Site icon Vistara News

BBK SEASON 10:  ಎಲ್ಲರಿಗೂ ಮಂಕು ಬೂದಿ ಎರಚಿಕೊಂಡು ಇಲ್ಲೇ ಇದ್ದಾನೆ; ಪ್ರತಾಪ್‌ ಮೇಲೆ ವಿನಯ್‌ ಕೆಂಡ!

sprinkling ashes on everyone vinay blame on prathap

ಬೆಂಗಳೂರು: ʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ ಎಂದು ಪ್ರತಾಪ್‌ ಹೇಳಿರುವ ಮಾತು ವಿನಯ್‌ ಅವರನ್ನು ಕೆರಳಿಸಿದೆ. ಇಷ್ಟೂ ದಿನ ಅಗ್ರೆಸಿವ್‌ ಆಡಲ್ಲ ಎನ್ನುತ್ತಿದ್ದ ವಿನಯ್‌ ಮನೆಯಲ್ಲಿ ಪ್ರತಾಪ್‌ ವಿಚಾರವಾಗಿ ಕ್ಷಣ ಕ್ಷಣಕ್ಕೂ ಕೆಂಡವಾಗುತ್ತಿದ್ದಾರೆ. ಇದೀಗ ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದೆ. ವಿನಯ್‌ ಅವರು ಪ್ರತಾಪ್‌ ಬಗ್ಗೆ ʻʻಅಮಾಯಕನ ತರ ಎಲ್ಲರಿಗೂ ಬೂದಿ ಎರಚಿಕೊಂಡು ಈ ಮನೆಯಲ್ಲಿ ಇರೋದು ಪ್ರತಾಪ್‌ʼʼಎಂದು ವಿನಯ್‌ ಹೇಳಿಕೆ ನೀಡಿ ಅಬ್ಬರಿಸಿದ್ದಾರೆ.

ವಿನಯ್‌ ಈಗ ಪ್ರತಾಪ್‌ ಬಗ್ಗೆ ಕೋಪಗೊಂಡಿದ್ದಾರೆ. ಅಗ್ರೆಸಿವ್‌ ಆಗಿ ಮತ್ತೆ ಆಡಲು ಶುರು ಮಾಡಿದ್ದಾರೆ. ಮನೆಯಲ್ಲಿ ಪ್ರತಾಪ್‌ ಹಾಗೂ ವಿನಯ್‌ ನಡುವೆ ಮಾತಿನ ಚಕಮಕಿ ನಡೆದಿದೆ. ವಿನಯ್‌ ಮಾತನಾಡಿ ʻʻಅಮಾಯಕನ ತರ ಎಲ್ಲರಿಗೂ ಬೂದಿ ಎರಚಿಕೊಂಡು ಈ ಮನೆಯಲ್ಲಿ ಇರೋದು ಪ್ರತಾಪ್‌ʼʼಎಂದಿದ್ದಾರೆ. ಪ್ರತಾಪ್‌ ಕೂಡ ʻʻನೀವು ಮನಬಂದಂತೆ ಮಾತನಾಡೋ ಹಾಗಿಲ್ಲ. ಪರಿಣಾಮ ಸರಿಯಿರಲ್ಲʼʼ ಎಂದಿದ್ದಾರೆ. ವಿನಯ್‌ ಕೂಡ ಪ್ರತಾಪ್‌ ಮೈ ಮೇಲೆ ಹೋಗಿ ʻʻಏನೋ ಮಾಡ್ತೀಯಾ?ʼ ಇವನು ಯಾವನೋ ನನಗೆ ಹೇಳೋಕೆ?. ನೀನು ಮುಗ್ಧನಾಗಿ ಬಂದು ಇಲ್ಲಿ ನಾಟಕ ಮಾಡ್ಕೊಂಡು ಆಡೋದು ನನಗೆ ಗೊತ್ತಿಲ್ವಾ? ಇನ್ನು ಎಷ್ಟೋ ನಾಟಕ ಮಾಡ್ತೀಯಾ ಈ ಮನೇಲಿ? ಎಂದು ಏಕವಚನದಲ್ಲಿ ಕೂಗಿದ್ದಾರೆ. ಇನ್ನು ಪ್ರತಾಪ್‌ ಕೂಡ ಪರಿಣಾಮ ಸರಿಯಿರಲ್ಲ ಎಂದೇ ಕೂಗಿದ್ದಾರೆ. ಮನೆಯವರೆಲ್ಲರಿಗೂ ಇವರಿಬ್ಬರನ್ನು ತಪ್ಪಿಸಲು ಹರಸಾಹಸ ಪಟ್ಟಿದ್ದಾರೆ.

