Site icon Vistara News

BBK Season 10: ʻಥ್ರೆಟ್‌ ಆಗ್ತಿದೆʼ ಎಂದ ಸಂಗೀತಾ; ʻನಾನು ಮಿಮಿಕ್ರಿ ಆರ್ಟಿಸ್ಟ್ ಅಲ್ಲ ಡ್ರೋನ್‌ʼ ಎಂದ ವಿನಯ್‌!

sangeetha sringeri Vinay Gowda , Karthik Drone Pratap war

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10 ) ಎರಡನೇ ವಾರ ಮನೆಯಲ್ಲಿ ಸಂಗೀತಾ ಹಾಗೂ ವಿನಯ್‌ ನಡುವೆ ದೊಡ್ಡ ಯುದ್ಧವೆ ನಡೆದು ಹೋಯಿತು. ಎಷ್ಟರ ಮಟ್ಟಿಗೆ ಅಂದರೆ ಸಂಗೀತಾ ಅವರು ವಿನಯ್‌ ಅವರಿಗೆ ʻʻನಿಮ್ಮ ಧ್ವನಿ ನನಗೆ ಭಯವಾಗುತ್ತಿದೆ. ನಿಮ್ಮಿಂದ ಥ್ರೆಟ್‌ ಆಗುತ್ತಿದೆʼʼಎಂದರು. ಈ ಥ್ರೆಟ್‌ ಪದ ಮನೆಯ ಸದಸ್ಯರ ನಡುವೆ ಸಮರ ನಡೆಯುವಂತೆ ಮಾಡಿದೆ. ಈ ಜಗಳ ಇನ್ನೂ ದೊಡ್ಡ ಮಟ್ಟಕ್ಕೆ ತಿರುವು ಪಡೆದುಕೊಂಡು ಅಮೃತಾ ಕೂಡ ಕಾರ್ತಿಕ್‌ ಅವರ ಏರು ಧ್ವನಿಗೆ ‘’ಇದು ಥ್ರೆಟ್‌ ಅಲ್ವಾ?’’ಎಂದು ಸಂಗೀತಾ ಕಡೆಗೆ ನೋಡಿ ತಿರುಗೇಟು ನೀಡಿದ್ದಾರೆ.

ಮಾಣಿಕ್ಯ ತಂಡ ವಿನ್ನರ್‌

ಟಾಸ್ಕ್‌ನಲ್ಲಿ ಮಾಣಿಕ್ಯ ತಂಡ ಅಂದರೆ ವಿನಯ್‌ ಅವರ ತಂಡ ಗೆದ್ದು ಬೀಗಿತ್ತು. ಇದಾದ ಬಳಿಕ ಬಿಗ್‌ ಬಾಸ್‌ ಪ್ರತಾಪ್‌ ಹಾಗೂ ಸಂಗೀತಾ ಅವರಿಗೆ ಶಿಕ್ಷೆಯನ್ನು ನೀಡಿದರು. ಇದಾದ ಮೇಲೆ ಬಿಗ್‌ ಬಾಸ್‌ , ‘’ಈ ದಿನ ಹೇಗಿತ್ತು?’’ ಎಂದು ಕೇಳಿದರು. ಸಂಗೀತಾ ಅಸಮಾಧಾನ ಹೊರ ಹಾಕಿದರು. ‘’ರೂಲ್ಸ್ ಜಸ್ಟಿಫೈ ಆಗಿದೆ ಎಂದು ನನಗೆ ಅನಿಸಲಿಲ್ಲ. ಫೇರ್‌ ಪ್ಲೇ ಅಂತ ನನಗೆ ಅನಿಸಲಿಲ್ಲ. ಗೇಮ್ ನಡೆಯುವಾಗ ಸುಮಾರು ರೂಲ್ಸ್‌ ಫಾಲೋ ಮಾಡೋಕೆ ಹೇಳಿದ್ದು ನಾನೇ. ಆದರೆ, ಶಿಕ್ಷೆ ಕೊಟ್ಟಿದ್ದು ನನಗೆ. ಅದಕ್ಕೆ ಸ್ವಲ್ಪ ಬೇಜಾರಾಯ್ತು’’ ಎಂದರು.

ಎಲ್ಲಿ ಅನ್ಯಾಯ ಅಯ್ತು?

ಹಾಗೇ ಡ್ರೋನ್‌ ಕೂಡ ʻʻನಾವು ಸೋತ್ವಿ. ಗೇಮ್‌ ಫೌಲ್‌ ಕೂಡ ಆಯ್ತು. ಹಾಗಂತ ಇಷ್ಟು ಲೀಡ್‌ನಲ್ಲಿ ಸೋಲುತ್ತಿರಲಿಲ್ಲ ಅಂದ ಕೂಡಲೇ, ವಿನಯ್‌ ಮಧ್ಯೆ ಬಾಯಿ ಹಾಕಿ ಕೂಗಲಾರಂಭಿಸಿದರು. ಎಲ್ಲಿ ಅನ್ಯಾಯ ಅಯ್ತು? ಎಂದು ವಿನಯ್‌ ಕೇಳುತ್ತಿದ್ದಂತೆ ಮನೆಯಲ್ಲಿ ಯುದ್ಧವೆ ಶುರು ಆಯ್ತು.

