Site icon Vistara News

BBK Season 10: ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ; ಎಲ್ಲ ಸೇರಿ ಸ್ನೇಹಿತ್‍‍ನ ಹೆಂಗ್ ಗೋಳಾಡಿಸ್ತಿದಾರೆ ಪಾಪ!  

sangeetha sringeri Karthik mahesh shehith

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೂರನೇ ವಾರ ಸ್ಪರ್ಧಿಗಳ ಮಧ್ಯೆ ಟ್ರಯಾಂಗಲ್‌ ಲವ್‌ ಸ್ಟೋರಿಗಳು ಇದೆ ಎನ್ನುವ ಗಾಸಿಪ್‌ ಮಧ್ಯೆ ಹೊಸ ರೀತಿಯ ಕಥೆಗಳು ಶುರುವಾಗಿವೆ. ಇದ್ದಕ್ಕಿಂದ್ದಂತೆ ಸಂಗೀತಾ ಅವರು ಕಾರ್ತಿಕ್‌ ಅವರಿಗೆ ರಾಕಿ ಕಟ್ಟಿದ್ದಾರೆ. ಇದೀಗ ಪ್ರೇಕ್ಷಕರಿಗೆ ಕನ್‌ಫ್ಯೂಸ್‌ ಆಗಲು ಶುರುವಾಗಿದೆ. ಕಾರ್ತಿಕ್‌ ಹಾಗೂ ಸಂಗೀತಾ ನಡುವೆ ಕ್ಯಾಪ್ಟನ್‌ ಆಯ್ಕೆ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಬಂದಾಗಿನಿಂದ ಕಾರ್ತಿಕ್ ಮತ್ತು ಸಂಗೀತಾ ಪರಸ್ಪರ ಬಹಳ ಆತ್ಮೀಯವಾಗಿದ್ದರು. ತಮ್ಮದು ಕೇವಲ ಸ್ನೇಹವಷ್ಟೆ ಎಂದು ಇಬ್ಬರೂ ಬಿಂಬಿಸಿಕೊಂಡಿದ್ದರೂ ಸಹ ಸ್ನೇಹಕ್ಕಿಂತಲೂ ಮಿಗಿಲಾದ ಬಂಧವೊಂದು ಪರಸ್ಪರರಲ್ಲಿ ಕಾಣುತ್ತಿದೆ. ಆದರೆ ಇದ್ದಕ್ಕಿದ್ದಂತೆ ಸಂಗೀತಾ ಅವರು ಕಾರ್ತಿಕ್‌ ಅವರಿಗೆ ರಾಖಿ ಕಟ್ಟಿದ್ದಾರೆ. ಇನ್ನೊಂದು ಕಡೆ ಸ್ನೇಹಿತ್‌ ಹಾಗೂ ನಮ್ರತಾ ವಿಚಾರವಾಗಿಯೂ ಚರ್ಚೆಗಳು ಆಗುತ್ತಿವೆ.

ಇದೀಗ ಸಂಗೀತಾ ಅವರು ಕಾರ್ತಿಕ್‌ ಅವರಿಗೆ ಕಟ್ಟಿದ್ದು ರಿಯಲ್‌ ರಾಖಿ ಅಲ್ವಂತೆ. ರಿಯಲ್ ರಾಖಿ ಬಂದಮೇಲೆ ಕಾರ್ತಿಕ್ ಅವರಿಗೆ ಸಂಗೀತಾ ರಾಖಿ ಕಟ್ಟುತ್ತಾರಂತೆ. ಇದಾದ ಬಳಿಕ ಕಾರ್ತಿಕ್‌ ಕೂಡ ಬೇಸರವಾಗಿರುವಂತೆ ಡ್ರಾಮಾ ಮಾಡಿದರು.