ಇದನ್ನೂ ಓದಿ: BBK SEASON 10: ಪ್ರತಾಪ್‌ ಮಾತಿಗೆ ಸುದೀಪ್‌ ಮುಂದೆ ಭಾವುಕರಾದ ವಿನಯ್‌!

ಡ್ರೋನ್‌ ಪ್ರತಾಪ್‌ ಹೀಗೆ ಹೇಳಿದ್ದೇಕೆ?

ʻಯಾರು ಯಾವ ಪುಸ್ತಕ ಬರೆದರೆ ಸೂಕ್ತ’ ಎಂಬ ಚಟುವಟಿಕೆಯನ್ನ ಕಿಚ್ಚ ಸುದೀಪ್‌ ನೀಡಿದ್ದರು. ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ?’’ ಎಂಬ ಹೆಸರಿನ ಪುಸ್ತಕವನ್ನು ವಿನಯ್‌ ಅವರಿಗೆ ಪ್ರತಾಪ್‌ ನೀಡಿದ್ದರು. ಬಳಿಕ ಕಾರಣವನ್ನು ನೀಡಿ ʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್‌ ಹೇಳಲಿಲ್ಲ’’ ಎಂದು ಡ್ರೋನ್ ಪ್ರತಾಪ್‌ ಹೇಳಿದ್ದರು. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಮ್ಮನಾಗಿದ್ದರು.

ಆದರೆ ಶನಿವಾರದ ಎಪಿಸೋಡ್​ ಬಳಿಕ ವಿನಯ್ ಈ ವಿಷಯದ ಬಗ್ಗೆ ಪ್ರತಾಪ್ ಅವರಿಗೆ ಪ್ರಶ್ನೆ ಮಾಡಿದರು. ಪ್ರತಾಪ್, ‘ನಾನು ಈ ಮನೆಯಲ್ಲಿ ಏನು ನೋಡಿದ್ದೇನೆಯೋ ಅದನ್ನು ಹೇಳಿದ್ದೇನೆ’ ಎಂದರು. ʻʻಪ್ರತಾಪ್ ಅವರನ್ನು ಚೀಪ್ ಸ್ಕ್ಯಾಮರ್‌ ಎಂದು ವಾಗ್ದಾಳಿ ಮಾಡಿದರು. ಈ ಜಗಳ ಆದ ನಂತರ ಸುದೀಪ್‌ ಈ ಬಗ್ಗೆ ಪ್ರಸ್ತಾವನೆ ಮಾಡಿದರು.

ʻʻಇವರ ಜತೆ ಇದ್ದು, ತುಳಿದು ನಾನು ಮುಂದೆ ಹೋದೆ ಎನ್ನುವ ಪ್ರತಾಪ್‌ ಮಾತು ಸರಿಯಿರಲಿಲ್ಲʼ ಎಂದು ಸುದೀಪ್‌ ಮುಂದೆ ವಿನಯ್‌ ಹೇಳಿದರು. ಅಷ್ಟೇ ಅಲ್ಲ ಈ ರೀತಿಯ ಮಾತುಗಳನ್ನು ಹೇಳಿದಾಗ ನೋವಾಗುತ್ತದೆ ಎಂದು ಭಾವುಕರಾದರು. ಆದರೆ ಪ್ರತಾಪ್ ಮಾತ್ರ ತಮ್ಮ ಮಾತುಗಳಿಂದ ಹಿಂದೆ ಸರಿಯಲಿಲ್ಲ, ವಿನಯ್ ಅವರ ಪದಬಳಕೆ, ಅವರು ಎದುರಿಗಿರುವವರನ್ನು ಮಾತನಾಡಿಸುವ ರೀತಿ ಅಹಂಕಾರದಿಂದ ಕೂಡಿರುತ್ತದೆ. ಅವರು ಸಾಕಷ್ಟು ಬಾರಿ ಸ್ಪರ್ಧಿಗಳ ಬಗ್ಗೆ ಏನೇನೋ ಮಾತನಾಡಿದ್ದಾರೆ ಎಂದಿದ್ದಾರೆ. ಈ ರೀತಿ ಮಾತಿನ ಚಕಮಕಿ ಆದ ಬಳಿಕ ಶಾಂತವಾಗಿದ್ದ ವಿನಯ್‌ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version