Site icon Vistara News

BBK Season 10: ಈ ವಾರ ಏಳು ಮಂದಿ ನಾಮಿನೇಟ್‌; ಗೆದ್ದು ಬೀಗಿದ ಡ್ರೋನ್‌ ಪ್ರತಾಪ್‌!

bbk 10 contestant

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಮೊದಲಿಗೆ 10 ಮಂದಿ ನಾಮಿನೇಟ್‌ ಆಗಿದ್ದರು. ಐದನೇ ವಾರದ ನಾಮಿನೇಷನ್‌ ಪ್ರಕ್ರಿಯೆ ವಾರದ ಟಾಸ್ಕ್‌ಗಳ ಮೇಲೆ ಇದ್ದಾಗಿದ್ದು, ಸದ್ಯ ಏಳು ಮಂದಿ ಡೇಂಜರ್ ಝೋನ್‌ನಲ್ಲಿದ್ದಾರೆ. ಬಿಗ್‌ ಬಾಸ್‌ `ಗಂಧದ ಗುಡಿ’ ಹಾಗೂ`ವಜ್ರಕಾಯ’ ತಂಡಕ್ಕೆ ಈ ವಾರ ಟಾಸ್ಕ್‌ ಆಡಿಸಿದೆ. ಹೀಗೆ ನಾಮಿನೇಟ್‌ನಿಂದ ಉಳಿಸುವ ಹಾಗೂ ನಿರ್ಬಂಧಿಸುವ ಅಧಿಕಾರ ಕ್ಯಾಪ್ಟನ್‌ ಪ್ರತಾಪ್‌ಗೆ ಕೊಟ್ಟಿದ್ದರು. ವಾರವೀಡಿ ಗೆದ್ದ ಪ್ರತಾಪ್‌ ಟೀಂ ಭಾಗ್ಯಶ್ರೀ , ಸಂಗೀತಾ , ತನಿಷಾ ಅವರನ್ನು ಬಚಾವ್ ಮಾಡಿದರು. ಸ್ನೇಹಿತ್‌ ಅವರನ್ನು ನಾಮಿನೇಟ್‌ನಿಂದ ಪಾರಾಗದಂತೆ ನಿರ್ಬಂಧಿಸಿದರು. ಹೀಗಾಗಿ ಈ ವಾರ ಏಳು ಮಂದಿ ನಾಮಿನೇಟ್‌ ಆಗಿದ್ದಾರೆ.

ಇಶಾನಿ, ನಮ್ರತಾ ಗೌಡ, ಸ್ನೇಹಿತ್ ಗೌಡ, ನೀತು, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್, ಭಾಗ್ಯಶ್ರೀ, ಸಂಗೀತಾ ಮತ್ತು ತನಿಷಾ ಕುಪ್ಪಂಡ ನಾಮಿನೇಟ್ ಆಗಿದ್ದರು. ಟಾಸ್ಕ್‌ಗಳಲ್ಲಿ ಗೆದ್ದ ಬಳಿಕ ನಾಮಿನೇಶನ್‌ನಿಂದ ಭಾಗ್ಯಶ್ರೀ, ಸಂಗೀತಾ ಮತ್ತು ತನಿಷಾ ಬಚಾವ್ ಆದರು ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಲು ಇಶಾನಿ, ನಮ್ರತಾ, ಸ್ನೇಹಿತ್, ನೀತು, ವರ್ತೂರು ಸಂತೋಷ್, ತುಕಾಲಿ ಸಂತು ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

ಬಚಾವ್‌ ಆದ ಭಾಗ್ಯಶ್ರೀ

ಹಿಂದಿನ ವಾರವಷ್ಟೇ ಕಿಚ್ಚನ ಪಂಚಾಯ್ತಿಯಲ್ಲಿ ಈ ಬಗ್ಗೆ ಪ್ತಸ್ತಾಪ ಆಗಿತ್ತು. ವಿನಯ್‌ ಹಾಗೂ ತುಕಾಲಿಗೆ ಭಾಗ್ಯಶ್ರೀ ಎಲಿಮಿನೇಟ್‌ ಆಗದೇ ಇರುವ ಬಗ್ಗೆ ಬೇಸರ ಕೂಡ ಇತ್ತು. ಆದರೆ ನಾಮಿನೇಶನ್‌ನಿಂದ ಭಾಗ್ಯಶ್ರೀ ಪಾರಾದರು. ಈ ವಾರವೂ ಹಾಗೇ ಆಗಿದೆ. ಡ್ರೋನ್ ಪ್ರತಾಪ್‌ ಅವರಿಗೆ ಸಿಕ್ಕ ಅಧಿಕಾರದಿಂದಾಗಿ ಭಾಗ್ಯಶ್ರೀ ನಾಮಿನೇಶನ್‌ನಿಂದ ಸೇಫ್ ಆದರು. ಇನ್ನು ಸಂಗೀತಾ ಹಾಗೂ ತನಿಷಾದೂ ಅದೇ ಕಥೆ. ಈ ವಾರ ಔಟ್‌ ಆಗೋದು ಯಾರು? ಎಂಬ ಪ್ರಶ್ನೆ ಇದೀಗ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇಶಾನಿ ಮನೆಯಿಂದ ಹೊರಗೆ ಹೋಗಬಹುದು ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: BBK Season 10: ಸೋಲಿನ ಭೀತಿ ʻವಜ್ರಕಾಯʼ ತಂಡವನ್ನು ಕಾಡ್ತಿದ್ಯಾ? ಸಂಗೀತಾ-ವಿನಯ್‌ ಜಿದ್ದಾಜಿದ್ದಿ!

ನಾಲ್ಕು ಟಾಸ್ಕ್‌ಗಳಲ್ಲಿ 3 ರಲ್ಲಿ ಗೆದ್ದು, 1 ಅನ್ನು ‘ಗಂಧದ ಗುಡಿ ತಂಡ ಡ್ರಾ ಮಾಡಿಕೊಂಡಿದೆ. 3 ಟಾಸ್ಕ್‌ಗಳನ್ನು ಗೆದ್ದ ಕಾರಣದಿಂದಾಗಿ ಮೂವರನ್ನು ನಾಮಿನೇಶನ್‌ನಿಂದ ಪಾರು ಮಾಡುವ ಅಧಿಕಾರ ಡ್ರೋನ್ ಪ್ರತಾಪ್‌ಗೆ ನೀಡಲಾಗಿತ್ತು. ಹೀಗಾಗಿ ಡ್ರೋನ್‌ ಕೂಡ ಈ ವಾರ ಪ್ರಮುಖ ಹೈಲೈಟ್‌. ಈ ವಾರ ಉತ್ತಮರಾಗಬೇಕು ಎಂಬುದು ಪ್ರತಾಪ್‌ ಫ್ಯಾನ್ಸ್‌ ಅಭಿಲಾಷೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version