Site icon Vistara News

BBK SEASON 10: ವಿನಯ್‌ ತುಂಬ ಸ್ವೀಟ್‌ ಎಂದ ಸಂಗೀತಾ; ಗಾಬರಿಗೊಂಡ ಶೈನ್‌ ಶೆಟ್ಟಿ!

sangeetha says vinay gowda sweet in task of Bigg boss

ಬೆಂಗಳೂರು; ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಹನ್ನೊಂದನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಡಬಲ್‌ ಎಲಿಮಿನೇಶನ್‌ ಇರಲಿದೆ ಎಂದೂ ವರದಿಯಾಗಿದೆ. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ (Shine Shetty) ಮತ್ತು ನಟಿ ಶುಭಾ ಪೂಂಜಾ (Shubha Poonja) ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳಿಗೆ ಆಟವನ್ನು ಆಡಿಸಿದ್ದಾರೆ. ವಿನಯ್-ಸಂಗೀತಾ ಸ್ನೇಹದ ಪನ್ನೀರಿನ ಸಿಂಚನ ಪ್ರೋಮೊದಲ್ಲಿ ರಿವೀಲ್‌ ಆಗಿದೆ.

ಬಿಗ್‌ ಬಾಸ್‌ ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಸಂಗೀತಾ ಹಾಗೂ ವಿನಯ್‌ ನಡುವೆ ಜಗಳಗಳು ಆಗುತ್ತಲೇ ಇದೆ. ಪ್ರತಿ ಬಾರಿ ಒಬ್ಬರಿಗೊಬ್ಬರು ಟಾರ್ಗೆಟ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ವಿನಯ್‌ ಗೌಡ ಮತ್ತು ಸಂಗೀತ ಜತೆಯಾಗಿ ನಟಿದ್ದರು. ಆದರೆ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿಯಾದ ಬಳಿಕ ಅವರು ಕಿತ್ತಾಡುತ್ತಲೇ ಸುದ್ದಿಯಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ವಾಗ್ವಾದ, ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಅವರಿಬ್ಬರು ಸ್ನೇಹಿತರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ದೀಪಾವಳಿ ಸಮಯದಲ್ಲಿ ಸಂಗೀತಾ ಶೃಂಗೇರಿ ರಾಕೆಟ್ ಪಟಾಕಿಯನ್ನು ವಿನಯ್‌ಗೆ ನೀಡಿ, ‘ʼರಾಕೆಟ್‌ನಂತೆಯೇ ನೀವು ಎತ್ತರಕ್ಕೆ ಹೋಗಿ. ನಿಮ್ಮ ಸಿನಿಮಾಗಳು ಹಿಟ್ ಆಗಲಿ, ಯಶಸ್ಸು ಸಿಗಲಿ’ʼ ಎಂದೆಲ್ಲ ಹಾರೈಸಿದ್ದರು. ಇತ್ತ ವಿನಯ್‌ ಕೂಡ ಸಂಗೀತಾ ಅವರನ್ನು ಹೊಗಳಿದ್ದರು. ಸಂಗೀತಾ ಚೆಂದವಾಗಿ ಸೀರೆಯುಟ್ಟು ರೆಡಿಯಾದಾಗ ವಿನಯ್‌ ಮೆಚ್ಚುಗೆ ಸೂಚಿಸಿದ್ದರು. ವಿನಯ್‌ ಅವರ ಈ ಹೊಗಳಿಕೆ ಮಾತು ಕೇಳಿ ನಮ್ರತಾ ಕೂಡ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಈ ಬೆಳವಣಿಗೆ ಸುದೀಪ್‌ ಅವರಿಗೂ ಅಚ್ಚರಿ ತಂದಿತ್ತು. ಆದರೆ ಈ ಆತ್ಮೀಯತೆ ಹೆಚ್ಚು ದಿನ ಉಳಿಯಲಿಲ್ಲ.

ಇದನ್ನೂ ಓದಿ: BBK SEASON 10: ಈ ವಾರ ಡಬಲ್‌ ಎಲಿಮಿನೇಶನ್‌ ಜತೆ ಶೈನ್ ಶೆಟ್ಟಿ, ಶುಭಾ ಎಂಟ್ರಿ!

ಆದರೀಗ ಕಲರ್ಸ್‌ ಕನ್ನಡ ಶೇರ್‌ ಮಾಡಿರುವ ಪ್ರೋಮೊದಲ್ಲಿ ವಿನಯ್‌ ಅವರು ಸಂಗೀತಾ ಅವರನ್ನು ಹೊಗಳಿದ್ದಾರೆ. ಒಬ್ಬರನ್ನೊಬ್ಬರು ಹೊಗಳಿ ಮಾತನಾಡಬೇಕು ಎಂಬ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಸಂಗೀತಾ ಅವರು ಮೊದಲಿಗೆ ʻʻವಿನಯ್‌ ಅವರ ಆಕ್ಟಿಂಗ್‌ ಯಾರೂ ಬೀಟ್‌ ಮಾಡೋಕೆ ಆಗಲ್ಲʼʼಎಂದಿದ್ದಾರೆ. ಇದಕ್ಕೆ ವಿನಯ್‌ ಅವರು ʻʻಅದನ್ನು ಬೀಟ್‌ ಮಾಡಿದ್ದು ಸಂಗೀತಾ ಒಬ್ಬರೇʼʼಎಂದಿದ್ದಾರೆ. ಹಾಗೇ ಸಂಗೀತಾ ನೆಗೆಟಿವ್‌ ಪರ್ಸನ್‌ ಅಲ್ಲ ಅಂದಿದ್ದಾರೆ. ಹಾಗೇ ಸಂಗೀತಾ ಕೂಡ ವಿನಯ್‌ ಅವರು ತುಂಬ ಸ್ವೀಟ್‌ ಎಂದಿದ್ದಾರೆ. ಹೀಗೆ ಹೇಳಿದ ಕೂಡಲೇ ಶೈನ್‌ ಶೆಟ್ಟಿ ಅವರು ʻಈ ರೌಂಡ್‌ ಮುಗಿಯೋ ಅಚ್ಟರಲ್ಲಿ ನಿಮ್ಮಬ್ಬರಿಗೂ ಲವ್‌ ಆದರೆ ಎನ್ನುವ ಭಯ ಆಗುತ್ತಿದೆʼ ಎಂದು ತಮಾಷೆಗೆ ಅಂದರು . ಈ ಫ್ರೋಮೊ ನೋಡಿದಾಗ ಸ್ಪರ್ಧಿಗಳು ಕೂಡ ತುಂಬ ಭಾವುಕರಾಗಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version