ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಎಂಟನೇ ವಾರ ಸ್ನೇಹಿತ್ ಎಲಿಮಿನೇಟ್ ಆಗಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಕಳೆದ ಬಾರಿ ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ಬಾರಿ ಸ್ನೇಹಿತ್ ಕೂಡ ಕ್ಯಾಪ್ಟನ್ ಆಗಿದ್ದು ಎಲಿಮಿನೇಷನ್ ಆಗುತ್ತಾರಾ ಎಂಬ ಚರ್ಚೆಗಳು ಶುರುವಾಗಿವೆ. ಇದೀಗ ನಮ್ರತಾ ಬಗ್ಗೆ ಸ್ನೇಹಿತ್ ಇರುವ ಫಿಲೀಂಗ್ಸ್ ಬಗ್ಗೆ ಚರ್ಚೆ ಮಾಡಿದ್ದಾರೆ. ಫೀಲಿಂಗ್ ಯಾವ ರೀತಿಯದ್ದು ಎಂದು ಸ್ನೇಹಿತ್ ಗೌಡ (Snehit Gowda) ಅವರು ವಿನಯ್ ಗೌಡ ಬಳಿ ವಿವರಿಸಿದ್ದಾರೆ.
ರಾತ್ರಿ ಎಲ್ಲರೂ ಮಲಗಿರುವಾಗ ಸ್ನೇಹಿತ್ ಅವರು ನಮ್ರತಾ ಫೋಟೊ ಪಕ್ಕ ತಮ್ಮ ಫೋಟೊವನ್ನು ಇಟ್ಟರು. ಇದಾದ ಬಳಿಕ ವಿನಯ್ ಅವರ ಬಳಿ ನಮ್ರತಾ ಬಗ್ಗೆ ತಮಗಿರು ಫೀಲಿಂಗ್ ಬಗ್ಗೆ ಹೇಳಿಕೊಂಡರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕೌಟ್ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ’ ಎಂದು ಸ್ನೇಹಿತ್ ಹೇಳಿದ್ದಾರೆ.
ಕಳೆದ ವಾರ ಪರೋಕ್ಷವಾಗಿ ನಮ್ರತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದರು ಸ್ನೇಹಿತ್. ನಮ್ರತಾ ಗೌಡ ಸಮಯ ಕೊಡಿ ಅಂದಾಗಿತ್ತು. ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದರು. ಈ ಮುಂಚೆಯೇ ನಮ್ರತಾ ಅವರು ಸ್ನೇಹಿತ್‌ಗೆ ʻʻಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ಹೊರಹಾಕಿದ್ದರು.
ಇದನ್ನೂ ಓದಿ: BBK SEASON 10: ಪ್ರತಾಪ್ ಟೀಂ ಬಂದಿದ್ದಕ್ಕೆ ʻಕಿಚ್ಚನ ಚಪ್ಪಾಳೆʼ ಸಿಕ್ಕಿದೆ ಎಂದ ನಮ್ರತಾ!
ʻನಾವು ಒಬ್ಬರಿಗೊಬ್ಬರು ಹರ್ಟ್ ಮಾಡಿಕೊಳ್ಳುತ್ತಿದ್ದೇವೆ. ಕಾರ್ತಿಕ್ ಹಾಗೂ ಸಂಗೀತಾ ಸಂಬಂಧದ ರೀತಿ ಟಾಕ್ಸಿಕ್ ಆಗುವ ಮೊದಲು ನಾವು ಇದನ್ನು ಸ್ಟಾಪ್ ಮಾಡಬೇಕು. ನಿಮಗೆ ನಿಜಕ್ಕೂ ಏನು ಬೇಕು’ ಎಂದು ನಮ್ರತಾ ಗೌಡ ಪ್ರಶ್ನೆ ಮಾಡಿದ್ದರು. ʻʻನೀವು ನನ್ನನ್ನು ಲೈಕ್ ಮಾಡ್ತೀರಿ ಅನ್ನೋದು ಗೊತ್ತು. ನನಗೆ ಓಪನ್ ಆಗೋಕೆ ಸಾಕಷ್ಟು ಸಮಯ ಬೇಕು. ಒಂದು ತಿಂಗಳಲ್ಲಿ ಇದೆಲ್ಲ ಆಗಬೇಕು ಅಂದರೆ ಆಗಲ್ಲ. ನಾನು ಅಮ್ಮನ ಮಿಸ್ ಮಾಡುಕೊಳ್ಳುತ್ತಿದ್ದೇನೆ. ನನಗೆ ಎಲ್ಲರೂ ಫೇಕ್ ಎನಿಸುತ್ತಾರೆ. ನಾನು ಯಾರನ್ನೂ ನಂಬಲ್ಲ’ ಎಂದು ನೇರವಾಗಿ ಹೇಳಿದ್ದರು ನಮ್ರತಾ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