Site icon Vistara News

BBK SEASON 10: ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!

Sangeetha is more cruel than Vinay drinking tonic task bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಸಂಗೀತಾ ಹಾಗೂ ವಿನಯ್‌ ಅವರು ಕಚ್ಚಾಡಿಕೊಳ್ಳುವುದು ಇದೇನು ಮೊದಲೇನಲ್ಲ. ಪರಸ್ಪರ ವೈರತ್ವ ತೋರಿಸಿದ್ದ ಸಂಗೀತಾ ಹಾಗೂ ವಿನಯ್, ಕಳೆದೆರಡು ವಾರ ಸ್ನೇಹಿತರಂತೆ ಇದ್ದರು, ಈಗ ಮತ್ತೆ ಇಬ್ಬರೂ ವೈರಿಗಳಾಗಿದ್ದಾರೆ. ಇದೀಗ ಇಬ್ಬರಲ್ಲಿ ಹೆಚ್ಚಿನ ದುರಹಂಕಾರ ಯಾರಿಗೆ ಎಂಬುದು ಬಯಲಿಗೆ ಬಂದಿದೆ.

ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಮನೆಯಲ್ಲಿ ತರಸಲಾಗಿತ್ತು. ಈ ವೇಳೆ ಹೆಚ್ಚು ಟಾನಿಕ್ ಬಂದಿದ್ದು ಸಂಗೀತಾಗೆ, ಎರಡನೇ ಸ್ಥಾನ ವಿನಯ್ ಗೌಡಗೆ. ಪ್ರತಿಯೊಬ್ಬ ಸದಸ್ಯನು ಮನೆಯ ಎರಡು ಟಾನಿಕ್ ಅನ್ನು ಯಾರಾದರೂ ಇಬ್ಬರಿಗೆ ಕೊಡಬೇಕಿತ್ತು. ಸಂಗೀತಾ ಅವರಿಗೆ ಏಳು ಟಾನಿಕ್‌ ದೊರೆತರೆ, ವಿನಯ್‌ ಅವರಿಗೆ 5 ಸಿಕ್ಕಿತ್ತು. ಇದರಲ್ಲಿ ಐದು ದುರಹಂಕಾರವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುದು ಆಗಿತ್ತು.

ಅದೇ ರೀತಿ ನಂಬಿಕೆ ದ್ರೋಹ ಹಾಗೂ ನಾಲಿಗೆಗೆ ಲಗಾಮು ಔಷಧ ತಲಾ ಒಂದೊಂದು ಬಂತು. ವಿನಯ್‌ ಅವರಿಗೆ ಐದು ಟಾನಿಕ್​ಗಳು ಬಂದವು. ಅದರಲ್ಲಿ ಎರಡು ದುರಹಂಕಾರ, ಇನ್ನುಳಿದವೆಲ್ಲ ನಾಲಿಗೆ ಬಿಗಿ ಹಿಡಿದುಕೊಳ್ಳಬೇಕು ಎಂಬ ಟಾನಿಕ್ ಆಗಿತ್ತು. ಇವರಿಬ್ಬರ ಜತೆಗೆ ತುಕಾಲಿಗೂ ಬಂದಿದೆ. ತುಕಾಲಿ ನಾಲಿಗೆ ಬಿಗಿ ಹಿಡಿದುಕೊಳ್ಳಬೇಕು ಎಂಬ ಕೆಲವು ಟಾನಿಕ್​ಗಳು ಬಂದವು, ಸಿರಿ ಅವರಿಗೆ ಹೇಡಿತನ ನಿವಾರಣೆ ಟಾನಿಕ್ ನೀಡಿದರು. ಡ್ರೋನ್ ಪ್ರತಾಪ್​ಗೆ ನಂಬಿಕೆ ದ್ರೋಹ ಟಾನಿಕ್‌ವನ್ನು ನಮ್ರತಾ ಕೊಟ್ಟರು. ಸ್ನೇಹಿತ್​ಗೂ ಕೆಲವು ನಾಲಿಗೆ ಬಿಗಿ ಹಿಡಿತದ ಟಾನಿಕ್ ಸಿಕ್ಕರೆ, ಮೈಕಲ್‌ಗೆ ದುರಹಂಕಾರ, ಕಾರ್ತಿಕ್‌ಗೆ ನಾಲಿಗೆ ಹಿಡಿತ, ವರ್ತೂರು ಸಂತೋಷ್​ಗೆ, ತನಿಷಾಗೆ ಹಾಗೂ ನಮ್ರತಾಗೆ ಯಾವುದೇ ಟಾನಿಕ್​ ಸಿಗಲಿಲ್ಲ. ತನಿಷಾ ಅವರು ಪವಿ ಅವರಿಗೆ ನಾಲಿಗೆ ಲಗಾಮ್‌ ಕೊಟ್ಟರು. ನಮ್ರತಾ ಅವರಿಗೆ ನಂಬಿಕೆ ದ್ರೋಹ ಟಾನಿಕ್‌ ಕೊಟ್ಟರು.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್‌! ಸ್ನೇಹಿತ್- ಮೈಕಲ್‌ ಸೇಫ್‌!

ಈ ಟಾಸ್ಕ್‌ ಆಗುವಾಗ ಕೂಡ ಸಂಗೀತಾ ಹಾಗೂ ವಿನಯ್‌ ಅವರ ಮಾತಿನ ಚಕಮಕ್ಕಿ ತಾರಕಕ್ಕೇರಿತ್ತು. ಎಲಿಬಿಲ್ಲದ ನಾಲಗೆ, ಯಾರ ಬಗ್ಗೆ ಏನಾದರೂ ಮಾತನಾಡುತ್ತಾನೆ ಎಂದು ವಿನಯ್ ಬಗ್ಗೆ ಸಂಗೀತಾ ಹೇಳಿದರೆ, ಸಂಗೀತಾ ಜತೆ ಫ್ರೆಂಡ್​ಶಿಫ್ ಮಾಡಿದರೆ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಬೇಕು ಅವರು ನಿರೀಕ್ಷೆ ಮಾಡುತ್ತಾರೆ ಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version