ಬಿಗ್ ಬಾಸ್ ಸೀಸನ್ 10 (BBK Season 10) ಮೂರನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಬಹಳ ಚರ್ಚೆಯಲ್ಲಿರುವ ಜೋಡಿ ಅಂದರೆ ಅದುವೇ ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ.
ಸಂಗೀತಾ ಮೇಲೆ ಕಾರ್ತಿಕ್‌ಗೆ ಪ್ರೀತಿ ಹುಟ್ಟಿದೆ ಎಂದು ಟ್ರೋಲ್ ಮಾಡಲು ಶುರು ಮಾಡಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲದೇ ಈಗಾಗಲೇ ಇವರಿಬ್ಬರ ಫ್ಯಾನ್ಸ್ ಪೇಜ್ ಕೂಡ ಶುರುವಾಗಿದೆ. ದೊಡ್ಮನೆ ವೇದಿಕೆ ಮೇಲೆ ಮನೆಗೆ ಸೊಸೆಯನ್ನು ಕರೆದುಕೊಂಡು ಬರುತೇನೆ ಅಂದಿದ್ರು ಕಾರ್ತಿಕ್. ಅದೇ ಹಾದಿಯಲ್ಲಿ ಹೋಗುತ್ತಿದ್ದಾರಾ? ಎನ್ನುವ ಅನುಮಾನ ಶುರುವಾಗಿದೆ.
ಕಳೆದ ಸಂಚಿಕೆಯಲ್ಲಿ ಇಬ್ಬರು ಪಾತ್ರ ತೊಳೆಯುವಾಗ ಕಾರ್ತಿಕ್ ಮತ್ತು ಸಂಗೀತಾ ತಮ್ಮಷ್ಟಕ್ಕೆ ತಾವು ಬೆಸ್ಟ್ ಫ್ರೆಂಡ್ಸ್ ಆಷ್ಟೇ..ಎಂದು ಮಾತನಾಡಿದ್ದಾರೆ. ಹಲವು ಬಾರಿ ಕಾರ್ತಿಕ್ ಅವರು ಸಂಗೀತಾ ಅವರಿಗೆ ಸಾಥ್ ನೀಡುತ್ತಿದ್ದಾರೆ.
ವಿನಯ್ ಜತೆಗೂ ಸಂಗೀತಾ ಅವರು ಜಗಳ ಮಾಡಿದ್ದಾಗ, ಕಾರ್ತಿಕ್ ಸಂಗೀತಾ ಪರ ನಿಂತಿದ್ದರು. ಹಲವು ಘಟನೆಗಳನ್ನು ನೋಡಿ ಪ್ರೇಕ್ಷಕರು ಇವರಿಬ್ಬರು ಜೋಡಿ ಆಗುವುದು ಪಕ್ಕಾ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ; BBK Season 10: ಕೆಲವು ಸಮರ್ಥರಿಗೆ ‘ನಾಲಾಯಕ್’ ಪಟ್ಟ; ಬಿಗ್ ಬಾಸ್ ಸೀಸನ್ 10ರ ಮೊದಲ ಕ್ಯಾಪ್ಟನ್ ಇವರು!
ಸಂಗೀತಾ ಕೂಡ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.. ಮುಂದಿನ ದಿನಗಳಲ್ಲಿ ಹೇಗೆ ತಿರುವು ಪಡೆದುಕೊಳ್ಳಿದೆ ಎಂಬುದು ಕಾದು ನೋಡಬೇಕಿದೆ.