ಬೆಂಗಳೂರು: ಬಿಗ್‌ಬಾಸ್ ಮನೆಯೊಳಗೆ (BBK SEASON 10) ಈ ವಾರ ಮನೆಯ ಸದಸ್ಯರು ತಮ್ಮ ಕುಟುಂಬದ ಜತೆ ಸಂತಸ ಕ್ಷಣವನ್ನು ಹಂಚಿಕೊಂಡಿದ್ದಾರೆ. ನಿನ್ನೆಯ (ಡಿ.27) ಸಂಚಿಕೆಯಲ್ಲಿ ಸಂಗೀತಾ ಅವರ ಕುಟುಂಬ ಪ್ರಮುಖ ಹೈಲೈಟ್ ಆಗಿತ್ತು. ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದು ವಿಶೇಷವಾಗಿತ್ತು. ಕಾರ್ತಿಕ್ ಅವರ ಅಮ್ಮ ಕೂಡ ಬಂದಿದ್ದರು. ಸಂಗೀತಾ ಅವರು ಮನೆಯವರೊಂದಿಗೆ ತಮ್ಮ ಆಟದ ಬಗ್ಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಇನ್ನೂ ವಿಶೇಷ ಅಂದರೆ ಸಂಗೀತಾ ಅವರ ಅಣ್ಣ ವಿನಯ್ ಅವರ ದೊಡ್ಡ ಅಭಿಮಾನಿ ಅಂತೆ.
ಸಂಗೀತಾ ಹಾಗೂ ವಿನಯ್ ಅವರು ಬಂದಾಗಿನಿಂದಲೂ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ. ಇಬ್ಬರ ಕುಟುಂಬದವರು ಬಂದ ಮೇಲೆ ಕಥೆ ಏನು ಎಂದು ವೀಕ್ಷಕರು ತುಂಬ ಕುತೂಹಲದಿಂದ ಎಪಿಸೋಡ್‌ಗಾಗಿ ಕಾದಿದ್ದರು. ಅದೇ ರೀತಿ ಸಂಗೀತಾ ಕುಟುಂಬ ಮನೆಯೊಳಗೆ ಎಂಟ್ರಿ ಕೊಟ್ಟಿತ್ತು. ಸಂಗೀತಾ ಅಣ್ಣ ಬಂದಕೂಡಲೇ ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ಮೈಕಲ್ ಅವರು ಒಂದು ಕಡೆ ಕೂತಿದ್ದರು. ಅವರು ಆ ಜಾಗದಿಂದ ಎದ್ದಿರಲಿಲ್ಲ.
“ನಿನ್ನ ಫೀಲಿಂಗ್ಸ್ ಏನು ಅಂತ ಗೊತ್ತಾಗ್ತಿದೆ ನನಗೆ. ಸಂಗೀತಾ ಅಣ್ಣ ಬಂದಿದ್ದಾರೆ ಅಂತ ನೀನು ಇಲ್ಲೇ ಇದೀಯಾ ಅಲ್ವಾ? ಅದೇ ಕೂಡ ನಾನು ಮಾಡ್ತಿದೀನಿ, ನಾನು ಕೂಡ ಹೀಗೆ ಕೂತಿದೀನಿ. ಮೈಕಲ್ ಕೂಡ ಹಾಗೆ ಮಾಡ್ತಿದ್ದಾರೆ” ಎಂದು ವಿನಯ್‌ಗೆ ತುಕಾಲಿ ಹೇಳಿದ್ದಾರೆ.
ನಾನು ನಿಮ್ಮ ದೊಡ್ಡ ಅಭಿಮಾನಿ
ವಿನಯ್ ಗೌಡ ಬಳಿ ಸಂಗೀತಾ ಅಣ್ಣ ಮಾತನಾಡಿದ್ದು, “ನಾನು ನಿಮ್ಮ ಅಭಿಮಾನಿ ಕೂಡ. ನಿಮ್ಮ ದೃಷ್ಟಿಕೋನ ಏನು ಎಂಬುದು ಗೊತ್ತಿದೆ. ನೀವು ಮಾಡ್ತಿರೋದು ಒಮ್ಮೆ ನೆಗೆಟಿವ್, ಪಾಸಿಟಿವ್ ಆಗಿ ಕಾಣತ್ತೆ. ಈಗ ಅಗ್ರೆಶನ್ ಸ್ವಲ್ಪ ಜಾಸ್ತಿ ಆದ ಹಾಗೆ ಕಾಣ್ತಿದೆ. ನೀವು, ಸಂಗೀತಾಳಲ್ಲೂ ಅಗ್ರೆಶನ್ ಕಾಣ್ತಿದೆ. ಎಲ್ಲರೂ ಟ್ರೋಫಿ ಬಗ್ಗೆ ಗಮನ ಕೊಟ್ಟಿದ್ದಾರೆ. ಎಲ್ಲರಿಗೂ ಟ್ರೋಫಿ ಬೇಕು ಎಂದು ಫೈಟ್ ಮಾಡ್ತಿದ್ದಾರೆ. ನಿಮ್ಮ ತಂತ್ರ ಚೆನ್ನಾಗಿದ್ದು, ಅದನ್ನು ನಾನು ಹೊಗಳಬೇಕು” ಎಂದು ಹೇಳಿದ್ದಾರೆ. ವಿನಯ್ ಗೌಡ ಕೂಡ ಇಲ್ಲಿ ನಡೆದ ಎಲ್ಲ ಸಂಗತಿಗಳ ಬಗ್ಗೆ ಕ್ಷಮೆ ಕೂಡ ಕೇಳಿದ್ದಾರೆ.
ಇದನ್ನೂ ಓದಿ: BBK SEASON 10: ಅಪ್ಪ-ಮಗನ ಸಮಾಗಮಕ್ಕೆ ಸಾಕ್ಷಿಯಾಯ್ತು ದೊಡ್ಮನೆ! ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್!
ಅಪ್ಪನ ಮುಂದೆ ದೂರು ಕೊಟ್ಟ ಸಂಗೀತಾ
ಸಂಗೀತಾ ಅವರ ತಂದೆ ತಾಯಿ ಮನೆಗೆ ಎಂಟ್ರಿ ಕೊಟ್ಟ ಬಳಿಕ ವಿನಯ್ ಅವರನ್ನು ಉದ್ದೇಶಿಸಿ ಸಂಗೀತಾ ಮಾತನಾಡಿದರು. ʻʻನಮ್ಮ ಅಪ್ಪ ಬಂದಿದ್ದಾರೆ, ನಿಮಗೆ ಹೊಡೆಯುತ್ತಾರೆ, ಮಿಲ್ಟ್ರಿ ಮ್ಯಾನ್ ಅವರು ಗನ್ ತಂದಿದ್ದಾರೆʼʼಎಂದು ತಮಾಷೆ ಮಾಡಿದರು. ಹೀಗೆ ಅವರ ಮನೆಯವರೆಲ್ಲರೂ ಸಂಗೀತಾ ಅವರ ಬಾಲ್ಯವನ್ನು ನೆನಪಿಸಿಕೊಂಡರು. ಸಂಗೀತಾರ ತಂದೆ, ಡ್ರೋನ್ ಪ್ರತಾಪ್ ನಾಯಕನಾಗಬೇಕು ಎಂದು ಆಯ್ಕೆ ಮಾಡಿದರು. ಹಾಗೇ ಸಂಗೀತಾ ಅವರ ಕಾರಿನ ತಮಾಷೆಯ ಘಟನೆ ಬಗ್ಗೆಯೂ ಹಂಚಿಕೊಂಡರು.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