Site icon Vistara News

BBK SEASON 10: ನಮ್ರತಾ ಹೇಳಿದ ತಕ್ಷಣ ನಿರ್ಧಾರವೇ ಬದಲಾಯ್ತು; ಸ್ನೇಹಿತ್‌ಗೆ ಛೀಮಾರಿ ಹಾಕಿದ ಸಂಗೀತಾ, ತನಿಷಾ!

Namratha and snehith

ಬೆಂಗಳೂರು: ಬಿಗ್‌ ಬಾಸ್‌ ಸಿಸನ್‌ 10ರಲ್ಲಿ (BBK SEASON 10) ಸ್ನೇಹಿತ್‌ ಬಯಾಸ್ಡ್‌ ಆಗಿ ಆಟಗಳನ್ನು ಆಡುತ್ತಿರುವುದು ಹೋಸತೇನಲ್ಲ. ನಿನ್ನೆಯ ಸಂಚಿಕೆಯಲ್ಲಿ ಕೂಡ ಸ್ನೇಹಿತ್‌ ಅವರು ನಮ್ರತಾ ಮಾತಿಗೆ ತಲೆ ಅಲ್ಲಾಡಿಸಿದ್ದಾರೆ. ಸಂಗೀತಾ ಹಾಗೂ ತನಿಷಾ ಈ ವಿಚಾರಕ್ಕೆ ರೊಚ್ಚಿಗೆದ್ದಿದ್ದರು. ʻಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನ ‘ಬಿಗ್ ಬಾಸ್‌’ ಘೋಷಿಸಿದರು. ಇದರಲ್ಲಿ ಕುರ್ಚಿ ಮೇಲೆ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ವರ್ತೂರ್‌ ಮೊದಲಿಗೆ ಎದಿದ್ದರು. ನಮ್ರತಾ ಎದ್ದಿಲ್ಲ ಅಂದ ತಕ್ಷಣ ಸ್ನೇಹಿತ್‌ ಅವರು ನಮ್ರತಾ ಪರವಾಗಿ ನಿಂತರು, ಇನ್ನು ಸ್ವತಃ ವರ್ತೂರ್‌ ಅವರು ಪ್ರತಾಪ್‌ ಮುಂದೆ ತಾವು ಎದ್ದಿರುವುದಾಗಿ ಹೇಳಿಕೊಂಡಿದ್ದರು.

ನಮ್ರತಾ ಅವರು ಹೇಳುತ್ತಿದ್ದಂತೆ ವರ್ತೂರ್‌ ಅವರು ಔಟ್‌ ಆಗಿಲ್ಲ ಎಂಬ ಸ್ನೇಹಿತ್‌ ಅವರ ನಿರ್ಧಾರಕ್ಕೆ ಸಂಗೀತಾ ಹಾಗೂ ತನಿಷಾ ಕಿರುಚಾಡಿದ್ದಾರೆ. ಸ್ವಂತ ನಿರ್ಧಾರ ಸ್ನೇಹಿತ್‌ಗೆ ತೆಗೆದುಕೊಳ್ಳಲು ಬರುವುದಲ್ಲಿವೇ ಎಂದು ಪ್ರೇಕ್ಷಕರು ಪ್ರಶ್ನೆ ಇಟ್ಟರು.

ಬಾವುಟ ಟಾಸ್ಕ್‌ನಲ್ಲಿಯೂ ಕೂಡ ಸ್ನೇಹಿತ್‌ ಅಂದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ‘ವಿಜಯ ಪತಾಕೆ’ ಟಾಸ್ಕ್‌ನಲ್ಲಿ ಕಾರ್ತಿಕ್ – ವಿನಯ್, ಸಂಗೀತಾ – ನಮ್ರತಾ ಮಧ್ಯೆ ಫಿಸಿಕಲ್ ಅಟ್ಯಾಕ್‌ ನಡೆಯಿತು. ಕ್ಯಾಪ್ಟನ್ ಆಗಿ, ಉಸ್ತುವಾರಿಯಾಗಿ ಸ್ನೇಹಿತ್‌ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳಲಿಲ್ಲ. ಬಳಿಕ ಬಿಗ್‌ ಬಾಸ್‌ ಮಧ್ಯ ಪ್ರವೇಶಿಸಿ ಆಟವನ್ನು ನಿಲ್ಲಿಸಿದರು. ಈ ಟಾಸ್ಕ್‌ ಪೂರ್ಣಗೊಳ್ಳದೆ ಇರಲು ಕಾರಣವೇನು?’’ ಎಂದು ‘ಬಿಗ್ ಬಾಸ್‌’ ಪ್ರಶ್ನಿಸಿದರು. ‘’ತುಂಬಾ ಫಿಸಿಕಲ್ ಆಯ್ತು. ಯಾವಾಗ ಲೈನ್‌ ಡ್ರಾ ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ’’ ಎಂದರು ಸ್ನೇಹಿತ್. ‘’ನಡೆದಿರುವ ಘಟನೆ ಬಗ್ಗೆ ನಿಮ್ಮ ನಿಲುವು ಏನು?’’ ಎಂದು ‘ಬಿಗ್ ಬಾಸ್‌’ ಕೇಳಿದಾಗ, ‘’ನನ್ನ ವೈಯಕ್ತಿಕ ನಿಲುವು ಏನು ಅಂದ್ರೆ ಈ ಆಟವನ್ನ ರದ್ದು ಮಾಡಬೇಕು. ಇದನ್ನ ಮುಂದುವರೆಸೋಕೆ ಆಗಲ್ಲ’’ ಅಂತ ಸ್ನೇಹಿತ್ ಹೇಳಿದರು.

