ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10) ರಕ್ಷಕ್ ಮನೆಯಿಂದ ಹೊರ ಹೋಗಿದ್ದಾರೆ. ವಿನಯ್ ಕೂಡ ಕೊನೆಯ ಹಂತದವರೆಗೆ ಇದ್ದು, ವಿನಯ್ ಗೌಡ ಅವರ ಪರಿಸ್ಥಿತಿ ಇನ್ನೇನು ಹೊರಗೆ ಹೋಗಿಯೇ ಬಿಟ್ಟರು ಎಂಬಂತಿತ್ತು. ಕೊನೆಯ ಕ್ಷಣದವರೆಗೂ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿ ಬಿಗ್ ಬಾಸ್ ಸಖತ್ ಟೆನ್ಷನ್ ನೀಡಿದರು. ಇದೆಲ್ಲ ಆದ ಬಳಿಕ ಮನೆಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತಿವೆ. ಸ್ನೇಹಿತ್ ಇದಕ್ಕಿದ್ದಂತೆ ರೆಬೆಲ್ ಆಗಿದ್ದಾರೆ.
ಮನೆಯಲ್ಲಿ ಬಿಗ್ ಬಾಸ್ ರೂಲ್ಸ್ ಫಾಲೋ ಮಾಡುವುದು ಸ್ಪರ್ಧಿಗಳ ಕರ್ತವ್ಯ. ಲೈಟ್ ಆಫ್ ಆದ ನಂತರವೇ ಮಲಗಬೇಕು. ಆದರೆ ಲೈಟ್ ಆಫ್ ಆದ ಬಳಿಕ ಮಲಗಲೇಬೇಕು ಎಂಬ ರೂಲ್ಸ್ ಇಲ್ಲ. ಹೀಗಾಗಿ, ಲೈಟ್ ಆಫ್ ಆದ ಬಳಿಕವೂ ಕೆಲವರು ಎಚ್ಚರ ಇರುತ್ತಾರೆ. ಇದೇ ವಿಚಾರ ಅಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಸ್ನೇಹಿತ್ ಅವರು ತನಿಷಾ ಅವರಿಗೆ ಧ್ವನಿ ಎತ್ತಿʻʻ ನೀವುವೊಂದು ಕ್ಲಾಸ್ನಲ್ಲಿ ಮಾನಿಟರ್ ಇರುತ್ತಾರಲ್ಲ. ಆ ಪೊಸಿಶನ್ಅನ್ನು ನಿಮಗೆ ನೀವು ಕೊಟ್ಟುಕೊಂಡಿದ್ದೀರಾ. ಬಾಗಿಲು ಹಾಕಲೇ ಬೇಕು. ಇದೇ ಸಮಯಕ್ಕೆ ಮಲಗಬೇಕು. ಎಂದು ರೂಲ್ಸ್ ಮಾಡಿದ್ದೀರಾ? ರೂಲ್ಸ್ ಮಾಡೋಕೆ ನೀವು ಬಿಗ್ ಬಾಸ್ ಅಲ್ಲ’ ಎಂದಿದ್ದಾರೆ ಸ್ನೇಹಿತ್. . ‘ನಾವಿಲ್ಲಿ ರೂಲ್ಸ್ ಮಾಡುತ್ತಿಲ್ಲ’ ಎಂದಿದ್ದಾರೆ ಸಂಗೀತಾ ಹಾಗೂ ತನಿಷಾ. ‘ನಾನು ಯಾವುದೂ ಬಿಸ್ನೆಸ್ ನಡೆಸುತ್ತಿಲ್ಲ. ನಾವು ನಿಮ್ಮ ಉದ್ಯೋಗಿ ಅಲ್ಲ’ ಎಂದಿದ್ದಾರೆ ಸ್ನೇಹಿತ್. ಇವತ್ತಿನ ಸಂಚಿಕೆಯಲ್ಲಿ ಈ ಕಾರಣಗಳ ಬಗ್ಗೆ ಗೊತ್ತಾಗಲಿದೆ.
ಇದನ್ನೂ ಓದಿ; BBK Season 10: ಮುಂದಿನ ವಾರ ನನ್ನ ಜಾಗದಲ್ಲಿ ಪ್ರತಾಪ್ ಇರ್ತಾನೆ ಎಂದ ಬುಲೆಟ್ ರಕ್ಷಕ್!
ವಿನಯ್ಗೆ ಈ ಗತಿ ಬಂತಾ?ʼ
ವಿಶೇಷ ಅಂದರೆ ಪ್ರಬಲ ಸ್ಪರ್ಧಿಯಾಗಿರುವ ವಿನಯ್ ಕೊನೆಯ ಹಂತದ ವರೆಗೆ ಸೇಫ್ ಆಗದೆ ಇರುವುದು ಮನೆಮಂದಿಗೆ ಶಾಕ್ ಆಗಿದೆ. ರಕ್ಷಕ್ ಹಾಗೂ ವಿನಯ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ ಎಂದು ಸುದೀಪ್ ಅನೌನ್ಸ್ ಮಾಡಿದ್ದರು. ಅದೇ ರೀತಿ ವಿನಯ್ ಅವರು ಇರುವ ಈ ಹಂತವನ್ನು ನೋಡಲು ಯಾರಿಗೆ ಖುಷಿಯಾಗುತ್ತಿದೆ? ಎಂದು ಸುದೀಪ್ ಪ್ರಶ್ನೆ ಇಟ್ಟಾಗ, ಸಂಗೀತಾ ಅವರು ʼʻನನಗೆ ಖುಷಿಯಾಗಿದೆʼʼ ಎಂದು ಉತ್ತರ ನೀಡಿದರು.
ಬಿಗ್ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.