ವಿನಯ್‌ ಮಾತಿನ ಚಾಟಿ!

ಸಂಗೀತಾ ಈ ವೇಳೆ ವಿನಯ್‌ ಅವರಿಗೆ ʻʻನಿಮ್ಮ ಧ್ವನಿ ಭಯ ತರಿಸುತ್ತೆ. ಥ್ರೆಟ್‌ ಹಾಕಿದ ಹಾಗಿದೆ” ಎಂದರು. ಬೆದರಿಕೆ ತರಿಸುವಂತೆ ಇದೆ ಎಂದು ಸಂಗೀತಾ ಅವರು ವಿನಯ್‌ ಅವರಿಗೆ ಹೇಳುತ್ತಿದ್ದಂತೆ ವಿನಯ್‌ ಅಲ್ಲಿಂದ ಮಾತಿನ ಚಾಟಿ ಬೀಸಿದರು. ವಿನಯ್‌ ಅವರು ಸಂಗೀತಾ ಹೀಗೆ ಹೇಳುತ್ತಿದ್ದಂತೆ ʻನನಗೆ ಥ್ರೆಟ್‌ ಎಂಬ ಬೋರ್ಡ್‌ ಹಾಕಬೇಡಿ. ಇಲ್ಲಿಂದ ಹೊರಗೆ ಹೋದ ಮೇಲೆಯೂ ನನಗೆ ಕರಿಯರ್‌ ಎನ್ನುವುದು ಇದೆ. ನಾವೆಲ್ಲರೂ ಒಳ್ಳೆಯ ಕುಟುಂಬದಿಂದಲೇ ಬಂದದ್ದು. ನನ್ನ ಮಾತೇ ಹೀಗೆ. ನಾನು ಮಾತನಾಡುವುದೇ ಹೀಗೆ. ನನ್ನ ವಾಯ್ಸ್‌ನ ನಾನು ಚೇಂಜ್ ಮಾಡೋಕೆ ಆಗಲ್ಲ. ಇದೆಲ್ಲ ನಾನ್‌ಸೆನ್ಸ್‌. ಸೋತ ಮಾತ್ರಕ್ಕೆ ಲೂಸರ್ ತರಹ ಮಾತನಾಡಬೇಡʼʼಎಂದು ಸಂಗೀತಾಗೆ ಸಖತ್‌ ಕ್ಲಾಸ್‌ ತೆಗೆದುಕೊಂಡರು.

ಇದನ್ನೂ ಓದಿ: BBK Season 10: ಸಂಗೀತಾಗೆ ಸಗಣಿ ಸ್ನಾನ; 2ನೇ ವಾರ ರಣರಂಗವಾಗೋಯ್ತು ದೊಡ್ಮನೆ!

ಸಂಗೀತಾ ಕೂಡ ಸುಮ್ಮನೆ ಆಗಿರಲಿಲ್ಲ. ʻʻವಿನಯ್‌ ನೀವು ಡ್ರೋನ್ ಪ್ರತಾಪ್ ಅವರಿಗೆ ಹೆದರಿಸುತ್ತಿದ್ದೀರಾ? ಅದು ನಮಗೆ ಭಯ ಆಗುತ್ತಿದೆ. ಥ್ರೆಟ್ ಹಾಕಿದ ಹಾಗಿದೆ. ವಾಯ್ಸ್‌ ರೇಸ್‌ ಮಾಡಿದ ಮಾತ್ರಕ್ಕೆ ಪವರ್‌ಫುಲ್‌ ಅಂದುಕೊಂಡಿದ್ದಾರೆʼʼಎಂದು ಮಾತು ಕೊಡುತ್ತಲೇ ಇದ್ದರು.

ಈ ಮಧ್ಯೆ ರಕ್ಷಕ್‌ ಕೂಡ ಧ್ವನಿ ಎತ್ತಿದ್ದು, ಕಾರ್ತಿಕ್‌ ಕೂಡ ವೈಸ್‌ ರೈಸ್‌ ಮಾಡಿದರು. ಆಗ ಅಮೃತಾ ಕೂಡ ವಿನಯ್‌ ಅವರಿಗೆ ಸಾಥ್‌ ಕೊಟ್ಟರು. ಕಾರ್ತಿಕ್‌ ಅವರು ಕೂಗುತ್ತಿದ್ದಂತೆ ʻʻಇದು ಥ್ರೆಟ್‌ ಅಲ್ವಾ?ʼʼಎಂದು ನಮ್ರತಾ ಅವರು ಸಂಗೀತಾಗೆ ತಿರುಗೇಟು ನೀಡಿದರು.

ನಾನು ಮಿಮಿಕ್ರಿ ಆರ್ಟಿಸ್ಟ್ ಅಲ್ಲ!

