Site icon Vistara News

BBK Season 10: ‘ಐ ಲವ್ ಯೂ’ ಎಂದು ಪ್ರತಾಪ್‌ಗೆ ಪ್ರಪೋಸ್‌ ಮಾಡಿದ ಸಂಗೀತಾ!

Sangeetha proposed to drone Prathap saying 'I love you'!

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಡ್ರೋನ್‌ ಪ್ರತಾಪ್‌ ದಿನೇ ದಿನೇ ಮನೆಯಲ್ಲಿ ಹೈಪರ್‌ ಆ್ಯಕ್ಟಿವ್‌ ಆಗುತ್ತಿದ್ದಾರೆ. ಮಾತ್ರವಲ್ಲ ದೀದಿ ದೀದಿ ಎನ್ನುತ್ತಲೇ ಮನೆಯ ಎಲ್ಲ ಹೆಣ್ಣು ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ಸಂಗೀತಾ ಅವರು ಪ್ರತಾಪ್‌ ಅವರಿಗೆ ತುಂಬಾ ಕ್ಲೋಸ್‌. ಮನೆಯೊಳಗೆ ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ಕೊಂಡಿದ್ದಾರೆ. ಆದರೆ ಇದು ತಮಾಷೆಗಾಗಿ ಮಾಡಿದ್ದು.

ಸಂಗೀತಾ ಅವರು ಸದಾ ಡ್ರೋನ್‌ ಪರ ನಿಲ್ಲುತ್ತಾರೆ. ಸಂಗೀತಾ, ನೀತು, ಪ್ರತಾಪ್‌ ಎಲ್ಲ ಮಾತುಕತೆ ಮಾಡುವಾಗ ತಮಾಷೆಗಾಗಿ ಸಂಗೀತಾ ಅವರು ಪ್ರತಾಪ್‌ ಅವರಿಗೆ ಪ್ರಪೋಸ್‌ ಮಾಡಿದರು. ಸಂಗೀತಾ ಪ್ರಪೋಸ್‌ ಮಾಡುವಾಗ ಪ್ರತಾಪ್‌ ʻʻದಯವಿಟ್ಟು ಬಿಟ್‌ಬಿಡಮ್ಮ.. ನನಗೆ ತುಂಬಾ ಗೋಲ್ಸ್‌ ಇದೆ ಲೈಫ್‌ನಲ್ಲಿʼʼಎಂದು ಮಾತು ಶುರು ಮಾಡಿದರು. ಸಂಗೀತಾ ಅವರು ಪ್ರತಾಪ್‌ಗೆ ʻʻನಿನ್ನ ಅಪ್ಪನನ್ನ ಒಪ್ಪಿಸ್ತೀನಿ. ಯಾಕೆ ನಗ್ತಿದ್ದೀಯಾ.. ಐ ಲವ್ ಯೂ ಅಲ್ವಾ.. ಐ ಲವ್ ಯೂ. ನಾನು ಫನ್ನಿ ಆಗಿ ಕಾಣ್ತಿದ್ದೀನಾ? ನಾನು ನಿಮಗೆ ಚೆನ್ನಾಗಿ ಕಾಣಿಸ್ತಿಲ್ವಾ?ನೀವು ನನಗೆ ಲವರ್ ತರಹ ಕಾಣ್ತಿದ್ದೀರಾ. ನನ್ನ ಫ್ಯೂಚರ್‌ ಹಸ್ಬೆಂಡ್‌ ನಿಮ್ಮಲ್ಲಿ ಕಾಣ್ತಿದೆ. ದುಡ್ಡಿಗಾಗಿ ಯಾರಾದರೂ ಪ್ರೀತಿ ಮಾಡ್ತಾರಾ? ಮದುವೆ ಆಗ್ತಾರಾ? ನಿಮ್ಮ ಸ್ಮೈಲ್, ಹೃದಯ, ಉಸ್ತುವಾರಿ ನೋಡಿ ಫ್ಲ್ಯಾಟ್ ಆಗ್ಬಿಟ್ಟೆʼʼಎಂದು ಹೀಗೆ ಪ್ರತಾಪ್‌ ಅವರ ಕಾಲು ಎಳೆದಿದ್ದಾರೆ.

