Site icon Vistara News

BBK SEASON 10: ಡೋರ್‌ನಿಂದ ಆಚೆ ಕಾಲಿಟ್ಟು, ಮತ್ತೆ ಒಳಗೆ ಬಂದ ಸಂಗೀತಾ; ಏನ್‌ ಹೈಡ್ರಾಮಾ ಗುರು!

Sangeetha stepped out of the door and came back in bbk10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಏಳನೇ ವಾರಕ್ಕೆ ಕಾಲಿಟ್ಟಿದೆ. ಸಂಗೀತಾ ಹಾಗೂ ಕಾರ್ತಿಕ್‌ ನಡುವೆ ಇರಿಸು ಮುರಿಸಾಗಿ ಮನೆಯಿಂದ ಆಚೆ ಹೋಗುತ್ತೇನೆ ಎಂದು ಸಂಗೀತಾ ಗಳಗಳನೆ ಅತ್ತು ಬಿಟ್ಟರು. ಮಾತ್ರವಲ್ಲ ʻʻದಯವಿಟ್ಟು ಕನ್‌ಫೆಶನ್‌ ರೂಮ್‌ಗೆ ಕರೆಯಿರಿ’’ ಎಂದು ಪದೇ ಪದೇ ಬಿಗ್ ಬಾಸ್‌ಗೆ ಸಂಗೀತಾ ಹೇಳುತ್ತಿದ್ದರು.‘ಬಿಗ್ ಬಾಸ್‌’ ಮನೆಯಿಂದ ಬ್ರಹ್ಮಾಂಡ ಗುರೂಜಿ ಹೊರಟಾಗ, ಅವರೊಂದಿಗೆ ಸಂಗೀತಾ ಶೃಂಗೇರಿ ಕೂಡ ಮೇನ್‌ ಡೋರ್‌ನಿಂದ ಆಚೆ ಕಾಲಿಟ್ಟು, ಬಳಿಕ ಒಳಗೆ ಬಂದರು. ಇಷ್ಟೆಲ್ಲ ಹೈಡ್ರಾಮಾ ಮಾಡಿದ ಸಂಗೀತಾ ಮಾರನೇ ದಿನದ ಟಾಸ್ಕ್‌ನಲ್ಲಿ ಹಗ್ಗ ಹಿಡಿದು ನೇತಾಡಿದ್ದರು. ಟಾಸ್ಕ್‌ ನಿಭಾಯಿಸಿದರು.

ಸಂಗೀತಾ- ಕಾರ್ತಿಕ್‌ ವಾರ್‌

ಸಂಗೀತಾ ಅಡುಗೆ ಮನೆ ಡಿಪಾರ್ಟ್‌ಮೆಂಟ್‌ನಲ್ಲಿದ್ದಾರೆ. ಟಾಸ್ಕ್‌ ಮುಗಿದ ಮೇಲೆ ರಾತ್ರಿ ಅಡುಗೆ ಮಾಡಬೇಕಿತ್ತು. ಆದರೆ ‘’ನನ್ನ ಕೈಗೆ ಏಟಾಗಿದೆ. ನನಗೆ ಅಡುಗೆ ಮಾಡಲು ಆಗಲ್ಲ’’ ಎಂದು ಹೇಳಿದರು. ಈ ವಿಚಾರ ಕಾರ್ತಿಕ್‌ ಹಾಗೂ ಸಂಗೀತಾ ನಡುವೆ ಮಾತಿನ ಚಕಮಕಿ ನಡೆದಿದೆ.

ಸಂಗೀತಾ ಕೂಡ ಮಾತು ಶುರು ಮಾಡಿ ʻನನ್ನ ಕೈಗೆ ಏಟಾಗಿದೆ. ಅಡುಗೆ ಮಾಡಲು ಆಗಲ್ಲ. ಡಿಪಾರ್ಟ್‌ಮೆಂಟ್‌ ಬಂದು ಬಿಟ್ಟರೆ ಮನುಷ್ಯತ್ವ ಮರೆತುಹೋಗೋದಲ್ಲ. ನಿಮಗೆ ನನ್ನ ಜತೆ ಜಗಳ ಆಡ್ತಿರ್ಬೇಕು ಅಂದ್ರೆ ನನಗೆ ಇಂಟ್ರೆಸ್ಟ್ ಇಲ್ಲʼʼಎಂದು ಕಾರ್ತಿಕ್‌ಗೆ ಮಾತು ಕೊಟ್ಟರು.

