Site icon Vistara News

BBK SEASON 10: ಸಂಗೀತಾ ಇನ್‌ಸ್ಟಾ ಫಾಲೋವರ್ಸ್‌ ಏಕಾಏಕಿ ಕುಸಿತ; ಕಾರಣವಾದ್ರೂ ಏನು?

sangeetha sringeri bigg boss kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಏಳನೇ ವಾರಕ್ಕೆ ಕಾಲಿಟ್ಟಿದೆ. ಸಂಗೀತಾ ಇಷ್ಟೂ ದಿನ ಪ್ರಬಲ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಸಾಕಷ್ಟು ಫಾಲೋವರ್ಸ್‌ ಕೂಡ ಹೊಂದಿದ್ದರು. ಆದರೀಗ ನಟಿಗೆ ಹಿನ್ನಡೆಯಾಗಿದೆ. ಕಾರ್ತಿಕ್‌ ಮಹೇಶ್‌ ಅವರ ತಲೆ ಬೋಳಿಸುವ ಟಾಸ್ಕ್‌ನಿಂದಾಗಿ ಫಾಲೋವರ್ಸ್‌ನ್ನೂ ಕಳೆದುಕೊಂಡಿದ್ದಾರೆ ಸಂಗೀತಾ. 11 ಸಾವಿರ ಫಾಲೋವರ್ಸ್‌ ಕಡಿಮೆ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಬಿಗ್‌ ಬಾಸ್‌ ಆರಂಭವಾದ ಕೂಡಲೇ ಜನರು ಫಾಲೋ ಮಾಡುವುದು ಸೋಷಿಯಲ್‌ ಮೀಡಿಯಾವನ್ನು. ಬಿಗ್‌ ಬಾಸ್‌ ಮನೆಯಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ಫಾಲೋವರ್ಸ್‌ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇರುತ್ತದೆ. ಆದರೆ ಸಂಗೀತಾ ಅವರ ವಿಚಾರದಲ್ಲಿ ಹಾಗಾಗಿಲ್ಲ, ಈ ಸಂಖ್ಯೆ ಈಗ ಏಕಾಏಕಿ ಕುಸಿದಿದೆ. ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಫಾಲೋವರ್ಸ್‌ ಇದ್ದರು. ಶೇವಿಂಗ್ ಘಟನೆ ಆದ ಬಳಿಕ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆ ಆಗಿದೆ. ಅಂದರೆ, 438 ಸಾವಿರ ಫಾಲೋವರ್ಸ್‌ ಆಗಿದ್ದಾರೆ. ಇದು ಸಂಗೀತಾ ಆಟದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಕಾರಣವಾದ್ರೂ ಏನು?

ಬಿಗ್‌ ಬಾಸ್‌ ಆರಂಭದಿಂದ ಡ್ರೋನ್‌ ಪ್ರತಾಪ್‌ ಪರ ನಿಂತ ಸಂಗೀತಾ ಪ್ರೇಕ್ಷಕರ ಮನ ಗೆದ್ದಿದ್ದರು. ವಿನಯ್‌ ಅವರ ವಿರುದ್ಧ ಕೂಡ ಧ್ವನಿ ಎತ್ತಿ., ಡೇರಿಂಗ್‌ ಹುಡುಗಿ ಎಂದು ಅನಿಸಿಕೊಂಡಿದ್ದರು. ಕರ್ನಾಟಕದ ಕ್ರಶ್‌ ಎಂದೂ ಸಂಗೀತಾ ಕರೆಸಿಕೊಂಡಿದ್ದರು ಎಂತಲೂ ಸುದೀಪ್‌ ಹಿಂದೊಮ್ಮೆ ವೀಕೆಂಡ್‌ ಪಂಚಾಯಿತಿಯಲ್ಲಿ ಹೇಳಿದ್ದರು. ಕಾರ್ತಿಕ್‌ ಜತೆ ಸ್ನೇಹದಿಂದ ಇದ್ದ ಕಾರಣ ಜೋಡಿಗೆ ಅದೆಷ್ಟೋ ಫ್ಯಾನ್ಸ್‌ ಪೇಜ್‌ಗಳು ಹುಟ್ಟಿಕೊಂಡವು. ಸಾಕಷ್ಟು ಜನ ಸಂಗೀತಾ ಅವರ ಬೆಂಬಲಕ್ಕೆ ನಿಂತರು. ಮತ್ತೆ ಕೂಡ ತನಿಷಾ ಜತೆ ಸಂಗೀತಾ ಅವರು ಕೈ ಜೋಡಿಸಿದರು. ಹೀಗಾಗಿ ಈ ಗ್ರೂಪ್‌ ಬಗ್ಗೆ ಪ್ರೇಕ್ಷಕರಿಗೆ ಇಷ್ಟವಾಯಿತು.

ಇದನ್ನೂ ಓದಿ: BBK SEASON 10: ಡೋರ್‌ನಿಂದ ಆಚೆ ಕಾಲಿಟ್ಟು, ಮತ್ತೆ ಒಳಗೆ ಬಂದ ಸಂಗೀತಾ; ಏನ್‌ ಹೈಡ್ರಾಮಾ ಗುರು!

ಅವಕಾಶವಾದಿ ಆಗಿದ್ದಕ್ಕೇ ಈ ಗತಿ ಬಂತಾ?

ಪ್ರೇಕ್ಷಕರು ಕಮೆಂಟ್‌ ಮೂಲಕ ಹೇಳುವ ಪ್ರಕಾರ ಸಂಗೀತಾ ಅವರು ಪ್ರತಿಯೊಬ್ಬರನ್ನೂ ಸಹವಾಸ ಮಾಡುವಾಗ ಅವಕಾಶವಾದಿಯಾಗುತ್ತಾರೆ. ವರ್ತೂರ್‌ ಅವರಿಗೆ ಯಾವಾಗ 34 ಲಕ್ಷ ವೋಟಿಂಗ್‌ ಬಗ್ಗೆ ತಿಳಿದು ಬಂತೋ ಅಲ್ಲಿಂದ ಅವರ ಸಹವಾಸ ಮಾಡಲು ಸಂಗೀತಾ ಶುರು ಮಾಡಿದರು. ಹೀಗಾಗಿ ಅವರು ಅವಕಾಶವಾದಿ ಎಂದೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾತ್ರವಲ್ಲ ಕಳೆದ ಸಂಚಿಕೆಯಲ್ಲಿ ಸಂಗೀತಾ ಶೃಂಗೇರಿ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಮಾತು ಮಾತಿಗೆ ತಾವು ಮನೆ ತೊರೆಯುವುದಾಗಿ ಅವರು ಹೇಳುತ್ತಿದ್ದಾರೆ. ಇದು ಡ್ರಾಮಾ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಲವರು ಸಂಗೀತಾ ಅವರು ಊಸರವಳ್ಳಿ ಎಂದು ಬಿರುದು ಕೂಡ ಕೊಟ್ಟಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ. ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version