Site icon Vistara News

BBK SEASON 10: ಮನೆಯಿಂದ ಹೊರಹೋಗುವಾಗ ಸಂಗೀತಾಗೆ ವಿಶೇಷ ಅಧಿಕಾರ ಕೊಟ್ಟ ಸಿರಿ!

Siri gave special powers to Sangeetha while leaving the house

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಈ ವಾರ ಸಿರಿ ಮನೆಯಿಂದ ಹೊರ ಬಂದಿದ್ದಾರೆ. ಈ ವಾರ ಸಿರಿ ಅವರು ಸೇರಿದಂತೆ, ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ಅವರು ನಾಮಿನೇಟ್ ಆಗಿದ್ದರು. ಮೈಕಲ್‌ ಹಾಗೂ ಸಿರಿ ಅವರ ಮಧ್ಯೆ ಭಾರಿ ಫೈಟ್‌ ಆಗಿದ್ದು, ಬಳಿಕ ಸಿರಿ ಅವರೇ ಮನೆಯಿಂದ ಔಟ್‌ ಆದರು.

ಅಂತಿಮವಾಗಿ ಸಿರಿ, ಮೈಕಲ್, ವರ್ತೂರು ಸಂತೋಷ್ ಮಾತ್ರ ಉಳಿದುಕೊಂಡರು. ಈ ಮೂವರಲ್ಲಿ ವರ್ತೂರು ಸಂತೋಷ್ ಅವರನ್ನು ಸೇಫ್ ಮಾಡಲಾಯಿತು. ಕೊನೆಗೆ ಸಿರಿ ಮತ್ತು ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಮೈಕಲ್ ಸೇಫ್ ಆದರೆ, ಸಿರಿ ಅವರು ಶೋನಿಂದ ಹೊರಗೆ ಬರಬೇಕಾಯ್ತು. ಸಿರಿ ಅವರ ಮೊದಲಿಂದಲೂ ಸೇಫ್‌ ಗೇಮ್‌ ಆಡಿಯೇ ಅವರು ಎಲಿಮಿನೇಟ್‌ ಆಗಿದ್ದಾರೆ ಎಂದು ಕೆಲವರ ಅಭಿಪ್ರಾಯ. ಮನರಂಜನೆ ನೀಡುವಲ್ಲಿ ಹಿಂದೆ ಉಳಿದವರು ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ಸಿರಿ ಅವರು ತಮ್ಮ ಅಭಿಪ್ರಾಯವನ್ನು ಓಪನ್ ಆಗಿ ಹೇಳುತ್ತಿರಲಿಲ್ಲ. ಸುದೀಪ್ ಅವರ ಗಮನಕ್ಕೂ ಈ ವಿಚಾರ ಬಂದಿದೆ. ಕಿಚ್ಚ ಕೂಡ ಈ ಬಗ್ಗೆ ಮಾತನಾಡಿದ್ದರು. ಬಿಗ್ ಬಾಸ್​ನಲ್ಲಿ ಸಿರಿ ಅವರು ಯಾವುದೇ ಗುಂಪಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸ್ವತಂತ್ರವಾಗಿ ಇದ್ದರು. ಅವರು ಎಂದಿಗೂ ಜಗಳ ಮಾಡಿದವರಲ್ಲ. ಟಾಸ್ಕ್​ ಬಂದಾಗ ಅಗ್ರೆಸ್ ಆಗಿ ಆಡಿದವರಲ್ಲ. ಇದೆಲ್ಲವೂ ಗಮನಿಸಿಯೇ ಜನ ವೋಟ್‌ ಹಾಕಿಲ್ಲ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿರಿ ಅವರು ಇರಬೇಕೇ? ಅಥವಾ ಮೈಕಲ್‌ ಎಂದು ಸುದೀಪ್‌ ಪ್ರಶ್ನೆ ಇಟ್ಟಾಗ ಬಹುತೇಕರು ಸಿರಿ ಅವರೇ ಇರಬೇಕೆಂದು ಹೇಳಿದ್ದಾರೆ. ಆದರೆ ಕಡಿಮೆ ವೋಟ್‌ ಪಡೆದ ಕಾರಣ ಸಿರಿ ಔಟ್‌ ಆದರು. ಬಿಗ್‌ ಬಾಸ್‌ ಸಿರಿ ಅವರಿಗೆ ವಿಶೇಷ ಅಧಿಕಾರವನ್ನೂ ನೀಡಿದರು. ಮುಂದಿನ ವಾರದ ಕ್ಯಾಪ್ಟನ್ಸಿ ಟಾಕ್ಕ್‌ ಆಡುವ ಸ್ಪರ್ಧಿಗೆ ವಿಶೇಷ ಅಧಿಕಾರವೊಂದು ಸಿಗಲಿದೆ, ಅದನ್ನು ಯಾರಿಗೆ ನೀಡುತ್ತೀರಿ ಎಂದು ಬಿಗ್ ಬಾಸ್ ಕೇಳಿದರು. ಅದಕ್ಕೆ ಸಿರಿ ಅವರು ಸಂಗೀತಾಗೆ ನೀಡಿದರು.

ಇದನ್ನೂ ಓದಿ: BBK SEASON 10: ʻಬಿಗ್‌ ಬಾಸ್‌ʼ ಫಿನಾಲೆ ಡೇಟ್‌ ಫಿಕ್ಸ್‌!

ಅಷ್ಟೇ ಅಲ್ಲದೇ ಶನಿವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಸಿರಿ ಅವರನ್ನು ಯಾವೊಬ್ಬ ಸ್ಪರ್ಧಿಗಳು ಟಾಪ್‌ 3ಯಲ್ಲಿ ಇರಿಸಿರಲಿಲ್ಲ. ಸಿರಿ ಅವರ ಬೇಸರಕ್ಕೂ ಕಾರಣವಾಗಿತ್ತು. ಇದೀಗ ಸಿರಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್‌ ವಿಚಾರ ಬಂತೆಂದರೆ ಅಷ್ಟಾಗಿ ಸಿರಿ ಅವರು ಹಿಂದೆ ಇರುತ್ತಿರಲಿಲ್ಲ. ನಮ್ರತಾ ಅವರು ಕೂಡ ಈ ಹಿಂದೆ ತುಕಾಲಿ ಜತೆ ಫೈನಲ್‌ವರೆಗೆ ಸಿರಿ ಬರುತ್ತಾರೇನೋ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೀಗ ಸಿರಿ ಅವರು ಆಟದ ಜರ್ನಿಯನ್ನು ಮುಗಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version