Site icon Vistara News

BBK SEASON 10: ʻಸಂಗೀತಾʼ ಐಡಿಯಾಗೆ ವೀಕ್ಷಕರಿಂದ ಮೆಚ್ಚುಗೆ; ವಿನಯ್‌ ಟೀಂಗೆ ಸಂಕಷ್ಟ

Sangeetha and vinay bbk 10

ಬೆಂಗಳೂರು: ‘ಬಿಗ್ ಬಾಸ್‌ ಕನ್ನಡ 10’ (BBK SEASON 10) ಕಾರ್ಯಕ್ರಮದಲ್ಲಿ ಈ ವಾರ ʻಗಂಧರ್ವರುʼ ಹಾಗೂ ʻರಾಕ್ಷಸರುʼ ಟಾಸ್ಕ್‌ನಿಂದಾಗಿ ಇಡೀ ಮನೆ ರಣರಂಗವಾಗಿದೆ. ಮಾತ್ರವಲ್ಲ ಸಂಗೀತ ಅವರ ಆಟದ ವೈಖರಿ ಪ್ರೇಕ್ಷರಿಗೆ ಇಷ್ಟವಾಗಿದೆ. ರಾಕ್ಷಸರು ರಾಕ್ಷಸರಂತೆ ವರ್ತಿಸಿದ್ದಾರೆ. ಗಂಧರ್ವರು ಕೂಡ ರಾಕ್ಷಸರಂತೆ ನಡೆದುಕೊಂಡಿದ್ದಾರೆ. ಮೊದಲ ಹಂತದಲ್ಲಿ ಗಂಧರ್ವರಾಗಿದ್ದವರು ವರ್ತೂರು ಸಂತೋಷ್‌ ಮತ್ತು ತಂಡ, ರಾಕ್ಷಸರಾಗಿದ್ದವರು ಕಾರ್ತಿಕ್ ಮತ್ತು ತಂಡ. ಎರಡನೇ ಹಂತದಲ್ಲಿ ರೋಲ್ ರಿವರ್ಸ್ ಆಯ್ತು. ವರ್ತೂರು ಸಂತೋಷ್‌ ಮತ್ತು ತಂಡ ರಾಕ್ಷಸರಾದ್ಮೇಲೆ ರಿವೆಂಜ್ ಗೇಮ್‌ ಶುರುವಾಯಿತು. ಇದಾದ ಮೇಲೆ ಪರ್ಸನಲ್‌ ಅಟ್ಯಾಕ್‌ ಕೂಡ ಆಯ್ತು. ಅಲ್ಲಿಂದ ಸಂಗೀತಾ ಒಂದು ಹೊಸ ಐಡಿಯಾ ಮಾಡಿದರು. ನಿಯಮಗಳ ಮೇಲೆ ಹೆಚ್ಚು ಗಮನ ಹರಿಸಿದ ಸಂಗೀತಾ, ‘’ರಾಕ್ಷಸರ ಬೇಡಿಕೆ ಈಡೇರಿಸಬೇಕೇ ಹೊರತು ಶಿಕ್ಷೆ ತೆಗೆದುಕೊಳ್ಳಬೇಕು ಅಂತೇನಿಲ್ಲ’’ ಎಂದರು. ಇದರಿಂದ ವಿನಯ್‌ ಟೀಂಗೆ ಸಂಕಷ್ಟ ತಂದೊಡ್ಡಿತು.

ಸಂಗೀತಾ ಅವರು ನಿಧಾನವಾಗಿ ಅಡುಗೆ ಮನೆ ಸೇರಿದರು. ರಾಕ್ಷಸರು ಏನು ಹೇಳಿದರೂ ಕೇಳದೇ ಬೇಡಿಕೆಯನ್ನು ಪೂರೈಸದೆ ತಮ್ಮ ಕಾರ್ಯವನ್ನು ಮಾಡುತ್ತಲೇ ಇದ್ದರು. ‘ಚೇರ್ ಆಫ್ ಥಾರ್ನ್ಸ್’ ಟಾಸ್ಕ್‌ನಲ್ಲಿ ಸಂಗೀತಾ ಟೀಂ ಆಗ್ರೆಸಿವ್‌ ಆಗಿ ಆಟ ಆಡಿದ್ದು ಗೋತ್ತೇ ಇದೆ. ಅದೇ ರೀತಿ ವಿನಯ್‌ ತಂಡ ಜಿದ್ದಿಗೆ ಬಿದ್ದು, ಕಾರ್ತಿಕ್‌ ಮೇಲೆ ಜೋರಾಗಿ ವಿನಯ್‌ ನೀರು ರಾಚಿದರು. ಪವಿ ಪೂವಪ್ಪ ಹಾಗೂ ಸಂಗೀತಾ ಕೈಯಿಂದಲೂ ಕಾರ್ತಿಕ್‌ಗೆ ನೀರು ಎರಚಿಸಿದರು. ಇದೆನ್ನೆಲ್ಲ ಗಮನಸಿದ ಸಂಗೀತಾ ಅವರು ನಿಯಮಗಳತ್ತ ಕಣ್ಣಾಡಿಸಿದರು.

