ಬೆಂಗಳೂರು: ಸಾಕಷ್ಟು ಕುತೂಹಲಗಳೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್ 10(BBK Season 10) ಅ.8ರಿಂದ ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್ ಈ ಬಾರಿ ಎದುರಾಗಿದೆ. ಅದರಲ್ಲಿ ಮುಖ್ಯವಾಗಿ ಸ್ಪರ್ಧಿಗಳನ್ನು ವೋಟಿಂಗ್ ಮೂಲಕ ಆಯ್ಕೆ ಮಾಡುವ ಹೊಸ ತಂತ್ರವನ್ನು ಈ ಬಾರಿ ಅಳವಡಿಸಿಕೊಳ್ಳಲಾಗಿದೆ. ಈ ಬಾರಿ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಸೆಲೆಕ್ಟ್ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್ ತಿಳಿಸಿದರು. ಆದರೀಗ ಸಖತ್ ಸುದ್ದಿಯಲ್ಲಿರುವುದು ಸಂಗೀತಾ ಶೃಂಗೇರಿ.
ʻಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲʼ ಎಂದು ಸಂಗೀತಾ ಈ ಮುಂಚೆ ಹೇಳಿಕೆ ನೀಡಿದ್ದರು. ಇದನ್ನು ಕಿಚ್ಚ ಸುದೀಪ್ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕಾರಣ ತಿಳಿಸಿದ ಸಂಗೀತಾ ʻʻಈ ಬಾರಿ ಬಿಗ್ ಬಾಸ್ ತುಂಬ ವಿಭಿನ್ನವಾಗಿದೆ. ʻಹ್ಯಾಪಿ ಬಿಗ್‌ಬಾಸ್ ಕೂಡ. ನನ್ನ ಲಕ್ಕಿ ನಂಬರ್ ‘10’. ಬಿಗ್‌ಬಾಸ್ ಸೀಸನ್ ನಂಬರ್ ಕೂಡ 10. ಎಂದು ಕಾರಣ ಕೊಟ್ಟರು. ಇದಾದ ಬಳಿಕ ವೇದಿಕೆಯಲ್ಲಿ ನಟಿ ʻʻಜನರಿಗೆ ನಾನು ಹೇಗೆ ಎಂಬುದು ಗೊತ್ತಿಲ್ಲ. ಸಿನಿಮಾದಲ್ಲಿ ನಿರ್ವಹಿಸಿದ ಪಾತ್ರದ ಮೂಲಕ ಮಾತ್ರ ಸಂಗೀತಾ ಏನು ಎನ್ನುವುದು ಗೊತ್ತು. ನಾನು ಸಖತ್ ಬೋಲ್ಡ್ʼ. ಹಾಗಾಗಿ ಆ ನನ್ನ ನಿಜ ವ್ಯಕ್ತಿತ್ವವನ್ನು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ಸವಾಲುಗಳೆಂದರೆ ಬಹಳ ಇಷ್ಟ.ʼಎಂದರು. ಇದಾದ ಬಳಿಕ ಸಂಗೀತಾ ಶೃಂಗೇರಿ ಅವರಿಗೆ 80ಕ್ಕಿಂತಲೂ ಕಡಿಮೆ ಮತಗಳು ದೊರೆತ ಕಾರಣ ಅವರನ್ನು ವೇಟಿಂಗ್ ರೂಂನಲ್ಲಿ ಇಡಲಾಯ್ತು.
ಅಂತಿಮವಾಗಿ ಕಡಿಮೆ ಮತ ಪಡೆದ ಇತರೆ ಆರು ಮಂದಿಯ ಜತೆಗೆ ಸಂಗೀತಾರನ್ನು ಮನೆಯ ಒಳಗೆ ಕಳಿಸಲಾಯಿತು. ವೇಟಿಂಗ್ ರೂಂನಲ್ಲಿ ನಟಿ ಗಳಗಳನೇ ಅತ್ತರು. ಒಂದು ವಾರದ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಸಂಗೀತ ಉಳಿಯುತ್ತಾರಾ ಇಲ್ಲವಾ? ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: 777 charlie: ಚಾರ್ಲಿಗೆ ಲಂಚ ಕೊಡುತ್ತಿದ್ದ ನಟಿ, ಶೂಟಿಂಗ್ ಜರ್ನಿ ನೆನಪಿಸಿಕೊಂಡ ಸಂಗೀತಾ ಶೃಂಗೇರಿ
ವೇದಿಕೆಯಲ್ಲಿ ಚಾರ್ಲಿ ಬಗ್ಗೆಯೂ ನಟಿ ಪ್ರಸ್ತಾಪಿಸಿದರು. ‘ಸಿಂಬಾ’ ಶ್ವಾನ ಅವರ ನೆಚ್ಚಿನ ಸ್ನೇಹಿತ. ಚಿಕ್ಕುವನ್ನು ಮಿಸ್ ಮಾಡುಕೊಳ್ಳುವ ಬೇಸರವನ್ನು ‘ಚಾರ್ಲಿ’ ಮರೆಸುತ್ತದೆ ಎಂಬ ಸಮಾಧಾನವೂ ಅವರಿಗಿತ್ತು. ಚಾರ್ಲಿ 777 ಮೂಲಕ ನಟನಾಪಯಣ ಆರಂಭಿಸಿದ ಸಂಗೀತಾ ಇದುವರೆಗೆ ಜನರು ನನ್ನ ಕ್ಯೂಟ್ ಆದ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಆದರೆ ನಾನು ನಿಜವಾಗಿ ಎಷ್ಟು ಬೋಲ್ಡ್ ಆಗಿದ್ದೀನಿ ಎಂಬುದನ್ನು ಜನರಿಗೆ ತೋರಿಸಬೇಕು ಎಂದುಕೊಂಡಿರುವ ಸಂಗೀತಾ ಅವರಿಗೆ 76% ನೀಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.
ವೇಟಿಂಗ್ ಲಿಸ್ಟ್‌ನಲ್ಲಿ ಯಾರ್ಯಾರು?
ಡ್ರೋನ್ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈಗ ಇವರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಲಾಗಿದ್ದು, ಒಂದು ವಾರದಲ್ಲಿ ತೋರಿಸಲಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.