ವಿನಯ್‌ ಅವರು ಡ್ರೋನ್‌ ಪ್ರತಾಪ್‌ ಅವರಿಗೆ ʻʻನನ್ನ ಧ್ವನಿ ಭಯ ಆಯ್ತಾ? ಎಂದು ಕೇಳಿದಾಗ ಪ್ರತಾಪ್‌ ಅವರು ಇಲ್ಲ.. ʻಸ್ವಲ್ಪ ನನ್ನ ಟೋನ್‌ನಲ್ಲಿ ಮಾತನಾಡಬಹುದಿತ್ತುʼʼಎಂದರು. ವಿನಯ್‌ ಇನ್ನಷ್ಟು ಕುಪಿತರಾಗಿ ʻʻನಿನ್ನ ಟೋನ್‌ನಲ್ಲಿ ಮಾತನಾಡೋಕೆ ನಾನು ಮಿಮಿಕ್ರಿ ಆರ್ಟಿಸ್ಟ್ ಅಲ್ಲ. ಈ ಮೈಂಡ್ ಗೇಮ್ಸ್‌ ಎಲ್ಲ ಬೇಡ. ಬೆದರಿಕೆ ಹಾಕೋಕೆ ಇಲ್ಲಿ ಯಾರೂ ಗ್ಯಾಂಗ್‌ಸ್ಟರ್‌ ಅಲ್ಲ, ಅಂಡರ್‌ವರ್ಲ್ಡ್‌ನಿಂದ ಬಂದಿಲ್ಲʼʼಎಂದು ಸಖತ್‌ ಆಗಿಯೇ ಕ್ಲಾಸ್‌ ತೆಗೆದುಕೊಂಡರು.

ಹೀಗೆ ಸ್ಪರ್ಧಿಗಳ ಮಧ್ಯೆ ಕಿಡಿ ಹತ್ತುತ್ತಲೇ ಇತ್ತು. ಇದೆಲ್ಲ ವಾದಗಳು ಆದ ಬಳಿಕ ವಿನಯ್‌ ಹಾಗೂ ಕಾರ್ತಿಕ್‌ ತಂಡ ಪ್ರತ್ಯೇಕವಾಗಿ ಈ ಬಗ್ಗೆ ಚರ್ಚಿಸಿತು. ʻʻಒಳ್ಳೆ ಎಂಟರ್‌ಟೇನಿಂಗ್ ಆಗಿತ್ತು. ಥ್ಯಾಂಕ್ಸ್ ನಮ್ರತಾ ಗೌಡ ಸಪೋರ್ಟ್‌ಗೆ’’ ಎಂದು ವಿನಯ್ ಗೌಡ ಅವರು ತಂಡಕ್ಕೆ ತನ್ನ ಪರವಾಗಿ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದರು. ಅಷ್ಟೇ ಅಲ್ಲದೇ ಈ ಒಂದು ವಾರ ಯಾವ ಆಟವನ್ನು ಬಿಟ್ಟು ಕೊಡಲೇ ಬಾರದು ಎಂದು ತಂಡಕ್ಕೆ ಸೂಚಿಸಿದರು.

ಇದನ್ನೂ ಓದಿ: BBK Season 10: ಈ ಸಲ ಕಪ್‌ ʻಡ್ರೋನ್‌ʼದೆ; ಪ್ರತಾಪ್‌ಗೆ ಕರುನಾಡು ಸಾಥ್‌; ಗೌರೀಶ್‌ ಅಕ್ಕಿ ಊಸರವಳ್ಳಿ ಅಂತೆ!

ಅತ್ತ ಕಾರ್ತಿಕ್‌ ತಂಡದಲ್ಲಿಯೂ ವೈಮನಸ್ಸು ಉಂಟಾಗಿದೆ. ವರ್ತೂರ್‌ ಸಂತೋಷ್‌ ಅವರು ʻʻಕಾರ್ತಿಕ್‌ ಹಾಗೂ ಸಂಗೀತಾ ಮಾತ್ರ ತಂಡವಾಗಿದೆ. ನಾವೆಲ್ಲ ಲೆಕ್ಕಕ್ಕೆ ಇಲ್ಲ. ಯಾವುದೇ ಚರ್ಚೆಗಳು ಆಗಬೇಕಾದರೆ ನಮ್ಮನ್ನು ಹೊರಗೆ ಇಡುತ್ತಾರೆ. ಇದು ಸರಿ ಕಾಣಿಸಿಸುವುದಿಲ್ಲʼʼ ಎಂದು ಸಿರಿ ಮತ್ತು ಭಾಗ್ಯಶ್ರೀ ಮುಂದೆ ಅಸಮಾಧಾನ ಹೊರ ಹಾಕಿದರು. ಈ ಒಂದು ವಾರ ಪೂರ್ತಿ ಯಾವೆಲ್ಲ ಸದಸ್ಯರು ಶಿಕ್ಷೆ ಅನುಭವಿಸುತ್ತಾರೆ, ಗೆಲ್ಲುತ್ತಾರೆ ಎಂಬುದು ಕಾದು ನೋಡಬೆಕಿದೆ.

Exit mobile version