Site icon Vistara News

BBK SEASON 10: ʻನಾನು ಲೂಸರ್‌ʼ ಎಂದ ಸಂಗೀತಾ, ಗುಲಾಮನಾದ ಕಾರ್ತಿಕ್;‌ ʻಆನೆʼಯ ರಿವೆಂಜ್‌!

Sangita said I am a loser Karthik is a slave Vinay Gowda Revenge

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 9ನೇ ವಾರ ಮನೆಯಲ್ಲಿ ʻರಾಕ್ಷಸರುʼ ಹಾಗೂ ʻಗಂಧರ್ವರʼ ಗುಂಪು ಆಗಿದೆ. ಈಗಾಗಲೇ ಎರಡೂ ತಂಡಗಳೂ ಅದಲು ಬದಲಾಗಿವೆ. ಮೊದಲ ಹಂತದಲ್ಲಿ ಸಂಗೀತಾ ಅವರ ಟೀಂ ರಾಕ್ಷಸರಾಗಿದ್ದು, ವರ್ತೂರ್‌ ತಂಡಕ್ಕೆ ಸಿಕ್ಕಾಪಟ್ಟೆ ಗೋಳಾಡಿಸಿದೆ. ಆದರೀಗ ವಿನಯ್‌ ಟೀಂ ರಾಕ್ಷಸರಾಗಿದ್ದು, ಸಂಗೀತಾ ಟೀಂಗೆ ಸಖತ್‌ ಆಟ ಆಡಿಸುತ್ತಿದೆ. ವಿನಯ್ ಅವರಿಗೆ ವೀಕ್ಷಕರಿಂದ ಸಿಕ್ಕಿದ್ದ ‘ಆನೆ’ಯನ್ನ ರಾಕ್ಷಸ ಕಾರ್ತಿಕ್‌ ಕಸದ ಬುಟ್ಟಿಗೆ ಹಾಕಿದ್ದರು. ಇದಕ್ಕೆ ಕಾರ್ತಿಕ್‌ ಅವರು ಬೆಲೆ ತರಬೇಕಾಗಿದೆ. ವಿನಯ್‌ ಈಗ ಕಾರ್ತಿಕ್‌ ಅವರಿಂದ ಕ್ಷಮೆ ಕೇಳಿಸಿದ್ದಾರೆ. ‘’ನಾನು ದಡ್ಡ, ಗುಲಾಮ’’ ಎಂದು ವಿನಯ್‌ ಅವರು ಕಾರ್ತಿಕ್‌ ಅವರಿಂದ ಹೇಳಿಸಿದ್ದಾರೆ.

ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್‌ನ ಮೊದಲ ಹಂತದಲ್ಲಿ ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರು. ಗಂಧರ್ವರನ್ನು ರಾಕ್ಷಸರು ಪ್ರಚೋದಿಸಬೇಕು. ‘’ಆನೆ ಬಂತೊಂದ್‌ ಆನೆ.. ಆನೆಯನ್ನ ಏನು ಮಾಡಬೇಕು? ಕೆಳಗೆ ಹಾಕಬೇಕು.. ತುಳಿಯಬೇಕು. ಮೇಲಿಂದ ಹಾಕಬೇಕು, ತುಳಿಯಬೇಕು’’ ಎಂದು ಆನೆಯನ್ನ ಕಾರ್ತಿಕ್‌ ಕೆಳಗೆ ಬೀಳಿಸಿದರು. ಮಾತ್ರವಲ್ಲ ವಿನಯ್‌ ಅವರಿಂದ ಕಸವನ್ನು ಎತ್ತಿಸಿದ್ದರು. ಮತ್ತೆ ಮತ್ತೆ ಕಸವನ್ನು ಚೆಲ್ಲಿ ಕಾರ್ತಿಕ್‌ ಅವರು ಪದೇ ಪದೆ ವಿನಯ್‌ ಅವರಿಗೆ ಕಸವನ್ನು ಎತ್ತಲು ಹೇಳುತ್ತಿದ್ದರು. ಇದೆಲ್ಲ ಆದ ಬಳಿಕ ತುಕಾಲಿ ಹಾಗೂ ವಿನಯ್‌ ಅವರು ತಮ್ಮ ಗುಂಪಿನಲ್ಲಿ ಮಾತನಾಡಿಕೊಂಡು ʻʻಇವರೆಲ್ಲರನ್ನೂ ಹುಚ್ಚು ನಾಯಿ ತರ ಆಡಿಸಬೇಕುʼʼ ಎಂದಿದ್ದರು.

