ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಸ್ಪರ್ಧಿ ಸಂಗೀತಾ ಹಾಗೂ ವಿನಯ್ ನಡುವೆ ಜಗಳ ನಿತ್ಯವೂ ಆಗುತ್ತಲೇ ಇರುತ್ತವೆ. ಇನ್ನೊಂದೆಡೆ ಇವರಿಬ್ಬರ ಫ್ಯಾನ್ಸ್ ಕೂಡ ಕಮೆಂಟ್‌ನಲ್ಲಿ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ. ಫಿನಾಲೆಗೆ ಇವರಿಬ್ಬರೂ ಹೋಗುವ ಸಾಧ್ಯತೆ ಕೂಡ ಇದೆ. ಆದರೀಗ ಸಂಗೀತಾ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಫೇಕ್ ಅಕೌಂಟ್ ಸೃಷ್ಟಿ ಮಾಡಿ, ಪ್ರತಿಸ್ಪರ್ಧಿಗಳ ಮೇಲೆ ಆರೋಪ ಮಾಡುತ್ತಿದ್ದಾರಂತೆ. ಈ ಬಗ್ಗೆ ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸುಚಿತ್ರಾ ಪೋಸ್ಟ್ ಏನು?
“ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ಫೇಕ್ ಅಕೌಂಟ್ಸ್ ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತ, ಸಂಗೀತಾ ಹೆಸರನ್ನು ಎಳೆಯುತ್ತಾ ಸುಮ್ಮ ಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ. ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ, ಮಾಡುವುದೂ ಇಲ್ಲ. ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ” ಎಂದು ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
ವಿನಯ್ ಹಾಗೂ ಸಂಗೀತಾ ಅವರ ಕಿತ್ತಾಟ ಹೊಸತೇನಲ್ಲ. ಈಗಾಗಲೇ ಸ್ಪರ್ಧಿಗಳು 75 ದಿನ ಮನೆಯಲ್ಲಿ ಮುಗಿಸಿದ್ದಾರೆ. ಒಮ್ಮೆ ಸಂಗೀತಾ-ನಮ್ರತಾ ಒಂದಾದರೆ, ಇನ್ನೊಮ್ಮೆ ವಿರೋಧ ಮಾಡುತ್ತಿರುತ್ತಾರೆ. ಸಂಗೀತಾ ವಿರುದ್ಧ ಅದೆಷ್ಟೋ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ತುಕಾಲಿ, ಮೈಕಲ್ ಸೇರಿದಂತೆ ಅನೇಕರು ಸಂಗೀತಾ ವಿರುದ್ಧ ಕೂಗಿದ್ದಾರೆ. ಮೈಕಲ್ ಅವರಂತೂ ಸಂಗೀತಾ ಈ ಮನೆಯ ನೆಗೆಟಿವಿಟಿ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದ್ಯಾವುದಕ್ಕೂ ಅಂಜದ ಸಂಗೀತಾ ಫಿನಾಲೆಗೆ ಬರೋದು ಗ್ಯಾರಂಟಿ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್. ಜನವರಿ ತಿಂಗಳ ಅಂತ್ಯದಲ್ಲಿ ಫಿನಾಲೆ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ: BBK SEASON 10: ನಂಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ? ಶ್ರುತಿ ಅವಾಜ್ ಹಾಕಿದ್ದು ಯಾರಿಗೆ?
ಇದೆಂತಾ ಫ್ಯಾಮಿಲಿ ಶೋ? ಏನಿದು ಸುದೀಪ್ ಸರ್?
ಈ ಹಿಂದೆ ಕೂಡ ಸಂಗೀತಾ ಅವರ ಸಹೋದರ ಸುದೀಪ್ ಅವರಿಗೆ ಪ್ರಶ್ನೆ ಇಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಿನಯ್ ತಂಡ ಅಗ್ರೆಸಿವ್ ಆಗಿ ಆಟ ಆಡಿದ್ದು, ಸಂಗೀತಾ ಹಾಗೂ ಡ್ರೋನ್ ತಾಪ್ ಗಾಯಗೊಂಡಿದ್ದರು. ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದರು. ಕಿಚ್ಚ ಸುದೀಪ್ ಅವರಿಗೆ ಬಿಗ್‌ಬಾಸ್ ಮನೆ ಎಷ್ಟು ಸುರಕ್ಷಿತ? ಎಂದು ಪ್ರಶ್ನೆ ಇಟ್ಟಿದ್ದರು. ಸಂಗೀತಾ ಸಹೋದರ ಸಂತೋಷ್ ಕುಮಾರ್ ಅವರು ಪೋಸ್ಟ್‌ನಲ್ಲಿ “ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ ಎಂದು. ಏನು ಆಗುವುದಿಲ್ಲ ಎಂದು. ಆದರೆ ಈಗ ನೋಡಿದರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಎಂದು ಕಾಣಲ್ಲ. ಕೇವಲ ಹಿಂಸೆಯೇ ಕಾಣುತ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ” ಎಂದು ಪ್ರಶ್ನಿಸಿದ್ದರು. ಸುದೀಪ್ ಸರ್ ಈ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರುವುದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದರು..
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