Site icon Vistara News

BBK SEASON 10: ಬೇಡದೇ ಇರುವ ವಿಷ್ಯದಲ್ಲಿ ಮೂಗು ತೂರಿಸ್ತಾರೆ ಎಂದ ಸ್ನೇಹಿತ್‌; ಬಿಕ್ಕಿ ಬಿಕ್ಕಿ ಅತ್ತ ಭಾಗ್ಯಶ್ರೀ!

snehith gowda war about kalape Bhagyashree bigg boss kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಸ್ಪರ್ಧಿಗಳು ಪರಸ್ಪರ ಟಾರ್ಗೆಟ್‌ ಮಾಡಲು ಶುರು ಮಾಡಿದ್ದಾರೆ. ಅದರಲ್ಲಿ ಸ್ನೇಹಿತ್‌ ಹಾಗೂ ಬಾಗ್ಯಶ್ರೀ ಕೂಡ ಒಬ್ಬರು. ಸ್ನೇಹಿತ್‌ ಅವರು ಸದಾ ಭಾಗ್ಯಶ್ರೀ ಅವರನ್ನು ಟಾರ್ಗೆಟ್‌ ಮಾಡುತ್ತಲೇ ಇರುತ್ತಾರೆ. ಯಾರದ್ದೋ ವಿಷಯಕ್ಕೆ ಭಾಗ್ಯಶ್ರೀಗೆ ಕಳಪೆ ಪಟ್ಟ ಕೊಟ್ಟಿದ್ದಾರೆ ಸ್ನೇಹಿತ್. ಇನ್ನು ಭಾಗ್ಯಶ್ರೀ ಕೂಡ ಈ ವಿಚಾರಕ್ಕೆ ಅತ್ತಿದ್ದಾರೆ.

ಸ್ನೇಹಿತ್‌ ಹೇಳಿದ್ದೇನು?

ʻʻಟಾಸ್ಕ್‌ನಲ್ಲಿ ಭಾಗ್ಯಶ್ರೀ ಅವರು ನನಗೆ ಬರುತ್ತೆ ಅಂತ ಹೋದ್ರು. ಆದರೆ ಸಮಯ ವಿಚಾರಕ್ಕೆ ಸೋತರು. ಇನ್ನು ಮನೆಯ ವಿಚಾರಕ್ಕೆ ಬಂದರೆ, ಬೇಡದೇ ಇರುವ ವಿಚಾರದಲ್ಲಿ ಮೂಗು ತೋರಿಸುವುದು ನನಗೆ ಇಷ್ಟವಾಗಿಲ್ಲʼʼ ಎಂದರು. ಭಾಗ್ಯಶ್ರೀ ಕೂಡ ಈ ಬಗ್ಗೆ ಮಾತನಾಡಿ ʻʻಬೇಡದೇ ಇರುವ ವಿಚಾರದಲ್ಲಿ ಮೂಗು ತೋರಿಸುವುದು ಅಂದರೆ ಏನು ಅರ್ಥ? ಮನೆಯವರ ಮುಂದೆ ಹೇಳಿʼʼ ಎಂದರು. ಆದರೂ ಭಾಗ್ಯಶ್ರೀ ಅವರು ಸ್ನೇಹಿತ್‌ ಅವರಿಗೆ ಕೇಳುವುದು ಬಿಟ್ಟಿಲ್ಲ. ತಮ್ಮ ಸರದಿ ಬಂದಾಗ ಭಾಗ್ಯಶ್ರೀ ಅವರು ʻಇನ್ನೊಬ್ಬರ ಜೀವನದಲ್ಲಿ ಮೂಗು ತೂರಿಸ್ತಾರೆ ಅಂದರೆ ಏನು ಅರ್ಥ? ಆ ತರ ಹೇಳುವಾಗ ನಿಮಗೆ ಮಾತ್ರ ಎಂದು ಹೇಳಬೇಕು. ಇನ್ನೊಬ್ಬರ ಜೀವನದಲ್ಲಿ ಎಂದು ಹೇಳಬಾರದು. ʻನನಗೆʼ ಎಂದು ಕನ್ನಡದಲ್ಲಿ ಒಂದು ವರ್ಡ್‌ ಇದೆ. ನನಗೆ ಎಂದು ಹೇಳಿ. ಏನಾದರೂ ಒಂದು ಪಾಯಿಂಟ್‌ ಔಟ್‌ ಮಾಡಬೇಕು ಎಂದು ಹುಡುಕ್ತಾ ಇದ್ದರೆ, ದಯವಿಟ್ಟು ಬಿಟ್ಟು ಬಿಡಿ ಅದನ್ನʼʼ ಎಂದಿದ್ದಾರೆ.