ಕಾರ್ತಿಕ್‌ ಕೂಡ ಮಾತನಾಡಿ ʻʻಡಿಪಾರ್ಟ್‌ಮೆಂಟ್‌ ಯಾರು ಚೇಂಜ್‌ ಮಾಡಿಕೊಳ್ತಾರೋ, ಅವರೊಂದಿಗೆ ಚರ್ಚೆ ಮಾಡಿ ಹೇಳಿ.. ನನ್ನದೇನೂ ಅಭ್ಯಂತರ ಇಲ್ಲ .ನಮ್ಮ ಜವಾಬ್ದಾರಿ ಬಗ್ಗೆ ಜ್ಞಾನ ಇರಬೇಕು. ಎಲ್ಲವನ್ನೂ ಸ್ಪೂನ್ ಫೀಡ್ ಮಾಡೋಕೆ ಆಗಲ್ಲ.ಟ್ಟು ಬಿಡೋಣ ಇಲ್ಲಿಗೆ. ದಿ ಈಸ್‌ ರಾಂಗ್. ದಿ ಈಸ್ ವೆರಿ ವೆರಿ ರೂಡ್. ನೀವು ಎಲ್ಲಿ ತನಕ ಅಡುಗೆ ಮನೆಯಲ್ಲಿ ಇರ್ತೀರೋ.. ಅಲ್ಲಿ ತನಕ ನಾನು ಕಾಲಿಡೋಲ್ಲ. ಅವರಿಗೆ ಅವರು ಮಾಡ್ತಿರೋದು ಮಾತ್ರ ಸರಿ ಅನ್ಸುತ್ತೆ. ಕಳೆದ ವಾರ ‘’ನೀವೇ ತಪ್ಪು’’ ಅಂತ ಬೆಟ್ಟು ಮಾಡಿ ನಮಗೆ ತೋರಿಸಿದ್ದರು. ಈ ವಾರವೂ ಅದೇ ನಡೆಯುತ್ತಿದೆʼʼಎಂದರು.

ಇದನ್ನೂ ಓದಿ: BBK SEASON 10: ʻಸಂಗೀತಾ ಅವಕಾಶವಾದಿʼ ಎಂದು ಕಿರುಚಾಡಿದ ಮೈಕಲ್‌!

ಬಿಗ್‌ ಬಾಸ್‌ಗೆ ಮನವಿ ಮಾಡಿದ ಸಂಗೀತಾ

ಅಲ್ಲಿಂದ ಸಂಗೀತಾ ಅವರು ಅಳಲು ಶುರು ಮಾಡಿದರು. ನಂತರ ಬಾತ್‌ರೂಮ್‌ನಲ್ಲಿ ಸಂಗೀತಾ ಅವರು ʻʻಪ್ಲೀಸ್‌ ನನ್ನನ್ನ ಕನ್‌ಫೆಶನ್ ರೂಮ್‌ಗೆ ಕರೆಯಿರಿ. ನಾನು ಹೊರಡುತ್ತೇನೆ. ಜರ್ನಿಯನ್ನ ಕಂಟಿನ್ಯೂ ಮಾಡೋಕೆ ಇಷ್ಟವಿಲ್ಲ. ಇದಕ್ಕೆ ನಾನೇ ಜವಾಬ್ದಾರಿ. ಡಿಸ್ಟರ್ಬ್‌ ಆಗಿದ್ದೇನೆ. ಪ್ರೆಶರ್‌ನ ತಗೊಳ್ಳೋಕೆ ಆಗ್ತಿಲ್ಲ. ಪ್ಲೀಸ್‌’’ ಎಂದು ರಿಕ್ವೆಸ್ಟ್‌ ಮಾಡಿದ್ದಾರೆ. ಬಳಿಕ ಕಾರ್ತಿಕ್‌ ಬಂದು ಸಂಗೀತಾ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು.

ಇತ್ತ ನಮ್ರತಾ ಹತ್ತಿರ ಕೂಡ ಸಂಗೀತಾ ಈ ಬಗ್ಗೆ ಮಾತನಾಡಿದ್ದರು. ʻʻನಾನು ಬೈ ಮಿಸ್ಟೇಕ್‌ ಆಗಿ ಎಲ್ಲರನ್ನೂ ವಿನಯ್ ಅಂತ ಕರೆಯುತ್ತಿದ್ದೀನಿ. ಅದು ಬರ್ತಾಯಿದೆ ಬಾಯಲ್ಲಿ. ನಂಗೆ ಗೊತ್ತಿಲ್ಲ ಯಾಕೆ ಅಂತ.. ಅದಕ್ಕೂ ಅವನು ಕೊಟ್ಟ ರಿಯಾಕ್ಷನ್ ನೋಡಿದ್ರಾ?ನಾಮಿನೇಷನ್‌ ವೇಳೆ ನಾನು ವಿನಯ್ ಅವರಿಗೆ ಕೀ ಕೊಟ್ಟೆ. ಅದೂ ಅವರಿಗೆ ಪ್ರಾಬ್ಲಂ. ಅವರ ತಲೆ ಕೂದಲು ಹೋಗಿದೆ ಅಂದ್ರೆ ನಾನು ಹೇಳಿದ್ನಾ? ಅದು ಟೀಮ್ ನಿರ್ಧಾರ. ಅವರ ಈಗೋ ಇಂದ ಅವರು ಮಾಡಿದರುʼʼಎಂದು ಹೇಳಿದರು.

