Site icon Vistara News

BBK Season 10: ʻಬಿಗ್‌ ಬಾಸ್‌ʼ ಮನೆಗೆ ಸ್ನೇಕ್ ಶ್ಯಾಮ್ ಹೋಗೋದು ಫಿಕ್ಸ್‌?

Snake Shyam

ಬೆಂಗಳೂರು: ಇದೇ ಅ.8ರಿಂದ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಕಲರ್ಸ್‌ ಕನ್ನಡದಲ್ಲಿ ಶುರುವಾಗಲಿದೆ. ಇನ್ನು ಕೇವಲ ಒಂದೇ ದಿನ ಬಾಕಿ ಉಳಿದಿದೆ. ಭಾನುವಾರ (ಅಕ್ಟೋಬರ್ 8) ಸಂಜೆ 6 ಗಂಟೆಗೆ ಬಿಗ್ ಬಾಸ್ ಲಾಂಚ್ ಆಗಲಿದೆ. ಅ.8ರಂದೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ.‘777 ಚಾರ್ಲಿ’ ಸಿನಿಮಾದ ಚಾರ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ. ಇದೀಗ ಮೂಲಗಳ ಪ್ರಕಾರ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ಆದರೆ ಈ ಬಗ್ಗೆ ಸ್ನೇಕ್ ಶ್ಯಾಮ್ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಈ ಬಾರಿ 16 ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಸ್ನೇಕ್ ಶ್ಯಾಮ್ 86 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಶ್ಯಾಮ್ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ.

1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ನೇಕ್ ಶ್ಯಾಮ್ ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಕೇವಲ ಹಾವುಗಳನ್ನು ಮಾತ್ರ ಹಿಡಿಯುವುದಲ್ಲದೆ, ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತ ಬಂದಿದ್ದಾರೆ. ಈಗಾಗಲೇ ಇವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ.

ಇದನ್ನೂ ಓದಿ: Snake News : ಮತ್ತೆ ಮಂಚಕ್ಕೆ ಬಂದ ಬುಸ್‌ ಬುಸ್‌ ನಾಗಪ್ಪ; ಯುವಕನ ಪಕ್ಕ ತಣ್ಣಗೆ ಮಲಗಿದ್ದ!

ಒಳ್ಳೆ ಉಡುಗೊರೆಗಳು ಸಿಗುತ್ತವೆ

ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯೂ ನಡೆದಿದ್ದು, ವಿಶೇಷತೆಗಳನ್ನೆಲ್ಲ ಹೇಳಿ ಆಗಿದೆ. ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.

Exit mobile version