Site icon Vistara News

BBK Season 10: ಕೆಲವು ಸಮರ್ಥರಿಗೆ ‘ನಾಲಾಯಕ್’ ಪಟ್ಟ; ಬಿಗ್‌ ಬಾಸ್‌ ಸೀಸನ್‌ 10ರ ಮೊದಲ ಕ್ಯಾಪ್ಟನ್‌ ಇವರು!

Snehith Gowda tukali santosh Namratha Gowda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೊದಲ ಕ್ಯಾಪ್ಟನ್‌ ಆಯ್ಕೆ ಟಾಸ್ಕ್‌ ನಡೆದಿದೆ. ಈ ಬಾರಿ ಹಲವು ಟ್ವಿಸ್ಟ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದಾರೆ. ಇವೆಲ್ಲದರ ಟಾಸ್ಕ್‌ ನಡುವೆ ಸ್ನೇಹಿತ್‌ ಮೊದಲ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದರು, ಅಷ್ಟೇ ಅಲ್ಲದೇ ಕಲೆವು ನಿರ್ಣಯಗಳನ್ನು ತೆಗೆದುಕೊಳ್ಳಲು ಬಿಗ್‌ ಬಾಸ್‌ ಸ್ಬೇಹಿತ್‌ ಅವರಿಗೆ ಆದೇಶ ನೀಡಿದರು.

ಈ ವಾರ ಕ್ಯಾಪ್ಟನ್‌ ಆಗುವ ಸದಸ್ಯ ಮುಂದಿನ ವಾರ ಪಾರಾಗುತ್ತಾರೆ. ಇಲ್ಲಿಯವರೆಗೆ ಅಸಮರ್ಥರಿಗೆ ಇಲ್ಲಿಯವರೆಗೆ ಆಗು ಹೋಗುಗಳಿಗೆ ಮನೆಯಲ್ಲಿ ಭಾಗವಹಿಸುವ ಅವಕಾಶ ಇರಲಿಲ್ಲ. ಅಸಮರ್ಥರಿಗೆ ಕೂಡ ಇದರಲ್ಲಿ ಭಾಗಿಯಾಗಲು ಅವಕಾಶ ಬಿಗ್‌ ಬಾಸ್‌ ನೀಡಿದ್ದು ಕ್ಯಾಪ್ಟನ್ಸಿ ಅಲ್ಲಿ ಏಳು ಜನ ಪೈಕಿಯಲ್ಲಿ ಒಬ್ಬರನ್ನು ಅಮರ್ಥರು ಹೊರಗೆ ಇಡಬಹುದು. ಪ್ರತಿ ಅಸಮರ್ಥರು, ತಮಗೆ ಯಾರು ನಾಯಕನಾಗಲು ಇಷ್ಟವಿಲ್ಲವೋ ಅವರ ಕೊರಳಿಗೆ ‘ನಾಲಾಯಕ್’ ಎಂಬ ಪಟ್ಟಿ ಹಾಕುವಂತೆ ಸೂಚಿಸಿದರು ಬಿಗ್​ಬಾಸ್. ನಿಯಮದಂತೆ ಎರಡು ಫಲಕ ಹಾಕಿಸಿಕೊಂಡ ಈಶಾನಿ ನಾಯಕ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು.

ಹಳ್ಳಿಕಾರ್ ಸಂತೋಶ್ ಅವರು ಈಶಾನಿ ಕೊರಳಿಗೆ, ತನಿಷಾ ಅವರು ನಮ್ರತಾರ ಕೊರಳಿಗೆ, ಡ್ರೋನ್ ಪ್ರತಾಪ್ ಅವರು ಸ್ನೇಹಿತ್ ಕೊರಳಿಗೆ, ಸಂಗೀತ ಅವರು ವಿನಯ್ ಕೊರಳಿಗೆ, ರಕ್ಷಕ್ ಅವರು ಈಶಾನಿ ಕೊರಳಿಗೆ, ಕಾರ್ತಿಕ್ ಅವರು ತುಕಾಲಿ ಸಂತೋಶ್ ಕೊರಳಿಗೆ ʻನಾಲಾಯಕ್ʼ ಫಲಕ ಹಾಕಿದರು. ನಿಯಮದಂತೆ ಎರಡು ಫಲಕ ಹಾಕಿಸಿಕೊಂಡ ಈಶಾನಿ ನಾಯಕ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು. ಈಶಾನಿಯನ್ನು ಹೊರತುಪಡಿಸಿ ಏಳು ಮಂದಿ ಬಬಲ್‌​ ಗಮ್ ಜಗಿಯುತ್ತಾ ಸಣ್ಣನೆಯ ಹಲಗೆಯ ಮೇಲೆ ನಡೆಯುವ ಟಾಸ್ಕ್​ ಒಂದನ್ನು ಆಡಿದರು. ಅದರಲ್ಲಿ ಮೊದಲ ಮೂವರಾಗಿ ಟಾಸ್ಕ್ ಮುಗಿಸಿದ್ದು ನಮ್ರತಾ ಗೌಡ, ಸ್ನೇಹಿತ್ ಹಾಗೂ ತುಕಾಲಿ ಸಂತೋಶ್.

