Site icon Vistara News

BBK Season 10: ಇಂತಹ ವ್ಯಕ್ತಿತ್ವ ಇರೋರು ʻಗುಡ್ ಇನ್ ಬೆಡ್ʼ ಅಂತೆ; ನಮ್ರತಾ ಅಡಲ್ಟ್ ಟಾಕ್!

Such a personality is like good in bed Humility Adult Talk by namratha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎಂಟನೇ ವಾರ ನಮ್ರತಾ ಅವರ ಭಾರಿ ಚರ್ಚೆಯಲ್ಲಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಅಡಲ್ಟ್‌ ಟಾಕ್‌ ಹೊಸತೇನಲ್ಲ. ಈ ಹಿಂದೆ ಸುದೀಪ್‌ ಅವರು ಅದೆಷ್ಟೋ ಬಾರಿ ಇಂತಹ ಮಾತುಗಳಿಗೆ ಸಖತ್ ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾರೆ. ಆದರೀಗ ನಮ್ರತಾ ಅವರ ಬಾಯಲ್ಲಿಯೂ ಇಂತಹದ್ದೇ ಮಾತು ಕೇಳಿ ಬಂದಿದೆ.

ವಿನಯ್, ಕಾರ್ತಿಕ್, ನಮ್ರತಾ ಹಾಗೂ ಅವಿನಾಶ್ ಅಡುಗೆ ಮನೆಯ ಕಟ್ಟೆಯ​ ಮೇಲೆ ಕುಳಿತಿದ್ದರು. ಈ ವೇಳೆ ಊಟದ ಬಗ್ಗೆ ಚರ್ಚೆ ಬಂತು.‘ಮಶ್ರೂಮ್ ಘೀ ರೋಸ್ಟ್ ಚೆನ್ನಾಗಿರುತ್ತದೆ’ ಎಂದರು ಕಾರ್ತಿಕ್. ಇದನ್ನು ಕೇಳಿ ನಮ್ರತಾ ವಿಚಿತ್ರವಾದ ಎಕ್ಸ್‌ಪ್ರೆಶನ್‌ ನೀಡಿದರು. ಇದನ್ನು ಕಾರ್ತಿಕ್‌ ಅವರು ಹೇಲಿ ನಮ್ರತಾ ಅವರಿಗೆ ಚುಡಾಯಿಸಿದರು. ನಮ್ರತಾ ಕೂಡ ಕಾರ್ತಿಕ್‌ಗೆ ಕಚಗುಳಿ ಇಟ್ಟರು. ಆಗ ನಮ್ರತಾ ಅವರು ಕಾರ್ತಿಕ್​ಗೆ ಕಚಗುಳಿ ಇಡೋಕೆ ಪ್ರಯತ್ನಿಸಿದರು. ಆದರೆ, ಅವರಿಗೆ ಕಚಗುಳಿ ಆಗಲೇ ಇಲ್ಲ. ‘ಕಚಗುಳಿ ಆಗುತ್ತದೆ ಎಂದರೆ ಅವರು ಗುಡ್ ಇನ್​..ಇದು ವೈಜ್ಞಾನಿಕವಾಗಿ ಸಾಬೀತಾಗಿದೆ’ ಎಂದರು ವಿನಯ್. ‘ಗುಡ್ ಇನ್ ವಾಟ್..’ ಎಂದರು ಪವಿ. ಇದಕ್ಕೆ ನಮ್ರತಾ, ‘ಗುಡ್ ಇನ್ ಬೆಡ್’ ಎಂದರು. ಆಗ ಕಾರ್ತಿಕ್ ಅವರು, ‘ನನಗೆ ತುಂಬಾನೇ ಕಚಗುಳಿ ಆಗುತ್ತದೆ’ ಎಂದು ನಕ್ಕರು.ಈ ರೀತಿಯ ಅಡಲ್ಟ್‌ ಟಾಕ್‌ಗೆ ನೆಟ್ಟಿಗರು ಫ್ಯಾಮಿಲಿ ಶೋ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ವರ್ತೂರ್ ಸಂತೋಷ್ ಬಾಯಲ್ಲೇ ಅವರ ಮದುವೆ ಕತೆ ಕೇಳಿ!

ಬಿಗ್‌ಬಾಸ್ ಮನೆಗೆ ಪವಿ ಮತ್ತು ಅವಿನಾಶ್‌ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸದೊಂದು ಗಾಳಿ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜೊತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲನವನ್ನು ತಪ್ಪಿಸುತ್ತಿದೆ. ಟಾಸ್ಕ್‌ಗಳನ್ನು ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್‌ ಟಾಸ್ಕ್‌ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್‌ಗಳು ಎದುರಾಯ್ತು. ಪ್ರತಾಪ್‌ ಹೀನಾಯವಾಗಿ ಸೋಲುಂಡರು. ವಿಕ್ರಾಂತ್‌ ತಂಡ ಜಯಭೇರಿ ಬಾರಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version