ಎರಡೂ ಗುಂಪುಗಳ ಬಳಿ ಇದ್ದ ಬಾವುಟಗಳನ್ನ ಸ್ನೇಹಿತ್ ಎಣಿಸಿದರು. ವರ್ತೂರು ಸಂತೋಷ್‌ ತಂಡದಲ್ಲಿ 31, ಸಂಗೀತಾ ತಂಡದಲ್ಲಿ 33 ಬಾವುಟಗಳಿದ್ದವು. ಇದರ ಆಧಾರದ ಮೇಲೆ ಸಂಗೀತಾ ತಂಡ ಗೆದ್ದಿದೆ ಎಂದು ಸ್ನೇಹಿತ್ ಘೋಷಿಸಿದರು.

ಇದನ್ನೂ ಓದಿ: BBK SEASON 10: ಕೈ ಮುಗಿದು ಕಣ್ಣೀರಿಟ್ಟ ಸಂಗೀತಾ; ಸೋತು ಶರಣಾದರಾ ಗಂಧರ್ವರು?

ನನಗೆ ಹೆಮ್ಮೆ ಇದೆ. ನಾವು ನಾವಾಗಿರೋಣ. ನಮ್ಮತನವನ್ನ ಬಿಟ್ಟುಕೊಡೋದು ಬೇಡ. ಎಂದು ಸಂಗೀತಾ ಅವರ ತಮ್ಮ ತಂಡಕ್ಕೆ ದೃಷ್ಟಿ ತೆಗೆದರು. ಇನ್ನು ಮೈಕಲ್‌ ತಮ್ಮ ತಂಡದಲ್ಲಿ ʻʻನನ್ನ ಬಳಿ ಸ್ಟ್ರಾಟಜಿ ತುಂಬ ಇತ್ತು. ನೀವು ಕೇಳಲು ರೆಡಿ ಇರಲಿಲ್ಲʼʼ ಎಂದು ಮೈಕಲ್ ಬೇಸರ ವ್ಯಕ್ತಪಡಿಸಿದರು. ಈ ವೇಳೆ, ‘’ಅದು ನನ್ನ ತಪ್ಪು’’ ಎಂದು ವಿನಯ್ ಒಪ್ಪಿಕೊಂಡರು.

ಸ್ನೇಹಿತ್‌ ಕೂಡ ತಮ್ಮ ಉಸ್ತುವಾರಿಯಲ್ಲಿ ಅಧಿಕಾರವನ್ನು ಬಳಿಸಿಕೊಂಡು ಸಭೆಯನ್ನು ಕರೆದರು. ನಿನ್ನೆಯ ಟಾಸ್ಕ್‌ ಆದ್ಮೇಲೆ ಒಂದಷ್ಟು ಗೈಡ್‌ಲೈನ್ಸ್ ಸೆಟ್ ಮಾಡಬೇಕು ಅಂತಿದ್ದೀನಿ. ಪರ್ಸನಲ್ ಐಟಮ್ಸ್ ಮುಟ್ಟುವಂತಿಲ್ಲ. ಪರ್ಸನಲ್ ಅಟ್ಯಾಕ್ ಮಾಡುವಂತಿಲ್ಲ. ಮಾನವೀಯತೆ ಮೀರಿದರೆ ನಾನು ನಿರ್ಧಾರ ತೆಗೆದುಕೊಳ್ತೀನಿ’’ ಎಂದು ಸ್ನೇಹಿತ್‌ ಹೇಳಿದರು. ಇದನ್ನು ಸಂಗೀತಾ ಟೀಂ ವಿರೋಧಿಸಿದರು. ನಮ್ಮ ಪರ ಯಾವಾಗ ಮಾತಾಡ್ತೀರಾ’’ ಎಂದು ಸಂಗೀತಾ, ತನಿಷಾ ಪ್ರಶ್ನಿಸಿದರು. ‘’ನಾವು ನಿಮ್ಮ ಮಾತು ಕೇಳಲ್ಲ’’ ಎಂದು ಸ್ನೇಹಿತ್‌ಗೆ ರಾಕ್ಷಸರು ಹೇಳಿದರು.

Exit mobile version