ಇದನ್ನೂ ಓದಿ: BBK Season 10: ʻಡ್ರೋನ್‌ ಪ್ರತಾಪ್‌ʼ ಡೋಂಗಿ ಅಂದ್ರು ಸ್ಪರ್ಧಿಗಳು; ತಾರಕಕ್ಕೇರಿದ ಜಗಳ!

ಇದಾದ ಬಳಿಕ ಬಿಗ್‌ ಬಾಸ್‌ ಸ್ನೇಹಿತ್‌, ತುಕಾಲಿ ಸಂತೋಷ್‌ ಹಾಗೂ ನಮ್ರತಾ ಅವರಿಗೆ ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿತ್ತು. ಇದರ ಅನುಸಾರ ಮೂರು ಗಡಿಯಾರದಂತಹ ಆಕೃತಿಯಲ್ಲಿರುವ ಹಿಡಿಕೆಯನ್ನು ಹಿಡಿದು ಸಂಭಾಳಿಸುತ್ತ ನಿಲ್ಲಬೇಕು. ಕೊನೆಯವೆರೆಗೆ ಯಾರು ನಿಲ್ಲೋತ್ತಾರೋ ಅವರು ಕ್ಯಾಪ್ಟನ್‌ ಆಗುತ್ತಾರೆ. ಬಹಳ ಹೊತ್ತಿನ ಬಳಿಕ ಸಂತೋಷ್‌ ಆಟದಲ್ಲಿ ಸೋತರು. ಇದಾದ ಬಳಿಕ ನಮ್ರತಾ ಕೂಡ ಸೋತರು. ಸ್ನೇಹಿತ್‌ ಆ ಆಟದಲ್ಲಿ ಗೆದ್ದು ಕ್ಯಾಪ್ಟನ್‌ ಪಟ್ಟ ಪಡೆದುಕೊಂಡರು.

ಆಟ ಇಷ್ಟಕ್ಕೆ ಮುಗಿದಿಲ್ಲ

ಕೆಲವು ನಿರ್ಣಯವನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಬಿಗ್‌ ಬಾಸ್‌ ಸ್ನೇಹಿತ್‌ ಅವರಿಗೆ ನೀಡಿದ್ದಾರೆ. ಅಸಮರ್ಥರಿಗಾಗಿ ಬಿಗ್‌ ಬಾಸ್‌ ಹಲವು ನಿಯಮಗಳನ್ನು ಮಾಡಿದೆ. ಈ ನಿಯಮಗಳನ್ನು ಸಮರ್ಥರು ಎನಿಸಿಕೊಂಡವರು ಪಾಲನೆಯಾಗುವಂತೆ ನೋಡಿಕೊಳ್ಳಬೇಕಿತ್ತು. ಅಸಮರ್ಥರು ಆ ನಿಯಮ ಮೀರಿದ್ದರಿಂದ, ಈಗ ಸಮರ್ಥರಲ್ಲಿ ಒಬ್ಬರನ್ನು ಅಸಮರ್ಥರೆಂದು ಗುರುತಿಸಿ ಶಿಕ್ಷೆ ನೀಡುವ ಕಾರ್ಯವನ್ನು ನಾಯಕ ಸ್ನೇಹಿತ್ ಮಾಡಬೇಕಿದೆ. ಇಂದಿನ ಸಂಚಿಕೆಯಲ್ಲಿ ಸ್ನೇಹಿತ್‌ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ತಿಳಿಯಲಿದೆ.

ಇದನ್ನೂ ಓದಿ: BBK Season 10: ನಾಮಿನೇಶನ್‌ ಬಳಿಕ ಸ್ಪರ್ಧಿಗಳ ನಡುವೆ ಟೀಕೆಗಳ ಸುರಿಮಳೆ! ಗಳಗಳನೆ ಅತ್ತ ತನಿಷಾ!

ಈ ವಾರ ನಾಮಿನೇಟ್ ಆದವರು ಯಾರು?

ಆರು ಅಸಮರ್ಥರಿಗೆ ನಾಮಿನೇಶನ್‌ ಮಾಡುವ ಅಧಿಕಾರ ಬಿಗ್‌ ಬಾಸ್‌ ನೀಡಿರಲಿಲ್ಲ. ಹನ್ನೊಂದು ಸಮರ್ಥರಷ್ಟೇ ನಾಮಿನೇಶನ್‌ ಮಾಡಬೇಕಿತ್ತು. ಅಸಮರ್ಥರಲ್ಲಿ ಅತಿ ಹೆಚ್ಚು ಬಾರಿ ನಾಮಿನೇಟ್‌ ಆದವರು, ಡ್ರೋನ್‌ ಪ್ರತಾಪ್‌, ಸಂತೋಷ್‌ , ಕಾರ್ತಿಕ್‌ ಗೌಡ, ತನಿಷಾ ಕುಪ್ಪುಂಡ. ನಾಮಿನೇಶನ್‌ನ ಎರಡನೇ ಹಂತದ ಸಮರ್ಥರ ವಿಭಾಗದಲ್ಲಿ ಸ್ನೇಕ್‌ ಶ್ಯಾಮ್‌, ಮೈಕಲ್‌, ನೀತು, ಸಿರಿ ನಾಮಿನೇಟ್ ಆದರು.ಬಿಗ್‌ ಬಾಸ್‌ ಜಿಯೋ ಸಿನಿಮಾಸ್​ ಹಾಗೂ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Exit mobile version