ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK SEASON 10) ಏಳನೇ ವಾರಕ್ಕೆ ಕಾಲಿಟ್ಟಿದೆ. ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಬಿರುಕು ಉಂಟಾಗಿದೆ. ಕಾರ್ತಿಕ್ ತಲೆ ಬೋಳಿಸಿಕೊಂಡ ಬಳಿಕ ಸಂಗೀತಾಗೆ ಪಶ್ಚಾತ್ತಾಪ ಕಾಡಿದೆ. ‘ನಾನಲ್ಲದೇ ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ. ಇದು ನಾನಲ್ಲ’ ಎಂದು ಸಂಗೀತಾ ಅತ್ತಿದ್ದಾರೆ. ಇದೀಗ ಸಂಗೀತಾ ಅವರು ಮನೆಯಿಂದ ಹೊರ ನಡೆದಾರಾ? ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಇದೆ. ಮಾತ್ರವಲ್ಲ ಕಲರ್ಸ್ ಕನ್ನಡ ಹಂಚಿಕೊಂಡ ಪ್ರೋಮೊ ನೋಡಿ ಸಂಗೀತಾ ಫ್ಯಾನ್ಸ್ಗೆ ಆತಂಕ ಹೆಚ್ಚಾಗಿದೆ.
ಸಂಗೀತಾ ಅವರು ಕಳೆದ ಸಂಚಿಕೆಯಲ್ಲಿ ಕಾರ್ತಿಕ್ ಜತೆ ಜಗಳ ಆಡಿದರು. ಊಟದ ವಿಚಾರಕ್ಕೆ ಸ್ನೇಹಿತ್ ಅವರು ಕಾರ್ತಿಕ್ಗೆ ಬೈದಿದ್ದರೆ ಇತ್ತ ಸಂಗೀತಾ ಗಳಗಳನೇ ಅತ್ತರು. ಕಾರ್ತಿಕ್ ಕೂಡ ಅವರು ಮನಸ್ಸಿಗೆ ತಗೊಂಡರೆ ನಾನೇನೂ ಮಾಡೋಕೆ ಆಗಲ್ಲʼʼ ಎಂದು ಮನೆಮಂದಿ ಮುಂದೆ ಅಂದರು. ಇಷ್ಟೆಲ್ಲ ಆದ ಬಳಿಕ ಸಂಗೀತಾ ಅವರ ಕೈಗೆ ಪೆಟ್ಟಾದ ಕಾರಣ ತರಕಾರಿ ಕಟ್ ಮಾಡಲು ಆಗಲ್ಲ. ಬೇರೆ ಡಿಪಾರ್ಟ್ಮೆಂಟ್ ಕೊಡಿ ಎಂದು ಹೇಳಿದ್ದಾರೆ. ಈ ಬಗ್ಗೆಯೂ ಇವರಿಬ್ಬರ ಮಧ್ಯೆ ಮನಸ್ತಾಪವಾಗಿದೆ. ಮಾತ್ರವಲ್ಲ, ವಿನಯ್ ಅವರ ಹೆಸರು ಸಂಗೀತಾ ಹೇಳುತ್ತಿದ್ದಂತೆ ಕಾರ್ತಿಕ್ ಮತ್ತೆ ಮತ್ತೆ ಧ್ವನಿ ಎತ್ತುತ್ತಲೇ ಇದ್ದರು.
ಇದನ್ನೂ ಓದಿ: BBK Season 10: ಮನೆಯಲ್ಲಿ ಕಾರ್ತಿಕ್ ಕೂಗಾಟ; ಗಳಗಳನೆ ಅತ್ತ ಸಂಗೀತಾ!
ಇದೀಗ ಪ್ರೋಮೊದಲ್ಲಿ ಸಂಗೀತಾ ಅವರು ಕಾರ್ತಿಕ್ ವಿಚಾರವಾಗಿ ಕುಗ್ಗಿ ಹೋದಂತಿದೆ. ‘ನಾನಲ್ಲದೇ ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ. ಇದು ನಾನಲ್ಲ’ ಎಂದು ಸಂಗೀತಾ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಕಾರ್ತಿಕ್ ಪ್ರಯತ್ನಿಸಿದ್ದಾರೆ. ಆದರೂ ಅವರ ಜಗಳ ಮುಗಿಯಲೇ ಇಲ್ಲ. ‘ನಾನು ಆಟ ಆಡುವುದಿಲ್ಲ..’ ಎಂದು ಸಂಗೀತಾ ಹೇಳಿದ್ದಾರೆ. ನಂತರದಲ್ಲಿ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ಓಪನ್ ಆಗಿದೆ. ಅತಿಥಿಯಾಗಿ ಬಂದಿದ್ದ ಬ್ರಹ್ಮಾಂಡ ಗುರೂಜಿ ಅವರನ್ನು ವಾಪಸ್ ಕಳಿಸಲು ಕೂಡ ಬಾಗಿಲು ತೆರೆದಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