Site icon Vistara News

Bigg Boss Kannada | ಅಮ್ಮನ ನೆನೆದು ಭಾವುಕರಾದ ಸ್ಫೂರ್ತಿ ಗೌಡ

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಒಟಿಟಿ (Bigg Boss Kannada) ಇದೀಗ ಇಂಟ್ರೆಸ್ಟಿಂಗ್‌ ಎಪಿಸೋಡ್‌ ಮೂಲಕ ಗಮನ ಸೆಳೆಯುತ್ತಿದೆ. ಸ್ಫೂರ್ತಿ ಗೌಡ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದು, ಭಾವುಕರಾಗಿ ಅಮ್ಮನ ಬಗ್ಗೆ ಹೇಳಿಕೊಂಡಿದ್ದಾರೆ.

“ನಾನೊಬ್ಬ ಪ್ಯಾಂಪರ್ಡ್‌ ಕಿಡ್‌. ಕಷ್ಟ ಎಂದರೆ ನನಗೆ ಗೊತ್ತಿಲ್ಲ” ಎಂದು ಹೇಳಿಕೊಂಡಿರುವ ಸ್ಫೂರ್ತಿ, “ಟಿವಿ ಮುಂದೆ ಊಟಕ್ಕೆ ಕುಳಿತರೆ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ನನ್ನಮ್ಮ ಅಷ್ಟು ಚೆನ್ನಾಗಿ ಸಾಕಿದ್ದರು. ಇದ್ದಕ್ಕಿದ್ದ ಹಾಗೇ ಅಮ್ಮ ಹಾಸಿಗೆ ಹಿಡಿದರು. ನಂತರ ಅವರ ಮಾತು ನಿಂತು ಹೋಯ್ತು, ನಡೆದಾಡುವುದನ್ನೂ ನಿಲ್ಲಿಸಿದರು” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಆರ್ಯವರ್ಧನ್‌, ಉದಯ್‌ ಜಟಾಪಟಿ: ಬೀಸೋ ದೊಣ್ಣೆಯಿಂದ ಯಾರು ಪಾರು?

ʻʻಮೊದಲು ನಮಗೆ ಹಣದ ಕೊರತೆ ಇರಲಿಲ್ಲ. ವೆಲ್‌ ಸೆಟಲ್‌ ಆಗಿದ್ದೆವು. ಒಂದೇ ಬಾರಿ ಬೀದಿಗೆ ಬಿದ್ದೆವು. ನನ್ನ ತಾಯಿಯ ಬೆಲೆ ಗೊತ್ತಾಗಿದ್ದು ಅಲ್ಲೇ. ಅದೇ ಸಮುಯದಲ್ಲಿ ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫ್‌ ಶೋ ಆಫರ್‌ ಬಂತು. ಇಂಡಸ್ಟ್ರಿಗೆ ನಾನು ಬಂದಿದ್ದಕ್ಕೆ ಅಮ್ಮ ಶಾಕ್‌ ಆಗಿದ್ದರು. ಅಮ್ಮನ ಸಾವಿಗೆ ನಾನೇ ಕಾರಣ ಅಂತೆಲ್ಲ ಮಾತುಗಳು ಬಂದವುʼʼ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ | Bigg Boss Kannada | ದೊಡ್ಡ ಮನೆಯಲ್ಲಿ ನಂದಿನಿಯನ್ನು ಜಸ್ವಂತ್‌ Ignore ಮಾಡಿದ್ದೇಕೆ?

Exit mobile version