ಇದನ್ನೂ ಓದಿ: BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

ನಾನು ಸಂಗೀತಾ.. ನಾನು ಲೂಸರ್‌

ಇದಾದ ಬಳಿಕ ಗಂಧರ್ವರು ಹಾಗೂ ರಾಕ್ಷಸರು ಅದಲು ಬದಲಾದರು. ಅಲ್ಲಿಂದ ವಿನಯ್‌ ಅವರ ರಿವೆಂಜ್‌ ಶುರುವಾಯ್ತು. ಅವಿನಾಶ್‌ ಅವರಿಗೆ ʻಟಾಮಿʼ ಎಂದು ಹೆಸರಿಟ್ಟರು. ಮೈಕಲ್, ನಮ್ರತಾ ಈ ಹೆಸರಿಟ್ಟು ಟಾಸ್ಕ್‌ ಮುಗಿಯುವವರೆಗೆ ನಿನ್ನ ಹೆಸರು ಇದು ಎಂದರು. ಸಂಗೀತಾ ಅವರನ್ನ ‘’ಜೂಲಿ’’ ಎಂದು ನಮ್ರತಾ ಕರೆದರು. ಮೂಗು ನೆಲಕ್ಕೆ ತಾಗುವಂತೆ ನಡೆಯಬೇಕು ಎಂದು ಅವಿನಾಶ್ ಶೆಟ್ಟಿ, ಸಂಗೀತಾಗೆ ರಾಕ್ಷಸರು ಕರೆದರು. ಕಾರ್ತಿಕ್‌ ಅವರಿಗೆ ʻಬೋಡಾʼ ಎಂದು ಕರೆದರು. ‘’ನಾನು ಸಂಗೀತಾ.. ನಾನು ಲೂಸರ್‌’’ ಎಂದು ಹೇಳುವಂತೆ ಸಂಗೀತಾಗೆ ರಾಕ್ಷಸರು ಸೂಚಿಸಿದರು. ಸಂಗೀತಾ ಹೇಳಿದರು ಕೂಡ.

ಕಾರ್ತಿಕ್ ಕಸದ ಬುಟ್ಟಿಗೆ ಹಾಕಿದ್ರಿಂದ, ವಿನಯ್ ಕ್ಷಮೆ ಕೇಳಿಸಿದರು. ‘’ಮಂಡಿ ಕಾಲಲ್ಲಿ ಹೋಗಿ, ಮರ್ಯಾದೆಯಿಂದ ಆನೆಯನ್ನ ತಗೊಂಡ್ ಬರಬೇಕು’’ ಎಂದು ವಿನಯ್ ಆದೇಶಿಸಿದರು. ಬಳಿಕ, ‘’ಏಯ್‌ ದಡ್ಡ, ಗುಲಾಮ… ಫ್ಯಾನ್ಸ್ ಕೊಟ್ಟಂತಹ ಆನೆಯನ್ನ ಡಸ್ಟ್ ಬಿನ್‌ಗೆ ಹಾಕಿದ್ದಕ್ಕೆ ಕರ್ನಾಟಕದ ಜನತೆಗೆ ಕ್ಷಮೆ ಕೇಳ್ತೀನಿ ಎಂದು ಆನೆಗೆ ಕೈ ಮುಗಿ’’ ಎಂದು ವಿನಯ್‌ ಹೇಳಿದರು. ಕಾರ್ತಿಕ್‌ ಕೂಡ ಕ್ಷಮೆ ಕೇಳಿದರು.

