Site icon Vistara News

Bigg Boss Kannada | ಪುಟ್ಟ ಗೌರಿ ಮದುವೆಯ ಸಾನ್ಯ ನೆನಪಿನ ಬುತ್ತಿ; ಕಿಚ್ಚನ ಪ್ರಶ್ನೆಗೆ ಸೀತಾವಲ್ಲಭದ ಸ್ಫೂರ್ತಿ ಸುಸ್ತು

Bigg Boss Kannada

ಬೆಂಗಳೂರು: ಮುಂಗಾರು ಮಳೆ ನೋಡಿ ಆರ್ಟಿಸ್ಟ್‌ ಆಗಬೇಕೆಂಬ ಕನಸು ಹೊತ್ತಿದ್ದ ಮಲೆನಾಡು ಹುಡುಗಿ ಸ್ಫೂರ್ತಿ ಗೌಡ ಅವರು ಸೀತಾವಲ್ಲಭ ಧಾರಾವಾಹಿ ಮೂಲಕ ಜನಮನ್ನಣೆ ಪಡೆದುಕೊಂಡಿದ್ದರು. ಆದರೆ, ಇವರಿಗೆ ನಮ್ಮ ದೇಶದ ರಾಷ್ಟ್ರಪತಿ ಬಗ್ಗೆಯೂ ಗೊತ್ತಿಲ್ಲ, ಪಂಚ ಪಾಂಡವರ ಬಗ್ಗೆ ಕೇಳಿದರೂ ತಿಳಿದಿಲ್ಲ ಎಂಬ ವಿಷಯ ಬಿಗ್‌ ಬಾಸ್‌ ಮನೆ ಮೂಲಕ ಎಲ್ಲರ ಮನೆ ಮನೆ ತಲುಪಿದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಐದು ಪ್ರಶ್ನೆಗಳನ್ನು ಕಿಚ್ಚ ಸುದೀಪ್‌ ಕೇಳಿದ್ದರು. ಅದರಲ್ಲಿ ಮುಖ್ಯವಾಗಿ ರಾಷ್ಟ್ರಪತಿ ಹೆಸರು ಕೇಳಿದಕ್ಕೆ ನರೇಂದ್ರ ಮೋದಿ ಎಂದು ಉತ್ತರಿಸಿದ ಸ್ಫೂರ್ತಿ, ಪಂಚ ಪಾಂಡವರ ಬಗ್ಗೆ ಕೇಳಿದಾಗ ಗೊತ್ತಿಲ್ಲ ಎಂದಿದ್ದಾರೆ.

ಬಳಿಕ ನಟಿ ಸಾನ್ಯ ೫ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದು, ನೃತ್ಯದ ಮೂಲಕ ವೇದಿಕೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಸಾನ್ಯ ಅಯ್ಯರ್‌ ಜ್ಯೂನಿಯರ್‌ ಪುಟ್ಟಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಂಟನೇ ತರಗತಿವರೆಗೆ ಸಾನಿಯಾ ಅಯ್ಯರ್‌ ನಟಿಸಿದ್ದರು. ಬಳಿಕ ನಟನೆಯಲ್ಲಿ ಸ್ವಲ್ಪ ಗ್ಯಾಪ್‌ ಪಡೆದುಕೊಂಡಿದ್ದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆಯುತ್ತಿರುವ ಇವರು, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಿರೂಪಣೆಯ ಸೂಪರ್‌ ಮಿನಿಟ್‌ ಶೋನಲ್ಲಿಯೂ ಭಾಗಿಯಾಗಿದ್ದರು. ಆರಾರೋ..ನೀಯಾರೋ ಆಲ್ಬಂ ಸಾಂಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಗುಲಾಬ್‌ ಜಾಮೂನ್‌ ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ತಾಯಿ ದೀಪಾ ಅಯ್ಯರ್‌ ಕೂಡ ನಟಿಯಾಗಿದ್ದಾರೆ. ‘ಡ್ಯಾನ್ಸಿಂಗ್ ಸ್ಟಾರ್ಸ್‌’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಆಧ್ಯಾತ್ಮಿಕ ನೆಲೆಯನ್ನು ತುಂಬಾ ಇಷ್ಟ ಪಡುತ್ತಾರಂತೆ ನಟಿ ಸಾನ್ಯ. ಪುಟ್ಟ ಗೌರಿ ಮದುವೆ ಪ್ರೋಮೊ ಹಂಚಿಕೊಂಡು ಮತ್ತೆ ಹಳೆಯ ನೆನೆಪು ಮೆಲುಕು ಹಾಕಿದ ಕಿಚ್ಚ ಸುದೀಪ್‌. ಈ ಹಿಂದೆ ಕೂಡ ಕಿಚ್ಚ ಸುದೀಪ್‌ ಅವರೊಂದಿಗೆ ಪ್ರೋಮೊ ಶೂಟ್‌ನಲ್ಲಿ ಸಾನ್ಯ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಜೋಶ್‌ ಸಿನಿಮಾ ಖ್ಯಾತಿಯ ರಾಕೇಶ್‌ ಅಡಿಗ ಬಿಗ್‌ ಬಾಸ್‌ ಮನೆಗೆ ಪ್ರವೇಶ

Exit mobile version