Site icon Vistara News

Shobha Shetty: ʻಬಿಗ್‌ ಬಾಸ್‌ ತೆಲುಗುʼ ಖ್ಯಾತಿಯ ಶೋಭಾ ಶೆಟ್ಟಿ ಇದೀಗ ನಿರೂಪಕಿ!

Shobha Shetty Now anchor

ಬಿಗ್‌ ಬಾಸ್‌ ತೆಲುಗು ಖ್ಯಾತಿಯ ಶೋಭಾ ಶೆಟ್ಟಿ (Shobha Shetty) ಇದೀಗ ನಿರೂಪಕಿಯಾಗುತ್ತಿದ್ದಾರೆ. ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಶೋಭಾ ಶೆಟ್ಟಿ “ಕಾಫಿ ವಿತ್ ಶೋಭಾ ಶೆಟ್ಟಿ” ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ತೆಲುಗಿನ ಸುಮನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋವಿನ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ ಶೋಭಾ ಶೆಟ್ಟಿ.

ಇದನ್ನೂ ಓದಿ: Bigg Boss Telugu 7: ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ `ಸುಂದರಿʼಧಾರಾವಾಹಿ ಖ್ಯಾತಿಯ ಐಶ್ವರ್ಯಾ ಎಂಟ್ರಿ?

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

ಕಾಫಿ ವಿತ್ ಶೋಭಾ ಶೆಟ್ಟಿ’ ಕಾರ್ಯಕ್ರಮದ ಪ್ರೋಮೋವನ್ನು ತಮ್ಮ ವಾಡ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದ ಶೋಭಾ ಶೆಟ್ಟಿ ತಮ್ಮ ಹೊಸ ಪಯಣದ ಬಗ್ಗೆ ಹಂಚಿಕೊಂಡಿದ್ದರು. ನಟನೆಯ ಬಳಿಕ ಇದೀಗ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂತಸದ ವಿಚಾರವನ್ನು ಹೇಳಿಕೊಂಡಿದ್ದರು.

“ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಮೋನಿತಾ ಆಗಿ ನೋಡಿದ್ದೀರಿ. ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿಯಾಗಿ ಕಂಡಿದ್ದೀರಿ. ಮೊದಲ ಬಾರಿಗೆ ನಾನು ಒಂದು ಶೋವಿನ ಆ್ಯಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ತಮ್ಮ ಪ್ರಿಯಕರ ಯಶವಂತ್ ರೆಡ್ಡಿಯವರೊಂದಿಗೆ ನಿಶ್ಚಿತಾರ್ಥ ಶೋಭಾ ಶೆಟ್ಟಿ ಮಾಡಿಕೊಂಡಿದ್ದರು. ಇನ್ನು ತೆಲುಗು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್‌ ಬಾಸ್‌ಗೆ ಕಾಲಿಟ್ಟಿದ್ದರು.

Exit mobile version