ಹೈಡ್ರಾಮಾ ನಡದೇ ಹೋಯ್ತು!

‘ಬ್ರಹ್ಮಾಂಡ ಗುರೂಜಿ ಬೀಳ್ಕೊಡಬೇಕು ಎಂದು ‘ಬಿಗ್ ಬಾಸ್‌’ ಸೂಚಿಸಿದಾಗ ನಾನೂ ಹೊರಡುತ್ತೇನೆ ಎಂದು ಸಂಗೀತಾ ಹೊರಟು ನಿಂತರು.. ಬಳಿಕ ಸಂಗೀತಾ ಒಳಗೆ ಬಂದರು. ಇದೇ ಸಮಯದಲ್ಲಿ ಸಂಗೀತಾ ಮೈಕ್‌ ಬಿಚ್ಚಿಟ್ಟರು. ವಿನಯ್‌ ಕೂಡ ಸಂಗೀತಾಗೆ ʻʻಏನೋ ಒಂದು ಕಿಚನ್‌ದು ಮಾತು ಬಂತು ಹೋಯ್ತು. ಅಷ್ಟಕ್ಕೆ ಬಿಟ್ಟುಬಿಟ್ತೀನಿ ಅನ್ನೋದಾ?
ಮಾತನಾಡಿ ಪರಿಹಾರ ಮಾಡಿಕೋʼʼಎಂದರು.

ಬಳಿಕ ಸಂಗೀತಾಗೆ ಕಾರ್ತಿಕ್‌ ಸಮಧಾನ ಮಾಡಿ ʻಊಟದ ವಿಷ್ಯದಲ್ಲಿ ನಾನು ಕೂಗಾಡಿದ್ದು ಸ್ನೇಹಿತ್ ಬಗ್ಗೆ. ನಿನ್ನ ಮೇಲಲ್ಲ. ಆದರೂ ಸಾರಿ. ಎಂದುರು. ಸಂಗೀತಾ ಕೂಡ ಕಾರ್ತಿಕ್‌ಗೆ ನಿಮ್ಮ ಬಗ್ಗೆ ಏನೂ ಇಲ್ಲ. ನನಗೆ ನಿಮ್ಮ ಜತೆ ಮಾತನಾಡೋಕೆ ಇಷ್ಟ ಇಲ್ಲ. ಇನ್ಮೇಲೆ ಯಾವತ್ತೂ ನಿಮ್ಮ ಜೊತೆ ಮಾತನಾಡಲ್ಲ. ‘ಬಿಗ್ ಬಾಸ್‌’ ಎಂಡ್‌ ಆದ್ಮೇಲೂ ನಾನು ನಿಮ್ಮೊಂದಿಗೆ ಮಾತನಾಡಲ್ಲ. ನನಗೆ ಮಾತನಾಡಲು ಇಷ್ಟವಿಲ್ಲʼʼ ಎಂದರು.

ಈ ವೇಳೆ ಕಾರ್ತಿಕ್ ಎದ್ದು ಹೊರಟರು. ಕಾರ್ತಿಕ್ ಊಟ ತಂದರೂ ಸಂಗೀತಾ ತಿನ್ನಲಿಲ್ಲ. ʻʻನನ್ನನ್ನ ಬ್ಲೇಮ್ ಮಾಡ್ತಿದ್ದಾಳೆ. ನನ್ನನ್ನ ಕೆಟ್ಟವನನ್ನಾಗಿ ಮಾಡ್ತಿದ್ದಾಳೆ. ನನ್ನನ್ನ ಮಾತಾಡೋಕೆ ಬಿಡ್ತಿಲ್ಲ. ನನ್ನ ಕೈಯಲ್ಲಿ ಮಾತನಾಡಲು ಆಗಲ್ಲʼʼ ಎಂದು ಕಾರ್ತಿಕ್‌ ವಿನಯ್‌ ಹತ್ತಿರ ಹೇಳಿಕೊಂಡಿದ್ದಾರೆ. ಮಾರನೇ ದಿನದ ಟಾಸ್ಕ್‌ನಲ್ಲಿ ನೀತು ವಿರುದ್ಧ ಸಂಗೀತಾ ಗೆದ್ದರು. ಸಂಗೀತಾ ಗೆಲುವನ್ನ ವಿನಯ್ ಸಂಭ್ರಮಿಸಿದರು. ಮಾತ್ರವಲ್ಲ ಎಲ್ಲ ಟಾಸ್ಕ್‌ನಲ್ಲಿ ಸಖತ್‌ ಆಕ್ಟಿವ್‌ ಆದರು. ಇದೆಲ್ಲ ಗಮನಿಸಿದ ಪ್ರೇಕ್ಷಕರು ಸಂಗೀತಾ ಅವಕಾಶವಾದಿನೇ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version