ನಾನೊಬ್ಬಳು ಜಗಳಗಂಟಿ, ಬಾಯ್ಬಡಕಿ

ಅತ್ತ ನಮ್ರತಾ ಕೂಡ ಸಂಗೀತಾ ʻನಾನೊಬ್ಬ ಲೂಸರ್‌ʼ ಎಂದು ಹೇಳು ಎಂದು ಹೇಳಿಸಿದರು. ವಿನಯ್‌ ಕೂಡ ಸಂಗೀತಾಗೆ ʻʻನಾನು ಒಬ್ಬರು ಮಾತಾಡಿರೋ ಮಾತನ್ನು ಮಾನಿಪ್ಯುಲೇಟ್ ಮಾಡಿ ನೆಗೆಟಿವ್ ಆಗಿ ತೋರಿಸ್ತೀನಿ.. ಕ್ಷಮೆ ಇರಲಿʼʼ ಎಂದು ವಿನಯ್‌ ಹೇಳಿಸಿದರು. ತನಿಷಾಗೆ ವರ್ತೂರ್‌ ಕೂಡ ಬಿಡಲಿಲ್ಲ. ʻಕಾರ್ತಿಕ್‌ ಸಂಗೀತಾಗೆ ಬೇಕಾಗುವಂತಹ ಮಾತುಗಳನ್ನು ತಿರುಚಿ ಹೇಳ್ತೀನಿ. ನಾನೊಬ್ಬಳು ಜಗಳಗಂಟಿ, ಬಾಯ್ಬಡಕಿʼ ಎಂದು ತನಿಷಾರಲ್ಲಿ ವರ್ತೂರ್‌ ಹೇಳಿಸಿದರು. ಇತ್ತ ವಿನಯ್‌ ಕೂಡ ಅವಿನಾಶ್‌ಗೆ ʻʻನಾನು ಮಾವುತ ಅಲ್ಲ. ಹುಚ್ಚು ಕುದುರೆʼʼ ಎಂದು ಹೇಳಿಸಿದರು.

ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು. ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ. ರಕ್ಕಸರಾಗಿದ್ದವರು ಗಂಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗಂಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ.

ಇದನ್ನೂ ಓದಿ: BBK SEASON 10: ಗಂಧರ್ವರು-ರಾಕ್ಷಸರು ಅದಲು ಬದಲು; ಜೋರಾಯ್ತು ʻಆನೆʼಯ ಆರ್ಭಟ!

ಹುಚ್ಚೇಟು ಹೊಡೆಯುತ್ತೇನೆ

ವಿನಯ್ ಗೌಡ ಅವರು ʻʻನನ್ನ ಪಾತ್ರದಿಂದ ಹೊರಗೆ ಬಂದರೆ ಆ ವಿಷಯವೇ ಬೇರೆ. ಬರ್ತೀನಿ. ಹೇಗ್‌ ಬರ್ತೀನಿ ಅಂದರೆ, ಪಾಪ ಅವರು! ಬೇಜಾರಾಗ್ತಿದೆ ಅವರ ನೆನೆಸಿಕೊಂಡರೆ. ಬಿಗ್ ಬಾಸ್ ನಿಮ್ಮ ಪಾತ್ರಗಳು ಮುಗೀತು ಎಂದು ಹೇಳುವವರೆಗೂ ನೀವು ಏನೂ ಸುಳಿವು ಕೊಡಬೇಡಿ, ಆಮೇಲೆ ಇದೆ ಅವರಿಗೆ. ಹುಚ್ಚೇಟು ಹೊಡೆಯುತ್ತೇನೆ. ನಾನು ಒಮ್ಮೆ ಪಾತ್ರದಿಂದ ಹೊರಗಡೆ ಬರಲಿ, ಆಗ ಇದೆ” ಎಂದು ಹೇಳಿದ್ದರು. ಇದೀಗ ಆ ಸದಾವಕಾಶ ವಿನಯ್‌ ಅವರಿಗೆ ಲಭಿಸಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version