Site icon Vistara News

BBK Season 10: ಸ್ನೇಕ್‌ ಶ್ಯಾಮ್‌ ಮನೆಯಿಂದ ಹೊರಗೆ? ಈ ವಾರ ಸೇಫ್‌ ಆದ ಸ್ಪರ್ಧಿಗಳು ಯಾರು?

Snake Sham Bigg boss Kannada

ಬೆಂಗಳೂರು: ಅ.14ರಂದು (BBK Season 10: ) ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ಸೇಪ್‌ ಆಗಿರುವ ಮೂರು ಸ್ಪರ್ಧಿಗಳ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. ಸಮರ್ಥರು-ಅಸಮರ್ಥರ ಗುಂಪಿನಿಂದ ಇನ್ನೂ ನಾಮಿನೇಷನ್‌ ಪಟ್ಟಿಯಲ್ಲಿ ಇದ್ದವರು ಮೈಕಲ್, ಕಾರ್ತಿಕ್ ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಿಷ್ಟು ಸ್ಪರ್ಧಿಗಳು. ಇವರಲ್ಲಿ ಯಾರು ಮೊದಲು ಸೇಫ್‌ ಆಗಬೇಕು ಎಂಬ ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಿದರು. ಹಲವರು ಪ್ರತಾಪ್ ಸೇಫ್ ಆಗಬೇಕು ಎಂದು ಆಶಿಸಿದರು. ಆದರೆ ಜನರ ನಿರ್ಧಾರ ಬೇರೆಯೇ ಆಗಿತ್ತು. ಸೇವ್ ಆಗುತ್ತಿರುವ ಇನ್ನೊಬ್ಬ ಸ್ಪರ್ಧಿಯನ್ನೂ ಘೋಷಿಸಿದರು. ಅವರು ಸೇಫ್ ಮಾಡಿದ್ದು ಕಾರ್ತಿಕ್ ಅವರನ್ನು.“ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎಂಬುದು ಇಂದು ಗೊತ್ತಾಗಲಿದೆ ಅದಕ್ಕೂ ಮುಂಚೆ ಮೂಲಗಳ ಪ್ರಕಾರ ಈ ಸೀಸನ್‌ನ ಮೊದಲ ಎಲಿಮಿನೇಟ್‌ ಶ್ಯಾಮ್‌ ಆಗಿದ್ದಾರೆ ಎನ್ನುವುದು ಮಾಹಿತಿ. ಆದರೆ ಇದು ಧೃಡಪಟ್ಟ ಮಾಹಿತಿ ಅಲ್ಲ.

ಅಸಮರ್ಥರ ಗುಂಪಿಗೆ ಸ್ನೇಕ್‌ ಶ್ಯಾಮ್‌

ಶ್ಯಾಮ್‌ ಮೊದಲು ಇದದ್ದು ಸಮರ್ಥರ ಗುಂಪಿಗೆ. ನಿಯಮಗಳನ್ನು ಅಸಮರ್ಥರು ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮರ್ಥರಾಗಿತ್ತು. ಆದರೆ, ಸಮರ್ಥರು ತಮ್ಮ ಜವಾಬ್ದಾರಿ ಮರೆತು ಅಸಮರ್ಥರಂತೆ ವರ್ತಿಸಿರುವುದನ್ನು ‘ಬಿಗ್ ಬಾಸ್’ ಗಮನಿಸಿದ್ದರು. ಹೀಗಾಗಿ, ಸಮರ್ಥರಿಗೆ ‘ಬಿಗ್ ಬಾಸ್’ ಶಿಕ್ಷೆ ಕೊಟ್ಟಿದ್ದರು. ಒಬ್ಬರನ್ನು ಕ್ಯಾಪ್ಟನ್ ಸ್ನೇಹಿತ್ ‘ಅಸಮರ್ಥ’ ಎಂದು ಘೋಷಿಸಬೇಕಿತ್ತು. ಕ್ಯಾಪ್ಟನ್ ಸ್ನೇಹಿತ್ ಗೌಡ ಅವರು ಸ್ನೇಕ್ ಶ್ಯಾಮ್ ಹೆಸರನ್ನು ಹೇಳಿದ್ದರು. ಹೀಗಾಗಿ ಸ್ನೇಕ್ ಶ್ಯಾಮ್ ಅಸಮರ್ಥರ ಗುಂಪು ಸೇರಿದ್ದರು.

