ನೀಡಲಾಗುತ್ತದೆ ಎಂದು ಬಿಗ್​ಬಾಸ್ ಘೋಷಿಸಿದ್ದಾರೆ.

ಕಾರ್ತಿಕ್‌ ಕೂಡ ವಿನಯ್‌ ತಂಡಕ್ಕೆ ಹೋದ ಕಾರಣ, ಪಾಸಿಟಿವ್‌ ಹಾಗೂ ನೆಗೆಟಿವ್‌ ಎರಡೂ ಆಗಬಹುದು ಎಂದು ವೀಕ್ಷಕರು ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ವಿನಯ್‌ ಯಾವಾಗಲೂ ಕಾರ್ತಿಕ್‌ ಅವನ್ನೇ ಟಾರ್ಗೆಟ್‌ ಮಾಡುತ್ತಿದ್ದರು, ಇದೀಗ ಕಾರ್ತಿಕ್‌ ಅವರು ಮತ್ತೆ ಎಡವಿದ್ದಾರೆ ಎಂಬುದು ವಿಕ್ಷಕರ ಅಭಿಪ್ರಾಯ. ಇಂದಿನ ವಾರ ಸಂಗೀತಾ ಹಾಗೂ ತನಿಷಾ ತಂಡದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ಪಾಯಿಂಟ್‌ ವಿಚಾರಕ್ಕೆ ಮನೆಯಲ್ಲಿ ಅಸಮಾಧಾನದ ಹೊಗೆ ಕೂಡ ಎದ್ದಿದೆ. ತನಿಷಾ ಕೂಡ 4300 ಪಾಯಿಂಟ್ಸ್‌ ಕೊಟ್ಟು ಕಾರ್ತಿಕ್‌ ಅವರನ್ನು ಕರೆದುಕೊಳ್ಳವಂತದ್ದು ತನಿಷಾಗೆ ಏನಿತ್ತು?ನಮಗೇ ಹಂಚಬಹುದಿತ್ತು ಎಂದು ತುಕಾಲಿ ಹಾಗೂ ವರ್ತೂರ್‌ ಅವರಲ್ಲಿಯೇ ಮಾತನಾಡಿಕೊಂಡರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version