ಬಳಿಕ ಕಾರ್ತಿಕ್ ಬಳಿ ಬಂದ ಸಂಗೀತಾ, ‘’ನಾವೆಲ್ಲರೂ ಶಿಕ್ಷೆ ತಗೊಳ್ಬೇಕು ಅಂತಿಲ್ಲ. ಆರ್ಡರ್‌ ತಗೊಳ್ಬೇಕು ಅಂತ ಇದೆ ಅಷ್ಟೇ. ಬಕ್ರಾ ಆಗಬೇಡಿ. ಬುದ್ಧಿವಂತಿಕೆ ಬಳಸಿ ಆಟವಾಡಿ’’ ಎಂದರು.

ಇದನ್ನೂ ಓದಿ: BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

ಇದಾದ ಬಳಿಕ ಈ ಗಂಧರ್ವ ಮತ್ತು ರಾಕ್ಷಸರ ಲೋಕದ ಒಡೆಯ ಸ್ನೇಹಿತ್‌ ಜತೆ ಸಂಗೀತಾ ಮಾತನಾಡಿದರು. ʻʻಬೇಡಿಕೆ ಅಂದ್ರೆ ರಿಕ್ವೆಸ್ಟ್. ಶಿಕ್ಷೆ ತಗೊಳ್ಬೇಕು ಅಂತೇನಿಲ್ಲವಲ್ಲ’’ ಎಂದು ಹೇಳಿದರು ಸಂಗೀತಾ. ಹೀಗೆ ಸ್ನೇಹಿತ್‌ ಕೂಡ ಸಂಗೀತಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರು. ಮಾತ್ರವಲ್ಲ ವಿನಯ್‌ ಟೀಂ ಅವರು ನನಗೆ ಲೂಸರ್‌ ಎಂದು ಹೇಳಿದ್ದಾರೆ. ಇದು ಪರ್ಸನಲ್ ಅಟ್ಯಾಕ್ ಅಲ್ವಾ?’’ ಎಂದು ಸಂಗೀತಾ ಪ್ರಶ್ನಿಸಿದರು. ಇದಕ್ಕೆ ಸ್ನೇಹಿತ್‌ ಒಪ್ಪಿಗೆ ಕೂಡ ಸೂಚಿಸಿದರು.

ʻತಂಡಕ್ಕೆ ಕೂಡ ಸಂಗೀತಾ ಅವರು ನಾವು ಗುಲಾಮರಲ್ಲ. ನಾವ್ಯಾಕೆ ಶಿಕ್ಷೆ ತಗೊಳ್ಬೇಕು? ಸ್ಮಾರ್ಟ್ ಆಗಿ ಆಡೋಣ ಎಂದು ಹುರಿದುಂಬಿಸಿದರು. ಈ ಬಗ್ಗೆ ವರ್ತೂರ್‌ ಸಂತೋಷ್‌ ಹಾಗೂ ಪ್ರತಾಪ್‌ ಕೂಡ ತಮ್ಮಲ್ಲೇ ಮಾತನಾಡಿಕೊಂಡಿದ್ದಾರೆ. ಇದಾದ ಬಳಿಕ ಕಾರ್ತಿಕ್‌ ಹಾಗೂ ವಿನಯ್‌ ನಡುವೆ ಚಪ್ಪಲಿ ಜಗಳ ಆಗಿದೆ.

‘’ನಾವು ಗಂಧರ್ವರು. ನಾವೆಲ್ಲಾ ಒಟ್ಟಿಗೆ ಇರೋಣ. ಲೀಡರ್‌ ಆಗಿ ನಾನು ಮನವಿ ಮಾಡುತ್ತಿದ್ದೇನೆ. ಪ್ಲೀಸ್‌ ನಾವು ಗೆಲ್ಲಬೇಕು. ಪ್ಲೀಸ್‌.. ನಾನು ಏನೋ ವಿಷ್ಯ ಹೇಳಿದ್ದೀನಿ ಅದನ್ನ ಸ್ವೀಕರಿಸಿ. ನಾನು ನಿಮ್ಮ ಒಳ್ಳೆಯದ್ದಕ್ಕೆ ಹೇಳಿದ್ದು. ಅವರಿಗೆ ಮಾಡಲ್ಲ ಅಂತ ಹೇಳ್ತಿಲ್ಲ. ಅವರ ಶಿಕ್ಷೆಯನ್ನ ನಾವು ತಗೊಳ್ತಿದ್ದೀವಿ ಅಂದರೆ ಅವರು ಗೆದ್ದಿದ್ದಾರೆ ಎಂದು ಅರ್ಥ. ಇದು ನನಗೆ ಅರ್ಥ ಆಗಿರುವ ಲಾಜಿಕ್‌ʼʼ ಎಂದರು ಸಂಗೀತಾ.

ಸಂಗೀತಾ ಅವರು ಈ ಲಾಜಿಕ್‌ ರಾಕ್ಷಸರನ್ನು ಟ್ರಿಗರ್‌ ಮಾಡಿದೆ. ತುಕಾಲಿ ಕೂಡ ನಾವು ಸಮ್ಮನೇ ಕೂರಬೇಕಾ ಎಂದು ಕೂಗಿದ್ದಾರೆ. ಸಂಗೀತಾ ಐಡಿಯಾ ರಾಕ್ಷಸರ ಪ್ಲಾನ್ ತಲೆಕೆಳಗಾಯಿತು. ವೀಕ್ಷಕರು ಮಾತ್ರ ಸಂಗೀತಾ ಅವರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version