ಹೌದು ಪಾಯಿಂಟ್‌ ಔಟ್‌ ಮಾಡ್ತೀನಿ

ಸ್ನೇಹಿತ್‌ ಕೂಡ ಈ ಬಗ್ಗೆ ಮಾತನಾಡಿ ʻʻನನ್ನ ಜೀವನದಲ್ಲಿ ನೀವು ಮೂಗು ತೋರಿಸಿದ್ದಕ್ಕೆ ನಾನು ಹೇಳಿದ್ದು. ನಿಮಗೆ ಅದನ್ನ ತೆಗೆದುಕೊಳ್ಳುವುದಕ್ಕೆ ಆಗಿಲ್ಲ ಅಂದ್ರೆ ಬಿಟ್ಟಾಕಿ. ಇನ್ನೊಬ್ಬರ ಜೀವನ ಅಂದರೆ ನನ್ನ ಜೀವನ. ನಾನು ನನ್ನ ಸೆಂಟೆನ್ಸ್‌ನ ಹೇಗೆ ಬೇಕಾದರೂ ಫ್ರೇಮ್‌ ಮಾಡ್ಕೋತ್ತೀನಿ. ಹೌದು ಪಾಯಿಂಟ್‌ ಔಟ್‌ ಮಾಡ್ತೀನಿʼʼ ಎಂದು ಹೇಳಿದರು.

ಇದನ್ನೂ ಓದಿ: BBK SEASON 10: ʻರಾಣಿʼ ಪಟ್ಟ ಪಡೆದ ತನಿಷಾ ಜೈಲಿಗೆ; ಉತ್ತಮ ತುಕಾಲಿ ಸಂತೋಷ್‍‍ಗೆ!

ಇತ್ತ ಸ್ನೇಹಿತ್‌ ಅವರು ನಮ್ರತಾ ಮುಂದೆ ಅಸಲಿ ಸತ್ಯವನ್ನು ರಿವೀಲ್‌ ಮಾಡಿದ್ದಾರೆ. ನಮ್ರತಾ ಜತೆ ಸ್ನೇಹಿತ್‌ ಮಾತನಾಡಿ ʻʻಕಾರ್ತಿಕ್‌ ಜತೆ ನಮ್ರತಾ ಡೇಟ್‌ಗೆ ಹೋಗ್ತಾರಂತೆ ಅಂತ ನನ್ನತ್ರ ಅಂದ್ರು. ಅದು ನನ್ನನ್ನು ಉರ್‌ಸೋಕೆ ಹೀಗೆ ಅಂದಿದ್ದಾರೆʼʼ ಎಂದರು. ನಮ್ರತಾ ಈ ಬಗ್ಗೆ ʻʻನಾವು ಕಾಮಿಡಿ ಮಾಡ್ತೀವಿ. ಅವರು ಕಾಲು ಎಳೆದಿದ್ದಾರೆ. ಅದರಲ್ಲಿ ಏನಿದೆ? ನಿಮಗೆ ಅದಕ್ಕಿಂತ ಮುಂಚೇನೇ ಅವರ ಜತೆ ಸಮಸ್ಯೆ ಇದೆ. ನೀವು ಅವರ ಜತೆ ಮಾತನಾಡಿ. ನೀವೇ ಎಲ್ಲರನ್ನು ಸಂಧಾನ ಮಾಡ್ತೀರಾ. ನಿಮ್ಮದು ನೀವು ಮಾಡ್‌ಕೊಳ್ಳಿಕೆ ಆಗಲ್ವಾ?ʼʼ ಎಂದು ಪ್ರಶ್ನೆ ಇಟ್ಟರು.

ಇತ್ತ ಭಾಗ್ಯಶ್ರೀ ಅವರು ಮನೆಯವರ ಮುಂದೆ ಕಣ್ಣೀರಿಟ್ಟಿದ್ದಾರೆ. ʻʻಕಾರ್ತಿಕ್‌ ಮತ್ತೆ ನಿಮ್ಮನ್ನು ರೇಗಿಸುವಾಗ ನಾನು ಒಂದು ಮಾತಾಡ್ದೆ. ನಾನು ರೇಗಿಸಿದೆ. ಅದು ಏನಾದ್ರೂ ನಿಮಗೆ ಹರ್ಟ್‌ ಆಗುತ್ತಿದ್ದರೆ ಅದನ್ನ ಆ ಕ್ಷಣಕ್ಕೆ ಹೇಳಬೇಕು. ಫಿಲ್ಮಿ ಎಂತಲೂ ಅಂದೆ ನಾನು. ಅದನ್ನು ತೆಗೆದುಕೊಂಡು ಬಂದು ಹೀಗೆ ಮೂಗು ತೂರ್‌ಸ್ತಿದ್ದಾರೆ ಎಂದರೆ ಸರಿಯಿಲ್ಲ. ಸುಮ್ಮನೆ ನಾನು ಕುತ್‌ಕೊಂಡ್ರೂ ಅವರು ಸುಮ್ಮನೆ ಕೂತಿದ್ದಾರೆ, ಒಬ್ಬರೇ ಇರ್ತಾರೆ ಅಂತಾರೆ. ಮಿಂಗಲ್‌ ಆಗಕ್ಕೆ ಬಂದರೆ ಈ ತರ ಮಾತುಗಳು. ಸಿರಿ ಬಿಟ್ಟರೆ ಯಾರ್‌ ಹತ್ರಾನು ಮಾತನಾಡಲ್ಲ ಅಂತಾರೆʼʼ ಎಂದು ಕಣ್ಣೀರಿಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version