ಇತ್ತ ಡ್ರೋನ್‌ ಪ್ರತಾಪ್‌ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಸಂಗೀತಾಗೆ ಡ್ರೋನ್‌ ಪ್ರತಾಪ್‌ ಮಾತನಾಡಿ ʻʻನನಗೆ ಇಷ್ಟ ಇಲ್ಲ. ಚೆನ್ನಾಗಿ ಕಾಣಿಸುತ್ತಿದ್ದೀರಾ. ಅಕ್ಕನ ತರಹ ಕಾಣ್ತಿದ್ದೀರಾ. ನಾನು ನಿಮ್ಮನ್ನ ಎಲ್ಲೂ ಕರ್ಕೊಂಡ್ ಹೋಗಲ್ಲ. ನನ್ನದು ಬೋರಿಂಗ್ ಲೈಫ್. ವರ್ಷಗಳ ಕಾಲ ನಾನು ಹಾಗೇ ಇರೋದು. ಸಿನಿಮಾಗೆ ಹೋಗಲ್ಲ, ರೆಸ್ಟೋರೆಂಟ್‌ಗೆ ಹೋಗಲ್ಲ, ಪಾರ್ಕ್‌ಗೆ ಹೋಗಲ್ಲ. ನಮ್ಮ ಮನೆಯಲ್ಲಿ ಅಡುಗೆ ಮಾಡಬೇಕು. ನಮ್ಮ ಅಪ್ಪ-ಅಮ್ಮನಿಗೆ ಅಡುಗೆ ಮಾಡಬೇಕು.ದೀದಿ.. ಸಾಕುʼʼಎಂದು ಹೇಳಿದ್ದಾರೆ.

ಇದನ್ನೂ ಓದಿ: BBK Season 10: ಸಂತೋಷ್ ಡ್ರಗ್ಸ್ ಅಡಿಕ್ಟ್, ರೈತರು ನಂಬಬೇಡಿ; ಕೇಳಿಬಂತು ಆರೋಪ!

ಈ ಬಗ್ಗೆ ಪ್ರೇಕ್ಷಕರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಕಾರ್ತಿಕ್‌ ಅವರಿಗೆ ಬೇಕು ಎಂತಲೇ ಉರಿಸಬೇಕು ಎಂದು ಸಂಗೀತಾ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾನೆ ವಿನಯ್‌ ಆರೋಪಕ್ಕೆ ಪ್ರತಾಪ್‌ ಪರ ನಿಂತಿದ್ದ ಸಂಗೀತಾ

ವಿನಯ್‌ ಮನೆಯಲ್ಲಿ ಹಿಂದೊಮ್ಮೆ ‘’ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ’’ ಎಂದು ಡ್ರೋನ್ ಪ್ರತಾಪ್ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇಶಾನಿ ಕೂಡ ಈ ಬಗ್ಗೆ ಸಾಥ್‌ ಕೊಟ್ಟಿದ್ದರು. ಇದು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಯಿತು. ‘’ಡ್ರೋನ್ ಪ್ರತಾಪ್ ಜೆಂಟಲ್‌ಮ್ಯಾನ್‌. ಯಾರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಲ್ಲ. ಇದನ್ನು ನಾನು ಪಕ್ಕಾ ಹೇಳ್ತೀನಿ’’ ಎಂದು ಈ ಹಿಂದೆ ಕಿಚ್ಚ ಸುದೀಪ್ ಮುಂದೆ ಸಂಗೀತಾ ಶೃಂಗೇರಿ ಹೇಳಿದ್ದರು.

ಡ್ರೋನ್‌ ಪ್ರತಾಪ್‌ ಅವರು ಮಹಿಳಾ ಸ್ಪರ್ಧಿಗಳಿಗೆ ʻದೀದಿʼ ಎಂತಲೇ ಮುಂಚಿನಿಂದಲೂ ಕರೆದುಕೊಂಡು ಬಂದಿದ್ದಾರೆ. ಇನ್ನು ನಾಮಿನೇಶನ್‌ ಟಾಸ್ಕ್‌ನಲ್ಲಿಯೂ ಪಾಸ್‌ ಸಿಕ್ಕಾಗ ಎಲ್ಲಾ ಮಹಿಳಾ ಮಣಿಯರಿಗೆ ಅವರು ನೀಡಿದರು. ಪುರುಷ ಸ್ಪರ್ಧಿಗಳನ್ನು ‘ಅಣ್ಣ’ ಎಂದೇ ಕರೆದಿದ್ದಾರೆ. ಹೀಗಿರುವಾಗ ವಿನಯ್‌ ಈ ರೀತಿ ಮಾತನಾಡಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತ್ತು.


Exit mobile version