ಉತ್ಸಾಹಿಯಾಗಿರಲ್ಲ ಸ್ನೇಕ್‌ ಶ್ಯಾಮ್‌

ಒಂದುವಾರದಿಂದ ಮನೆಯ ಯಾವುದೇ ಟಾಸ್ಕ್‌ನಲ್ಲಿ ಸ್ನೇಕ್‌ ಶ್ಯಾಮ್‌ ಅಷ್ಟೊಂದು ಉತ್ಸಾಹಿಯಾಗಿರಲಿಲ್ಲ. ಅಷ್ಟೇ ಅಲ್ಲದೇ ಮನೆಯಲ್ಲಿ ಕೂಡ ಈ ಹಿಂದೆ ಕೆಲವು ಸ್ಪರ್ಧಿಗಳು ಸ್ನೇಕ್‌ ಶ್ಯಾಮ್‌ ಅವರಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಅವರನ್ನು ನಾಮಿನೇಟ್‌ ಮಾಡುವುದಾಗಿಯೂ ಹೇಳಿಕೊಂಡಿದ್ದರು. ವಯಸ್ಸಿನ ಕಾರಣದಿಂದಾಗಿ ಟಾಸ್ಕ್ ಮಾಡುವುದು ಕೂಡ ಅವರಿಗೆ ಕಷ್ಟದ ಕೆಲಸವೇ ಆದರೆ ಶ್ಯಾಮ್‌ ಮಾತ್ರ ತಾನು ಪ್ರಾಣಿಗಳನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಕಾರಣ ಕೊಟ್ಟಿದ್ದರು.

ಇದನ್ನೂ ಓದಿ: BBK Season 10: ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ‘ಡ್ರೋನ್‌’ ಬೆಂಬಲಕ್ಕೆ ನಿಂತ ಕಿಚ್ಚ!

ಇದನ್ನೂ ಓದಿ: BBK Season 10: ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ‘ಡ್ರೋನ್‌’ ಬೆಂಬಲಕ್ಕೆ ನಿಂತ ಕಿಚ್ಚ!

ಯಾರು ಈ ಸ್ನೇಕ್‌ ಶ್ಯಾಮ್‌

ಸ್ನೇಕ್‌ ಶ್ಯಾಮ್‌ ಅವರಿಗೆ ಪ್ರಾಣಿಗಳೇ ಸರ್ವಸ್ವ. ಸ್ನೇಕ್‌ ಶ್ಯಾಮ್‌ ಚಿಕ್ಕಂದಿನಿಂದಲೇ ಪ್ರಾಣಿಪ್ರಿಯರಾಗಿದ್ದರಂತೆ. ವಯಸ್ಸಾದವರನ್ನೂ ಆರೈಕೆ ಮಾಡುವುದು ಅವರ ವಿಶೇಷ ಗುಣ. ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಶ್ಯಾಂ ದಶಕಗಳಿಂದ ಇದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ. 1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ನೇಕ್ ಶ್ಯಾಮ್ ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಇದುವರೆಗೆ ಇವರು ಹಿಡಿದ ಹಾವುಗಳ ಸಂಖ್ಯೆ ಸುಮಾರು 86 ಸಾವಿರದಷ್ಟಿದೆ. ಇವರು ಕೇವಲ ಹಾವುಗಳನ್ನು ಮಾತ್ರ ಹಿಡಿಯುವುದಲ್ಲದೆ, ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತ ಬಂದಿದ್ದಾರೆ. ಜನರನ್ನು ಮಾತನಾಡಿಸುತ್ತಾ, ರೇಗಿಸುತ್ತಾ ಹಾವು ಹಿಡಿಯುವುದು ಅವರ ಹವ್ಯಾಸ. ಈಗಾಗಲೇ ಇವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ.

Exit mobile version