ಸ್ನೇಹಿತ್‌ಗೂ ಇದೇ ಗತಿ

ಮನೆಯಲ್ಲಿ ಅತ್ತ ಸ್ನೇಹಿತ್‌ ಅವರು ನಮ್ರತಾ ಬಗ್ಗೆ ಸ್ವಲ್ಪ ಸಾಫ್ಟ್‌ ಕಾರ್ನರ್‌ ಇದ್ದಂತಿದೆ. ಸ್ನೇಹಿತ್ ಅವರು ನಮ್ರತಾ ಗೌಡಗೆ ಟ್ರೈ ಮಾಡಲಿ ಎಂದು ಸಂತು, ವಿನಯ್ ಅವರು ಸಲಹೆ ಕೊಟ್ಟಿದ್ದರು. ಈ ಬಗ್ಗೆ ಒಂದು ಚರ್ಚೆ ನಡೆದಿತ್ತು. ಅದೆಲ್ಲವೂ ಈಗ ವೆಸ್ಟ್ ಆಗಿದೆ. ಸ್ನೇಹಿತ್‌ಗೆ ನಮ್ರತಾ ಅವರು ರಾಖಿ ಕಟ್ಟುತ್ತಾರೆ ಎಂಬ ಮಾತು ಬಂತು. ಆಮೇಲೆ ಕಾರ್ತಿಕ್ ಅವರು ಸ್ನೇಹಿತ್‌ಗೆ ʻʻನೀನು ನನ್ನ ತಂಗಿಯನ್ನು ಮದುವೆ ಆಗು, ನಾನು ನಿನ್ನ ತಂಗಿಯನ್ನು ಮದುವೆ ಆಗ್ತೀನಿʼʼ ಎಂದು ಹೇಳಿ ನಕ್ಕಿದ್ದಾರೆ. ಆಗ ಕೂಡ ಕಾರ್ತಿಕ್ ತಮಾಷೆ ಮಾಡೋದು ಬಿಟ್ಟಿಲ್ಲ.

ಇದನ್ನೂ ಓದಿ: BBK Season 10: ನಮ್ರತಾ ಜತೆ ಡೇಟ್‌ ಮಾಡ್ತಾರಂತೆ ಕಾರ್ತಿಕ್; ಸಂಗೀತಾ ಕಥೆ ಏನು?

ಇದನ್ನೂ ಓದಿ: BBK Season 10: ನಮ್ರತಾ ಜತೆ ಡೇಟ್‌ ಮಾಡ್ತಾರಂತೆ ಕಾರ್ತಿಕ್; ಸಂಗೀತಾ ಕಥೆ ಏನು?

ನಾನು ರಾಖಿ ಕಟ್ಟಿಸಿಕೊಳ್ಳಲ್ಲ ಎಂದ ಸ್ನೇಹಿತ್‌

ಸ್ನೇಹಿತ್​ಗೆ ನಮ್ರತಾ ರಾಖಿ ಕಟ್ಟಬೇಕು ಎಂದಾಯ್ತು, ಆದರೆ ಸ್ನೇಹಿತ್ ತಾವು ಯಾರಿಂದಲೂ ರಾಖಿ ಕಟ್ಟಿಸಿಕೊಳ್ಳುವುದಿಲ್ಲ ಎಂದರು. ರಾತ್ರಿಯೂ ಇದೇ ಚರ್ಚೆ ಮುಂದುವರಿದಿದೆ. ಆ ಬಳಿಕ ಸಂಗೀತಾ, ಕಾರ್ತಿಕ್​ಗೆ ದಾರವೊಂದನ್ನು ರಾಖಿ ರೀತಿಯಲ್ಲಿ ಕಟ್ಟಿ, ಇದನ್ನು ಎಂದಿಗೂ ಬಿಚ್ಚಬೇಡ ಎಂದು ಹೇಳಿದರು. ಕಾರ್ತಿಕ್ ಸಹ ಬೇಸರದಿಂದಲೇ ರಾಖಿ ಕಟ್ಟಿಸಿಕೊಂಡರು.

ಪ್ರೇಕ್ಷಕರಿಗೆ ಗೊಂದಲ

ಸಂಗೀತಾ ಅವರು ಅದೆಷ್ಟೋ ಬಾರಿ ಕಾರ್ತಿಕ್‌ ಅವರನ್ನು ಪ್ರೀತಿಸುತ್ತಿಲ್ಲ ಎಂದು ಹೇಳಿದ್ದರು. ಕಾರ್ತಿಕ್ ಅವರು ತಮಾಷೆಗೆ ನಮ್ರತಾ ಗೌಡ ಜತೆ ಫ್ಲರ್ಟ್ ಮಾಡಿದ್ದರು. ಡೇಟಿಂಗ್ ವಿಚಾರವಾಗಿಯೂ ಪ್ರಸ್ತಾಪಿಸಿದ್ದರು. ಇನ್ನು ಮೈಖಲ್ ಹಾಗೂ ಇಶಾನಿ ನಡುವೆಯೂ ಆತ್ಮೀಯ ಬಂಧವಿದೆ. ಮೈಖಲ್ ಅಂತೂ ಇಶಾನಿಗೆ ಫ್ಲರ್ಟ್​ ಮಾಡುತ್ತಲೇ ಇರುತ್ತಾರೆ.

Exit mobile version