Site icon Vistara News

BBK SEASON 10: ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ʻಕ್ಯಾಪ್ಟನ್ʼ; ತುಕಾಲಿಗೆ ಸೋಲು!

Sangeetha Becomes Captain Week 13 bigg boss

ಬೆಂಗಳೂರು: ಕೂಗಾಟ, ಕಿರುಚಾಟ ಹೀಗೆ ಅನೇಕ ಮನಸ್ತಾಪಗಳ (BBK SEASON 10) ನಂತರ ʻಬಿಗ್‌ ಬಾಸ್‌ ʼಸೀಸನ್‌ 10ರ 13ನೇ ವಾರ ಸಂಗೀತಾ ಮನೆಯ ʻಕ್ಯಾಪ್ಟನ್‌ʼ ಆಗಿದ್ದಾರೆ. ಸಿರಿ ಅವರು ಮನೆಯಿಂದ ಹೊರ ಹೋಗುವಾಗ ‘ಬಿಗ್ ಬಾಸ್‌’ ವಿಶೇಷ ಅಧಿಕಾರ ನೀಡಿದರು. ಇದರ ಅನುಸಾರ ತಮಗೆ ಇಷ್ಟದ ಸ್ಪರ್ಧಿ ಕ್ಯಾಪ್ಟನ್ಸಿ ಓಟದಲ್ಲಿ ಅಡ್ವಾಂಟೇಜ್ ನೀಡಬೇಕಿತ್ತು. ಆಗ, ಸಂಗೀತಾ ಅವರಿಗೆ ಸಿರಿ ಅಡ್ವಾಂಟೇಜ್ ನೀಡಿದರು. ಹೀಗೆ ಎರಡು ಹಂತಗಳಲ್ಲಿ ನಡೆದ ʻಕ್ಯಾಪ್ಟನ್ಸಿʼ ಟಾಸ್ಕ್‌ನಲ್ಲಿ ಗೆದ್ದು ಸಂಗೀತಾ ಅವರು ತುಕಾಲಿ ಸಂತೋಷ್‌ ಅವರನ್ನು ಸೋಲಿಸಿ ಮನೆಯ ʻಕ್ಯಾಪ್ಟನ್‌ʼ ಆಗಿದ್ದಾರೆ.

ಟಾಸ್ಕ್‌ನಲ್ಲಿ ಮೊದಲು ಹೋದ ಮೈಕಲ್ ಹಾಗೂ ವಿನಯ್​ರಲ್ಲಿ ಮನೆ ಸದಸ್ಯರು ವಿನಯ್​ರನ್ನು ಆರಿಸಿದರು. ಬಳಿಕ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರಲ್ಲಿ ತುಕಾಲಿ ಸಂತು ಆಯ್ಕೆಯಾದರು. ಅದಾದ ಬಳಿಕ ಬಂದ ನಮ್ರತಾ ಹಾಗೂ ಕಾರ್ತಿಕ್ ಅವರನ್ನು ಕಾರ್ತಿಕ್ ಅವರನ್ನು ಹೆಚ್ಚು ಮಂದಿ ಆಯ್ಕೆ ಮಾಡಿದರು. ಆದರೆ ಸಂಗೀತಾ ಮಾತ್ರ ನಮ್ರತಾಗೆ ಮತ ಹಾಕಿದರು. ಅಲ್ಲಿಗೆ ವಿನಯ್, ಕಾರ್ತಿಕ್, ತುಕಾಲಿ ಸಂತು ಹಾಗೂ ಸಂಗೀತಾ ಅವರುಗಳು ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದರು. ಮತ್ತೊಂದು ಅವಕಾಶವನ್ನು ಬಿಗ್‌ ಬಾಸ್‌ ಸಂಗೀತಾ ಅವರಿಗೆ ನೀಡಿದರು. ಸಂಗೀತಾ ಅವರು ತಮಗೆ ಪ್ರಬಲ ಎದುರಾಳಿ ಆಗಬಹುದಾಗಿದ್ದ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನೂ ಸಹ ಹೊರಗೆ ಇಟ್ಟರು. ಕೊನೆಗೆ ತುಕಾಲಿ ಸಂತು ಹಾಗೂ ಸಂಗೀತಾ ಮಾತ್ರವೇ ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದರು.

ನಿನ್ನೆಯ ಸಂಚಿಕೆಯಲ್ಲಿ ʻಬಿಗ್‌ ಬಾಸ್‌ʼ ಆಟ ಆಡಿಸುವ ಮೊದಲು ತಾವು ಕ್ಯಾಪ್ಟನ್ ಆದರೆ ಹಿಂದಿನ ಕ್ಯಾಪ್ಟನ್​ಗಳ ಯಾವ ಗುಣವನ್ನು ಅಳವಡಿಸಿಕೊಳ್ಳುತ್ತೇವೆ, ಯಾವ ಗುಣವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ವಿವರಿಸಬೇಕಿತ್ತು. ಚೆಂಡನ್ನು ಹಲಗೆಯ ಮೇಲಿಟ್ಟು ಬ್ಯಾಲೆನ್ಸ್ ಮಾಡುವುದು ಆ ಬಳಿಕ ಅದೇ ಚೆಂಡನ್ನು ಗುರಿ ನೋಡಿ ರಂಧ್ರಕ್ಕೆ ಹಾಕುವ ಟಾಸ್ಕ್ ಬಿಗ್​ಬಾಸ್ ನೀಡಿದರು. ಈ ಟಾಸ್ಕ್‌ನಲ್ಲಿ ಸಂಗೀತಾ ವಿನ್‌ ಆದರು.

ಇದನ್ನೂ ಓದಿ: BBK SEASON 10: ಯಾರಾಗ್ತಾರೆ ಈ ವಾರದ ಕಳಪೆ ಸ್ಪರ್ಧಿ? ಜೈಲಿಗೆ ಹೋಗ್ತಾರಾ ಮೈಕಲ್‌, ವರ್ತೂರ್‌?

ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ಕ್ಯಾಪ್ಟನ್

‘ಬಿಗ್ ಬಾಸ್‌’ ಮನೆಯಲ್ಲಿ ಸತತವಾಗಿ ಕಳೆದ 3 ವಾರಗಳಿಂದ ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಆಗುತ್ತಿದ್ದಾರೆ. ನಮ್ರತಾ, ತನಿಷಾ ಬಳಿಕ ಸಂಗೀತಾ ಈಗ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಕ್ಯಾಪ್ಟನ್ಸಿ ಹುದ್ದೆಗೆ ಭಾರಿ ಪೈಪೋಟಿಗಳು ಆಗುತ್ತಿವೆ. ಕ್ಯಾಪ್ಟನ್‌ ಆದರೆ ಒಂದು ಸಪರೇಟ್‌ ರೂಮ್‌, ಇಡೀ ವಾರ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರದ ಜತೆಗೆ ಒಂದು ವಾರ ನಾಮಿನೇಷನ್​ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಪ್ರಯತ್ನಿಸಿದ್ದರು.  

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version